ETV Bharat / business

ಪಾಕ್​ಗೆ ಮತ್ತೊಂದು ಆಘಾತ... ಮೂಡಿಸ್ ಎಚ್ಚರಿಕೆ ಅಣುಬಾಂಬ್​ಗಿಂತಲೂ ಭೀಕರ - ಪಾಕಿಸ್ತಾನ ಆರ್ಥಿಕತೆ

ನಿಧಾನಗತಿಯ ಜಾಗತಿಕ ಬೆಳವಣಿಗೆಯೊಂದಿಗೆ ಸಾಮಾನ್ಯ ಸ್ಥಿರ ಹಣಕಾಸು ಪರಿಸ್ಥಿತಿ ಏರಿಳಿತವಾಗಲಿದೆ ಎಂದು ಭವಿಷ್ಯ ನುಡಿದ ಮೂಡಿಸ್​, ಅಮೆರಿಕ- ಚೀನಾದ ಉದ್ವಿಗ್ನತೆಗಳು ಮತ್ತು ರಾಜಕೀಯ ಅಪಾಯ ಸಾರ್ವಭೌಮತ್ವದ ಉದಯೋನ್ಮುಖ ಮಾರುಕಟ್ಟೆಗಳು (ಇಎಂ) ಮತ್ತು ಗಡಿಯೊಳಗಿನ ಮಾರುಕಟ್ಟೆಗಳ (ಎಫ್‌ಎಂ) ಹಣಕಾಸಿನ ಒತ್ತಡದ ಭೌತಿಕ ಅಪಾಯ ಎದುರಿಸಲಿವೆ ಎಂದು ವಿದೇಶಿ ಮಾಧ್ಯಮವೊಂದು ವಿಶ್ಲೇಷಿಸಿ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ
author img

By

Published : Sep 13, 2019, 5:25 PM IST

ಕರಾಚಿ: ಇಸ್ಲಾಮಾಬಾದ್​ ವಿದೇಶಿ ಕರೆನ್ಸಿ ಸಾಲದ ಮೇಲೆ ಯಥೇಚ್ಛವಾಗಿ ಅವಲಂಬಿಸಿರುವುದರಿಂದ ಬಾಹ್ಯ ಸಾಲ ಪಾವತಿ ದುರ್ಬಲಗೊಳ್ಳುತ್ತಿದೆ. ಇದರ ಜೊತೆಗೆ ಅಮೆರಿಕ- ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆಯು ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ಗಂಭೀರವಾದ ಹಣಕಾಸು ಸಮಸ್ಯೆಗಳು ತಂದೊಡ್ಡಲಿದೆ ಎಂದು ಅಂತಾರಾಷ್ಟ್ರೀಯ ಕ್ರೆಡಿಟ್​ ರೇಟಿಂಗ್ ಸಂಸ್ಥೆ ಮೂಡಿಸ್​ ಎಚ್ಚರಿಸಿದೆ.

ನಿಧಾನಗತಿಯ ಜಾಗತಿಕ ಬೆಳವಣಿಗೆಯೊಂದಿಗೆ ಸಾಮಾನ್ಯ ಸ್ಥಿರ ಹಣಕಾಸು ಪರಿಸ್ಥಿತಿ ಏರಿಳಿತವಾಗಲಿದೆ ಎಂದು ಭವಿಷ್ಯ ನುಡಿದ ಮೂಡಿಸ್​, ಅಮೆರಿಕ- ಚೀನಾದ ಉದ್ವಿಗ್ನತೆಗಳು ಮತ್ತು ರಾಜಕೀಯ ಅಪಾಯ ಸಾರ್ವಭೌಮತ್ವದ ಉದಯೋನ್ಮುಖ ಮಾರುಕಟ್ಟೆಗಳು (ಇಎಂ) ಮತ್ತು ಗಡಿಯೊಳಗಿನ ಮಾರುಕಟ್ಟೆಗಳ (ಎಫ್‌ಎಂ) ಹಣಕಾಸಿನ ಒತ್ತಡದ ಭೌತಿಕ ಅಪಾಯ ಎದುರಿಸಲಿವೆ ಎಂದು ವಿದೇಶಿ ಮಾಧ್ಯಮವೊಂದು ವಿಶ್ಲೇಷಿಸಿ ವರದಿ ಮಾಡಿದೆ.

