ನವದೆಹಲಿ: ಆರ್‌ಎಂಎಸ್ (ರಬಿ ಮಾರ್ಕೆಟಿಂಗ್ ಸೆಷನ್) 2021-22ಕ್ಕೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಗೋಧಿ ಸಂಗ್ರಹ ಪ್ರಾರಂಭವಾಗಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (ಸಿಎಪಿಎಫ್‌ಡಿ) ತಿಳಿಸಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ದೆಹಲಿ, ಚಂಡೀಗಢ ಮತ್ತು ಗುಜರಾತ್ ರಾಜ್ಯಗಳಲ್ಲಿ ಗೋಧಿ ಖರೀದಿ ಈಗಾಗಲೇ ಪ್ರಾರಂಭವಾಗಿದೆ. ಸಿಎಪಿಎಫ್‌ಡಿ ಸಚಿವಾಲಯದ ಪ್ರಕಾರ, 2021 ಏಪ್ರಿಲ್ 11ರವರೆಗೆ 29.24 ಎಲ್‌ಎಂಟಿ ಗೋಧಿಯನ್ನು ಕನಿಷ್ಠ 5774.20 ಕೋಟಿ ರೂ. ಬೆಂಬಲ ದರದಲ್ಲಿ ಸಂಗ್ರಹಿಸಲಾಗಿದೆ. ಇದರಿಂದ 3,30,046 ರೈತರಿಗೆ ಅನುಕೂಲವಾಗಿದೆ.
ಇದೇ ಸಮಯದಲ್ಲಿ ಕೆಎಂಎಸ್ (ಖರೀಫ್ ಮಾರ್ಕೆಟಿಂಗ್ ಸೆಷನ್) 2020-21ರ ಅಡಿ ರಾಜ್ಯಗಳಲ್ಲಿ ಭತ್ತದ ಖರೀದಿ ನಡೆಯುತ್ತಿದೆ. 2021ರ ಏಪ್ರಿಲ್ 11ರ ವೇಳೆಗೆ 702.05 ಎಲ್ಎಂಟಿ ಭತ್ತ ಖರೀದಿಸಲಾಗಿದೆ. 1,32,548.26 ಕೋಟಿ ರೂ. ಎಂಎಸ್‌ಪಿ ನೀಡಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಹರಿಯಾಣ ಮತ್ತು ತಮಿಳುನಾಡಿನಲ್ಲಿ ಕೆಎಂಎಸ್ 2020-21 ಮತ್ತು ಆರ್‌ಎಂಎಸ್ 2021ರಲ್ಲಿ 107.08 ಎಲ್‌ಎಂಟಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳನ್ನು ಬೆಲೆ ಬೆಂಬಲ ಯೋಜನೆ (ಪಿಡಿಎಸ್) ಅಡಿ ಖರೀದಿಸಲಾಗಿದೆ.
ಇದೇ ಸಮಯದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಿಂದ 1.23 ಎಲ್ಎಂಟಿ ಕೊಪ್ರಾ (ದೀರ್ಘಕಾಲಿಕ ಬೆಳೆ) ಖರೀದಿಸಲು ಅನುಮೋದನೆ ನೀಡಲಾಗಿದೆ.
ಕೇಂದ್ರ ಸರ್ಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ 5,29,848.45 ಮೆ.ಟನ್ ಹೆಸರು, ಉದ್ದು, ತೊಗರಿ, ಕಡಲೆ, ಮಸೂರ, ನೆಲಗಡಲೆ, ಸಾಸಿವೆ ಮತ್ತು ಸೋಯಾಬೀನ್ಗಳನ್ನು ಕೆಎಂಎಸ್ 2020-21 ಮತ್ತು ಆರ್‌ಎಂಎಸ್ 2021ರ ಏಪ್ರಿಲ್ 11ರವರೆಗೆ ಸಂಗ್ರಹಿಸಿದೆ. ಈ ಬೆಳೆಗಳನ್ನು 2,790.72 ಕೋಟಿ ರೂ. ನೀಡಿ ರೈತರಿಂದ ಖರೀದಿಸಲಾಗಿದೆ. ಇದರಿಂದ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದ 3,38,097 ರೈತರಿಗೆ ಅನುಕೂಲವಾಗಿದೆ.
ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ರೈತರಿಂದ ಹತ್ತಿಯನ್ನು ಸಹ ಎಂಎಸ್ಪಿಯಲ್ಲಿ ಖರೀದಿಸಲಾಗಿದೆ. 91,89,378 ಬೇಲ್ ಹತ್ತಿಯನ್ನು ಎಂಎಸ್‌ಪಿ 26,719.51 ಕೋಟಿ ರೂ. ನೀಡಲಾಗಿದ್ದು, ಇದರಿಂದ 18,86,498 ರೈತರಿಗೆ ನೆರವಾಗಿದೆ.