ನವದೆಹಲಿ : ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಶನಿವಾರ ಡೀಸೆಲ್ ಬೆಲೆಯಲ್ಲಿ 19-21 ಪೈಸೆಯಷ್ಟು ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ 71.82 ರೂ.ಗೆ ಮಾರಾಟವಾಗಿದ್ದು, ಶುಕ್ರವಾರ ಲೀಟರ್‌ಗೆ 72.02 ರೂ.ಯಷ್ಟಿತ್ತು.
ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಂಧನದ ಬೆಲೆ ಕ್ರಮವಾಗಿ ಲೀಟರ್‌ಗೆ 78.27, 77.21 ಮತ್ತು 75.32 ರೂ.ನಷ್ಟಿದೆ. ಹಿಂದಿನ ಮಟ್ಟಕ್ಕಿಂತ ಕ್ರಮವಾಗಿ 21 ಪೈಸೆ, 19 ಪೈಸೆ ಮತ್ತು 20 ಪೈಸೆ ಇಳಿಕೆಯಾಗಿದೆ. ಈ ಮೂಲಕ ಸತತ ಎಂಟು ಬಾರಿ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.
ಕೋವಿಡ್-19 ಸೋಂಕಿತರ ಏರಿಕೆಯು ತೈಲ ಬೇಡಿಕೆ ಕುಂಠಿತಗೊಳಿಸಿದೆ. ಮಾರುಕಟ್ಟೆಯಲ್ಲಿ ಇಂಧನ ಮಾರಾಟವು ಹೊಳಪು ಕಳೆದುಕೊಂಡಿದೆ. ಹೀಗಾಗಿ, ಜಾಗತಿಕ ತೈಲ ಬೆಲೆಗಳು ಸೌಮ್ಯವಾಗುತ್ತಿರುವ ಹಿನ್ನೆಲೆ ಸಾರಿಗೆ ಇಂಧನ ಬೆಲೆಗಳ ಇತ್ತೀಚಿಗೆ ಕುಸಿತ ಕಾಣುತ್ತಿವೆ.
ಪೆಟ್ರೋಲ್ ಬೆಲೆಯು ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಾದ್ಯಂತ ಕ್ರಮವಾಗಿ 81.14, 87.82, 84.21 ಮತ್ತು 82.67 ರೂ.ಯಷ್ಟಿದೆ.