ETV Bharat / business

4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್‌ ಬೆಲೆ 50 ರೂ.ಏರಿಕೆ - ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ

4 ತಿಂಗಳ ಬಳಿಕ ಪೆಟ್ರೋಲ್‌, ಡೀಸಲ್‌ ಬೆಲೆಯಲ್ಲಿ ಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ ಮೇಲೆ 50 ರೂಪಾಯಿ ಹೆಚ್ಚಿಸಲಾಗಿದೆ.

Petrol, diesel prices hike after 137 days
4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್‌ ಬೆಲೆ 50 ರೂ.ಏರಿಕೆ
author img

By

Published : Mar 22, 2022, 9:11 AM IST

ನವದೆಹಲಿ: ಬರೋಬ್ಬರಿ 137 ದಿನಗಳ ನಂತರ ತೈಲ ಕಂಪನಿಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ, ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಿವೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.21 ರೂ.ಆಗಿದ್ದು, ಲೀಟರ್‌ ಡೀಸೆಲ್‌ಗೆ 87.47 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 110.78 ರೂ.ಇದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 94.94 ರೂಪಾಯಿ ನೀಡಬೇಕು.

2021ರ ನವೆಂಬರ್‌ 2ರ ಬಳಿಕ ಇದೇ ಮೊದಲ ಬಾರಿ ಇಂಧನ ಬೆಲೆ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿನ ಚಂಚಲತೆಯ ಹೊರತಾಗಿಯೂ ಇಂಧನ ದರಗಳನ್ನು ಬಾಧಿಸದಂತೆ ಸರ್ಕಾರವು ಸುಂಕ ಕಡಿತ ಮಾಡಿತ್ತು. ನವೆಂಬರ್‌ನಲ್ಲಿ ಕೊನೆಯ ಏರಿಕೆಯಾದ ನಂತರ ಕಚ್ಚಾ ತೈಲ ಬೆಲೆಗಳು ಶೇ.25 ರಷ್ಟು ಹೆಚ್ಚಾಗಿದೆ.

ಮತ್ತೊಂದೆಡೆ ಅಡುಗೆ ಅನಿಲದ ಬೆಲೆಯನ್ನೂ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ದೆಹಲಿ, ಮುಂಬೈ ಮತ್ತು ಇತರ ನಗರಗಳಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ವಾರ ಸರ್ಕಾರವು ಸಗಟು ಡೀಸೆಲ್ ಬೆಲೆಯನ್ನು ಲೀಟರ್‌ಗೆ 25 ರೂಪಾಯಿಗಳಷ್ಟು ಹೆಚ್ಚಿಸಿದೆ. ಜನವರಿಯಿಂದ ವಿಮಾನ ಇಂಧನವು ಶೇ. 50 ರಷ್ಟು ಹೆಚ್ಚಾಗಿದೆ.

ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಬೆಲೆ ಏರಿಕೆಯು ಹೆಚ್ಚು ನಿರೀಕ್ಷಿತವಾಗಿತ್ತು, ಆದರೂ ಬಜೆಟ್ ಅಧಿವೇಶನದ ದ್ವಿತೀಯಾರ್ಧದಿಂದಲ್ಲೇ ತೈಲ ಹಾಗೂ ಅನಿಲ ಬೆಲೆ ಬೆಲೆ ಹೆಚ್ಚಳವಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ ದಾಟಿದೆ. ಉಕ್ರೇನ್ ಬಿಕ್ಕಟ್ಟಿನ ಪೂರೈಕೆಯ ಅನಿಶ್ಚಿತತೆಯ ಮೇಲೆ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ $140 ಕ್ಕೆ ತಲುಪಿದ್ದವು. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕವಾಗಿದೆ. ಶೇ. 85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಉದ್ಯೋಗಿಗಳ ಪಿಎಫ್​ ಬಡ್ಡಿದರ ಕಡಿತ ನಿರ್ಧಾರ ಈಗಿನ ಅಗತ್ಯ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.