ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ ಜಾಲ (ಜಿಎಸ್‌ಟಿಎನ್) ಜಿಎಸ್‌ಟಿ ಹೆಲ್ಪ್‌ಡೆಸ್ಕ್‌ಗಾಗಿ ನೂತನ ಟೋಲ್-ಫ್ರೀ ಸಂಖ್ಯೆಗೆ ಚಾಲನೆ ನೀಡಿದ್ದು, ಇದು ಪರೋಕ್ಷ ತೆರಿಗೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು 365 ದಿನಗಳು ಕಾರ್ಯನಿರ್ವಹಿಸಲಿದೆ.
ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಸದೃಢವಾಗಿ ಮತ್ತು ಪಾರದರ್ಶಕ ಆಗಿಸುವ ಮೂಲಕ ತೆರಿಗೆದಾರರ ಅನುಭವವನ್ನು ಸುಧಾರಿಸಲು ಜಿಎಸ್‌ಟಿ ಸಹಾಯವಾಣಿ ಸೇವೆ ಲಭ್ಯವಾಗಲಿದೆ ಎಂದು ಜಿಎಸ್‌ಟಿಎನ್ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಎಸ್ಟಿಎನ್ನ ತಂದಿರುವ ಉಚಿತ ಸಹಾವಾಣಿ ಸಂಖ್ಯೆಯು 1800 103 4786 ಆಗಿದ್ದು, ವರ್ಷದ 365 ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಕರೆ ಮಾಡಬಹುದು ಎಂದಿದೆ.
ಹೊಸದಾಗಿ ಪರಿಚಯಿಸಲಾದ ನಂಬರ್ನಿಂದ ಈ ಹಿಂದೆ ಚಾಲ್ತಿಯಲ್ಲಿದ್ದ ಜಿಎಸ್‌ಟಿ ಹೆಲ್ಫ್ ಡೆಸ್ಕನ್ 0120-24888999 ನಂಬರ್ ಸೇವೆಯಿಂದ ಸ್ಥಗಿತಗೊಳಿಸಲಾಗಿದೆ. ತೆರಿಗೆದಾರರು ಹತ್ತು ಭಾಷೆಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಗುಜರಾತ್, ಓಡಿಯಾ, ಮಲಯಾಳಂ, ಪಂಜಾಬ್ ಮತ್ತು ಅಸ್ಸೋಂ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಲಿದೆ.