ETV Bharat / business

ಬೈಕ್​, ಕಾರು, ಗೃಹ ಸಾಲಗಾರರಿಗೆ ಗುಡ್​ ನ್ಯೂಸ್​.. 9 ವರ್ಷದಲ್ಲಿ ಇದೇ ಮೊದಲು.. - ರೆಪೊ ದರ

ಆರ್‌ಬಿಐ ತನ್ನ ಪ್ರಮುಖ ಸಾಲ ದರ ಅಥವಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್​ಗಳಷ್ಟು ಕಡಿತಗೊಳಿಸಿ ಶೇ. 5.15ಕ್ಕೆ ಇಳಿಸಿದೆ. ಈ ಕಡಿತದಿಂದ ಒಂದು ವರ್ಷದ ಅವಧಿಯಲ್ಲಿ ಸಂಚಿತ ಕಡಿತ 135 ಬೇಸಿಸ್​ ಪಾಯಿಂಟ್​ಗಳು ಕಡಿತವಾದಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಡ್ಡಿ ದರ ಇಳಿಸಿದಂತಾಗಿದೆ. ಇದರಿಂದ ಬ್ಯಾಂಕ್​ಗಳು ಪಡೆಯುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಆಗಲಿದ್ದು, ಠೇವಣಿಗಳ ಮೇಲಿನ ಬಡ್ಡಿ ಸಹ ಕ್ಷೀಣಿಸಲಿದೆ.

ಸಾಂದರ್ಭಿಕ ಚಿತ್ರ
author img

By

Published : Oct 4, 2019, 12:57 PM IST

ಮುಂಬೈ: ಆರೋಗ್ಯಕರವಾದ ಹಣಕಾಸು ಬೆಳವಣಿಗೆಯ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ತಗ್ಗಿಸಲು ಹಣದುಬ್ಬರದ ಏರಿಕೆ ಇಳಿಸಲು ಹಾಗೂ ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಸರಾಗವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದಲ್ಲಿ ಐದನೇ ಬಾರಿಗೆ ಬಡ್ಡಿ ದರವನ್ನು ಕಡಿತಗೊಳಿಸಿದೆ.

ಆರ್‌ಬಿಐ ತನ್ನ ಪ್ರಮುಖ ಸಾಲ ದರ ಅಥವಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್​ಗಳಷ್ಟು ಕಡಿತಗೊಳಿಸಿ ಶೇ. 5.15ಕ್ಕೆ ಇಳಿಸಿದೆ. ಈ ಕಡಿತದಿಂದ ಒಂದು ವರ್ಷದ ಅವಧಿಯಲ್ಲಿ ಸಂಚಿತ ಕಡಿತ 135 ಬೇಸಿಸ್​ ಪಾಯಿಂಟ್​ಗಳು ಕಡಿತವಾದಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಡ್ಡಿ ದರ ಇಳಿಸಿದಂತಾಗಿದೆ. ಇದರಿಂದ ಬ್ಯಾಂಕ್​ಗಳು ಪಡೆಯುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಆಗಲಿದ್ದು, ಠೇವಣಿಗಳ ಮೇಲಿನ ಬಡ್ಡಿ ಸಹ ಕ್ಷೀಣಿಸಲಿದೆ.

ಇಂದು ಆರ್​ಬಿಐನ ಗವರ್ನರ್​ ಶಕ್ತಿಕಾಂತ್ ದಾಸ್​ ಅವರ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ವಿಮರ್ಶಾ ಸಭೆಯಲ್ಲಿ ಈ ನಿರ್ಧಾರ ಹೊರಡಿಸಲಾಗಿದೆ. ಕಳೆದ ಅಗಸ್ಟ್​ ತಿಂಗಳಲ್ಲಿ ನಡೆದಿದ್ದ ಸಭೆಯಲ್ಲೂ 35 ಬೇಸಿಸ್ ಪಾಯಿಂಟ್​ಗಳನ್ನು ಕಡಿತಗೊಳಿಸಿ ಶೇ. 5.40ಕ್ಕೆ ಇಳಿಸಲಾಗಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.