ETV Bharat / business

75,000 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ.. ಕರ್ನಾಟಕಕ್ಕೆ ಸಿಕ್ತು ಇಷ್ಟೊಂದು ಹಣ - Govt releases Rs 75,000 crore GST

ಜಿಎಸ್​ಟಿ ಆದಾಯ ಕೊರತೆ ಸರಿದೂಗಿಸಲು ಕೇಂದ್ರ ಹಣಕಾಸು ಇಲಾಖೆ ಇದೀಗ 75,000 ಕೋಟಿ ರೂ. ರಿಲೀಸ್ ಮಾಡಿದೆ.

GST compensation
GST compensation
author img

By

Published : Jul 16, 2021, 6:24 AM IST

Updated : Jul 16, 2021, 6:53 AM IST

ನವದೆಹಲಿ: ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​ಟಿ ಹಣ ರಿಲೀಸ್ ಮಾಡಿದ್ದು, ಒಟ್ಟು 75 ಸಾವಿರ ಕೋಟಿ ರೂ. ರಿಲೀಸ್ ಮಾಡಿದೆ. ಬಿಡುಗಡೆಯಾಗಿರುವ ಹಣದಲ್ಲಿ ಕರ್ನಾಟಕಕ್ಕೆ 8,542 ಕೋಟಿ ರೂ, ಮಹಾರಾಷ್ಟ್ರ 6,501 ಕೋಟಿ ರೂ, ಗುಜರಾತ್​ 6,151 ಕೋಟಿ ರೂ ಪಡೆದುಕೊಂಡಿದ್ದು, ಉಳಿದಂತೆ ಹರಿಯಾಣ, ಕೇರಳ ಹಾಗೂ ಪಂಜಾಬ್​ಗಳಿಗೂ ಹೆಚ್ಚಿನ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆದಾಯದಲ್ಲಿನ ಕೊರತೆ ಸರಿದೂಗಿಸಲು ಜಿಎಸ್​​ಟಿ ಹಣ ರಿಲೀಸ್ ಮಾಡಲಾಗಿದ್ದು, ಕಳೆದ ಮೇ 28ರಂದು ನಡೆದಿದ್ದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ 1.59 ಲಕ್ಷ ಕೋಟಿ ರೂ. ಸಾಲ ಪಡೆದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​ಟಿ ಹಣ ನೀಡುವುದಾಗಿ ಹೇಳಿತ್ತು. ಇದೀಗ ಕೊರತೆಯ ಮೊತ್ತದ ಅರ್ಧದಷ್ಟು ಹಣ ಇದೀಗ ರಿಲೀಸ್ ಮಾಡಲಾಗಿದ್ದು, ಉಳಿದ ಮೊತ್ತ 2021-22ರ ದ್ವಿತೀಯಾರ್ಧದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ದೇವರಿಗೆ ಮಾತ್ರವಲ್ಲ, ಪೂಜಾರಿಗೋಸ್ಕರ ದೇವಾಲಯ ನಿರ್ಮಿಸಿದ ಗ್ರಾಮಸ್ಥರು!

ಈ ಹಿಂದೆ ನಡೆದಿದ್ದ ಸಭೆಯಲ್ಲಿ ಜಿಎಸ್​ಟಿ ಪರಿಹಾರದ ಬದಲಾಗಿ ಸಾಲ ಸೌಲಭ್ಯದ ಅಡಿ ಪರಿಹಾರ ಮೊತ್ತ ಪಡೆದುಕೊಳ್ಳಲು ಸೂಚನೆ ನೀಡಲಾಗಿತ್ತು.

Last Updated : Jul 16, 2021, 6:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.