ಏಷ್ಯಾ- ಪೆಸಿಫಿಕ್ (ಎಪಿಎಸಿ), ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (ಮೆನಾ) ಮತ್ತು ಲ್ಯಾಟಿನ್ ಅಮೆರಿಕದಲ್ಲಿ (ಲ್ಯಾಟಾಮ್) ಬಿ- ರೇಟೆಡ್ ಮಾರುಕಟ್ಟೆಯ ಸಾರ್ವಭೌಮತ್ವದಲ್ಲಿ ಹೆಚ್ಚಿನ ಮಾನ್ಯತೆಯಿದೆ. ದುರ್ಬಲ ಸಾಲ ಕೈಗೆಟುಕುವಿಕೆಯಿಂದ ಇವುಗಳು ಒತ್ತಡಕ್ಕೊಳಗಾದಾಗ ಕ್ರೆಡಿಟ್ ಮೆಟ್ರಿಕ್‌ಗಳಲ್ಲಿ ತೀವ್ರ ಕುಸಿತ ಕಾಣುತ್ತವೆ. ವಿದೇಶಿ ಕರೆನ್ಸಿ ಸಾಲ ಮತ್ತು ಬಾಹ್ಯ ಸಾಲ ಪಾವತಿಗಳ ಮೀಸಲು ವ್ಯಾಪ್ತಿ ಕಿರಿದಾಗಲಿದೆ. ''ಬಿ-ರೇಟೆಡ್ ಮಾರುಕಟ್ಟೆ ಸಾರ್ವಭೌಮತ್ವದ ಎಪಿಎಸಿ, ಲ್ಯಾಟಾಮ್ ಮತ್ತು ಮೆನಾ ತೀವ್ರವಾದ ಹಣಕಾಸಿನ ಒತ್ತಡಕ್ಕೆ ಒಳಗಾಗಿವೆ'' ಎಂದು ಮೂಡಿಸ್​ನ ಇನ್ವೆಸ್ಟರ್ಸ್ ಸರ್ವಿಸ್ ವಲಯದ ಸಾರ್ವಭೌಮರು- ಜಾಗತಿಕ ವರದಿಯಲ್ಲಿ ಹೇಳಿದೆ.

ಇದರಿಂದಾಗಿ ಪಾಕಿಸ್ತಾನ ಆರ್ಥಿಕತೆ ಸೇರಿದಂತೆ ಇತರ ಕೆಲವು ರಾಷ್ಟ್ರಗಳು ಆರ್ಥಿಕ ಆಘಾತಕ್ಕೆ ಒಳಗಾಗಿವೆ. 2019-20ರ ಸಾಲ ಪಡೆಯುವಿಕೆಗೆ ಹೋಲಿಸಿದರೆ ಪಾಕಿಸ್ತಾನ, ಶ್ರೀಲಂಕಾ, ಈಜಿಪ್ಟ್, ಅಂಗೋಲಾ ಮತ್ತು ಘಾನಾಗಳ ಬಡ್ಡಿ ಪಾವತಿ- ಆದಾಯದ ಅನುಪಾತಗಳಲ್ಲಿ ಅತ್ಯಂತ ಗಮನಾರ್ಹ ಮಟ್ಟದಲ್ಲಿ ಕುಸಿತ ಕಾಣುತ್ತಿದೆ ಎಂದಿದೆ.

39 ತಿಂಗಳ ಐಎಂಎಫ್ ಒಪ್ಪಂದದಡಿ ಪಾಕಿಸ್ತಾನದ ಬಾಹ್ಯ ಹಣಕಾಸು ಅಂತರ 6 ಬಿಲಿಯನ್ ಡಾಲರ್​ಗೆ ತಲುಪಿದೆ. ವ್ಯಾಪಕವಾದ ಚಾಲ್ತಿ ಖಾತೆ ಕೊರತೆ ಮತ್ತು ವಿದೇಶಿ ಒಳಹರಿವಿನ ಅಭಾವ ಸಹ ಪಾಕಿಸ್ತಾನವನ್ನ ಬಹುವಾಗಿ ಕಾಡುತ್ತಿದೆ. ಬಾಹ್ಯ ಅಸಮತೋಲನಕ್ಕೆ ಪ್ರತಿಕ್ರಿಯಿಸಿ, ಕಳೆದ 2 ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕಿನ ಸಂಚಿತ 750 ಬೇಸ್​ ಪಾಯಿಂಟ್​ಗಳ ಏರಿಕೆಯ ಬಳಿಕ ಬಡ್ಡಿದರ ಹೆಚ್ಚಳವಾಗಿ ಪಾಕ್​ ಹಣಕಾಸಿನ ಹರಿವು ಮತ್ತಷ್ಟು ದುರ್ಬಲಗೊಂಡಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.