ನವದೆಹಲಿ: ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಸ್ತುತ ಸಂಚರಿಸುತ್ತಿರುವ 230 ವಿಶೇಷ ರೈಲುಗಳು ಸೇವೆಯಲ್ಲಿ ಮುಂದುವರಿಯಲಿವೆ. ನಿಯಮಿತ ಪ್ರಯಾಣಿಕ ಮತ್ತು ಉಪನಗರ ರೈಲು ಸೇವೆಗಳನ್ನು ಮುಂದಿನ ಸೂಚನೆವರೆಗೂ ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸೀಮಿತ ಆಧಾರದ ಮೇಲೆ ಪ್ರಸ್ತುತ ಚಾಲನೆಯಲ್ಲಿರುವ ಮುಂಬೈನ ಸ್ಥಳೀಯ ರೈಲುಗಳು ಸಹ ಯಥಾವತ್ತಾಗಿ ಸಂಚರಿಸಲಿವೆ ಎಂದು ಹೇಳಿದೆ.
ಲಾಕ್‌ಡೌನ್‌ಗೆ ಮುಂಚಿತವಾಗಿ ಚಲಿಸುವ ಎಲ್ಲಾ ಇತರ ಸಾಮಾನ್ಯ ರೈಲು ಮತ್ತು ಉಪನಗರ ರೈಲುಗಳು ಸದ್ಯಕ್ಕೆ ಸ್ಥಗಿತಗೊಳ್ಳುತ್ತವೆ. ಎಲ್ಲಾ ವಿಶೇಷ ರೈಲುಗಳು ಮೇ 12ರಿಂದ ರಾಜಧಾನಿ ಮಾರ್ಗಗಳಲ್ಲಿ ಚಲಿಸುವ 12 ಜೋಡಿ ರೈಲುಗಳು ಮತ್ತು ಜೂನ್ 1 ರಿಂದ 100 ಜೋಡಿ ರೈಲುಗಳು ಮುಂದುವರಿಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಆಗಸ್ಟ್ 12ರವರೆಗೆ ಎಲ್ಲಾ ಪ್ರಯಾಣಿಕ ರೈಲುಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಭಾರತೀಯ ರೈಲ್ವೆಯು ಈ ಹಣಕಾಸು ವರ್ಷದಲ್ಲಿ ತನ್ನ ಪ್ರಯಾಣಿಕರ ವ್ಯವಹಾರದಲ್ಲಿ ಸುಮಾರು 40,000 ಕೋಟಿ ರೂ. ನಷ್ಟು ಅನುಭವಿಸಿದೆ.