ನವದೆಹಲಿ: ಕೋವಿಡ್ 19ನ ಎರಡನೇ ವಿತ್ತೀಯ ಪ್ಯಾಕೇಜ್ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿದೆ.
ತೆರಿಗೆದಾರರ 18,000 ಕೋಟಿ ರೂ. ತೆರಿಗೆ ಬಾಕಿಯನ್ನು ವಿಶೇಷ ಮರುಪಾವತಿ ಮತ್ತು ಡ್ರಾಬ್ಯಾಕ್ ಡಿಸ್ಪೋಸಲ್ ಡ್ರೈವ್ ಮೂಲಕ ವಾಪಸ್ ನೀಡಲಾಗುವುದು. 15,000 ರೂ. ಒಳಗಿನ ವೇತನದಾರರಿಗೆ ತಕ್ಷಣ ಇಪಿಎಫ್ ಹಿಂದಕ್ಕೆ ಮಾಡಲಾಗುವುದು. ಆಗಸ್ಟ್ವರೆಗೆ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
45,000 ಕೋಟಿ ರೂ. ಲಿಕ್ವಿಡಿಟಿ ಇನ್ಫ್ಯೂಷನ್ (ನಗದು ಉತ್ತೇಜಕ) ಅನ್ನು ಮೊದಲ ಶೇ 20ರಷ್ಟು ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. 90,000 ಕೋಟಿ ರೂ. ಲಿಕ್ವಿಡಿಟಿ ಅನುದಾನವನ್ನು ಪವರ್ ಡಿಸ್ಟ್ರಿಬ್ಯೂಷನ್ ಕಂಪನಿಗಳಿಗೆ (ಡಿಸ್ಕಾಂ) ನೀಡಲಾಗುವುದು. ಹಣಕಾಸೇತರ ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಭಾಗಶಃ ಸಾಲ ಭದ್ರತೆ ಯೋಜನೆ ಒದಗಿಸಲಾಗುವುದು ಎಂದರು.
30,000 ಕೋಟಿ ರೂ. ಲಿಕ್ವಿಡಿಟಿ ಯೋಜನೆಗಳನ್ನು ಸಾಲಪಪತ್ರದ ಮೂಲಕ ಎಚ್ಎಫ್ಸಿ ಹಾಗೂ ಕಿರು ಸಾಲದಾತ ಸಂಸ್ಥೆಗಳಿಗೆ ನೀಡಲಾಗುವುದು. ಶಾಸನ ಬದ್ಧ ಇಪಿಎಫ್ ಕೊಡೆಗೆ ತಗ್ಗಿಸಿದೆ ಕೈಗೆ ಸಿಗುವ ವೇತನ ಹೆಚ್ಚಾಗುತ್ತದೆ ಜೊತೆಗೆ ನಗದು ಪ್ರಮಾಣ ಏರಿಕೆ ಆಗುತ್ತದೆ ಎಂದು ಸೀತಾರಾಮನ್ ಅವರು ಹೇಳಿದರು.
ಪಿಎಫ್ ಕೊಡುಗೆಯು ಮೂರು ತಿಂಗಳವರೆಗೆ ಶೇ 12ರಿಂದ ಶೇ 10ಕ್ಕೆ ಇಳಿಸಲಾಗುವುದು. ಮುಂದಿನ 3 ತಿಂಗಳವರೆಗೆ ಕೇಂದ್ರ ಸರ್ಕಾರವು ಇಪಿಎಫ್ ಪಾವತಿಸಲಿದೆ. ಇದು 72 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದರು.