ನವದೆಹಲಿ : ಮುಂದಿನ ಆರ್ಥಿಕ ವರ್ಷದ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಗುರುವಾರದಿಂದ ಜಾರಿಗೆ ಬರಲಿರುವ ಹೊಸ ಅಕೌಂಟಿಂಗ್ ನಿಯಮಗಳು ಲೆಕ್ಕಪತ್ರಗಳ ದಾಖಲೆಗಳ ವಂಚನೆಗಳನ್ನು ತಡೆಯುತ್ತದೆ ಎಂದು ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ಗಳು ತಿಳಿಸಿದ್ದಾರೆ.
ಫ್ಲೈ-ಬೈ-ನೈಟ್ ಆಪರೇಟರ್‌ಗಳನ್ನು (ಪ್ರಾಮಾಣಿಕತೆಯ ಬಗ್ಗೆ ಕಾಳಜಿವಹಿಸದೆ ತ್ವರಿತ ಹಣ ಸಂಪಾದಿಸಲು ಇಚ್ಛಿಸುವವರು) ನಿರುತ್ಸಾಹಗೊಳಿಸುತ್ತದೆ. ಲೆಕ್ಕಪತ್ರ ದಾಖಲೆಗಳ ಜತೆಗೆ ತನಿಖಾಧಿಕಾರಿಗಳಿಗೆ ನಿರಾಕರಿಸಲಾಗದ ಪುರಾವೆಗಳನ್ನು ಅದು ಒದಗಿಸುತ್ತದೆ.
ಕಳೆದ ವಾರ ಹೊರಡಿಸಲಾದ ಅಧಿಸೂಚನೆಯಲ್ಲಿ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯವು ಸಾಫ್ಟ್‌ವೇರ್ ಪ್ರೋಗ್ರಾಂ ಬಳಸುವ ಯಾವುದೇ ಕಂಪನಿಗೆ ತನ್ನ ಖಾತೆಯ ಪುಸ್ತಕಗಳನ್ನು ನಿರ್ವಹಿಸಲು ಸಾಫ್ಟ್‌ವೇರ್ ಪ್ರೋಗ್ರಾಂ ಕಡ್ಡಾಯಗೊಳಿಸಿದೆ.
ಲೆಕ್ಕಪರಿಶೋಧನೆ ದುಷ್ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ಪ್ರತಿ ವ್ಯವಹಾರದ ಸಂಪೂರ್ಣ ಲೆಕ್ಕಪರಿಶೋಧಕ ಮಾರ್ಗ ರಕ್ಷಿಸಲು ಸಾಫ್ಟ್‌ವೇರ್ ಪ್ರೋಗ್ರಾಂ ಬಳಸುವಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಪ್ರೋಗ್ರಾಮಿಂಗ್ ವೈಶಿಷ್ಟ್ಯವು ಆಡಿಟ್ ನಮೂದಿನಲ್ಲಿ ಮಾಡಿದ ಪ್ರತಿ ಬದಲಾವಣೆಯನ್ನು ಸಮಯದೊಂದಿಗೆ ದಾಖಲಿಸಬೇಕು. ಆಡಿಟ್ ದಾಖಲು ನಿಷ್ಕ್ರಿಯಗೊಳಿಸಲು ಯಾವುದೇ ಅವಕಾಶ ಇರಕೂಡದು ಎಂದು ಸೂಚಿಸಿದೆ.
ಹೊಸ ನಿಯಮ ಏಪ್ರಿಲ್ 1ರಿಂದ ಜಾರಿ : ಈ ವಾರದಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಕಂಪನಿಗಳು ಲೆಕ್ಕಪರಿಶೋಧಕ ಸಾಫ್ಟ್‌ವೇರ್ ಬಳಸಬೇಕಾಗುತ್ತದೆ. ಆಡಿಟ್ ಮಾಡಿದ ದಾಖಲೆಗಳನ್ನು ಯಾವುದೇ ಕಾರಣಕ್ಕೂ ಅಳಿಸಿ ಹಾಕುವಂತಿಲ್ಲ.
ಮುಂಬರುವ ಹಣಕಾಸು ವರ್ಷದಿಂದ ಪ್ರತಿ ಕಂಪನಿಯು ತನ್ನ ಎಲೆಕ್ಟ್ರಾನಿಕ್ ಅಕೌಂಟ್ಗಳ ಖಾತೆ ನಿರ್ವಹಿಸುತ್ತದೆ. ಇದಕ್ಕಾಗಿ ಲೆಕ್ಕಪರಿಶೋಧಕ ಸಾಫ್ಟ್‌ವೇರ್ ಮಾತ್ರ ಬಳಸುತ್ತದೆ. ವಹಿವಾಟಿನಲ್ಲಿ ಲೆಕ್ಕಪರಿಶೋಧನೆ ಸಾಗಿ ಬಂದ ದಾಖಲೆಗಳ ಸರಣಿ ಹೊಂದಿರಲಿದೆ.
ಪ್ರತಿ ಬದಲಾವಣೆಯ ಎಡಿಟ್ಗೆ ಲಾಗ್ ರಚಿಸಲಾಗುತ್ತದೆ ಎಂದು ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಎಎಂಜಿಆರ್ ಅಸೋಸಿಯೇಟ್ಸ್ ಪಾಲುದಾರ ರಜತ್ ಮೋಹನ್ ಈಟಿವಿ ಭಾರತಗೆ ತಿಳಿಸಿದರು. ಆಡಿಟ್ ಮಾಡಲಾದ ದಾಖಲೆಗಳನ್ನು ತಿರುಚದಂತೆ ಉಳಿಸಿಕೊಳ್ಳುವುದು ಈಗ ಕಂಪನಿಗಳ ಜವಾಬ್ದಾರಿಯಾಗಿದೆ. ಅದನ್ನು ನಿಷ್ಕ್ರಿಯಗೊಳಿಸುವಂತಿಲ್ಲ ಎಂದರು.
ಬುಧವಾರ ಹೊರಡಿಸಲಾದ ಗೆಜೆಟ್ ಅಧಿಸೂಚನೆಯಲ್ಲಿ ನಿಯಮ 3ರ ಉಪ-ನಿಯಮ (1)ರಲ್ಲಿ ನಿಬಂಧನೆ ಸೇರಿಸುವ ಮೂಲಕ, ಅಗತ್ಯ ನಿಬಂಧನೆ ಸೇರಿಸಲು ಸರ್ಕಾರವು 2014ರ ಕಂಪನಿಗಳ (ಖಾತೆಗಳು) ನಿಯಮಗಳಲ್ಲಿ ಬದಲಾವಣೆ ಮಾಡಿತು.
2021ರ ಏಪ್ರಿಲ್ 1ರಂದು ಅಥವಾ ಆ ನಂತರ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ತಮ್ಮ ಖಾತೆಯ ಪುಸ್ತಕಗಳನ್ನು ನಿರ್ವಹಿಸಲು ಅಕೌಂಟಿಂಗ್ ಸಾಫ್ಟ್‌ವೇರ್ ಬಳಸುವ ಪ್ರತಿ ಕಂಪನಿಯು ಲೆಕ್ಕಪರಿಶೋಧಕ ಸಾಫ್ಟ್‌ವೇರ್ ಮಾತ್ರ ಬಳಸಬೇಕು. ಅದು ಪ್ರತಿಯೊಂದರ ಲೆಕ್ಕಪರಿಶೋಧಕ ವಹಿವಾಟಿನ ಚಟುವಟಿಕೆ ದಾಖಲಿಸುವ ವೈಶಿಷ್ಟ್ಯ ಹೊಂದಿರಬೇಕು.
ಸಾಫ್ಟ್‌ವೇರ್ ಪ್ರೋಗ್ರಾಂ ಖಾತೆಯ ಪುಸ್ತಕಗಳಲ್ಲಿ ಮಾಡಿದ ಪ್ರತಿ ಬದಲಾವಣೆಯ ಸಂಪಾದನೆಯ ಲಾಗ್ ರಚಿಸಬೇಕು. ಬದಲಾವಣೆ ಮಾಡಿದ ದಿನಾಂಕ ಮತ್ತು ಆಡಿಟ್ ಮಾಡಿದ್ದು ನಿಷ್ಕ್ರಿಯಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು.
ಈ ತಿದ್ದುಪಡಿಯು ಅಕೌಂಟಿಂಗ್ ಸಾಫ್ಟ್‌ವೇರ್ ಹೊಂದಿರದ ಕಂಪನಿಗಳಿಗೆ ಪ್ರಸ್ತಾವಿತ ಬದಲಾವಣೆಗಳಿಗೆ ಸಂಪೂರ್ಣ ಅನುಸರಣೆ ನೀಡಬಹುದು ಎಂದು ಪುಣೆ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮತ್ತು ತೆರಿಗೆ ತಜ್ಞ ಪ್ರೀತಮ್ ಮಹುರೆ ಹೇಳಿದರು.
ಈ ಬಳಿಕ ಫ್ಲೈ-ಬೈ-ನೈಟ್ ಆಪರೇಟರ್‌ಗಳಿಗೆ ಲೆಕ್ಕಪತ್ರ ದಾಖಲೆಗಳನ್ನು ತಿದ್ದುಪಡಿ ಮಾಡುವುದು ಕಷ್ಟವಾಗುತ್ತದೆ. ಯಾರಾದರೂ ಅಕೌಂಟಿಂಗ್ ದಾಖಲೆಗಳೊಂದಿಗೆ ತಿರುಚಿದರೆ, ಅಲ್ಲಿ ಬದಲಾವಣೆ ಮಾಡಿದ ಹೆಜ್ಜೆಗಳ ಜಾಡು ಕಾಣಸಿಗುತ್ತವೆ ಎಂದು ಮಹುರೆ ಈಟಿವಿ ಭಾರತಗೆ ತಿಳಿಸಿದರು.
ಹೊಸ ನಿಯಮಗಳು ತೆರಿಗೆ ವಂಚನೆ ತಡೆಯುತ್ತದೆ : ಹೊಸ ನಿಯಮಗಳು ಜಿಎಸ್‌ಟಿ ಸಂಬಂಧಿತ ವಂಚನೆಗಳನ್ನು ನಿಗ್ರಹಿಸುವ ಗುರಿ ಹೊಂದಿವೆ. ಇಲ್ಲಿ ಜಿಎಸ್‌ಟಿ ನೋಂದಾಯಿತ ವ್ಯವಹಾರಗಳಿಗೆ ಲಭ್ಯವಿರುವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಯಿಂದ ಜಿಎಸ್‌ಟಿ ವಿತರಕರು ದೊಡ್ಡ ಪ್ರಮಾಣದಲ್ಲಿ ನಕಲಿ ಜಿಎಸ್‌ಟಿ ಇನ್ವಾಯ್ಸ್ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಟಾಟಾದಿಂದ ಸೈರಸ್ ವಜಾ ಸರಿ'- ಸುಪ್ರೀಂ ತೀರ್ಪು ಕುರಿತು ಮಿಸ್ತ್ರಿ ಹೇಳಿದ್ದು ಹೀಗೆ...
ಕಳೆದ ನವೆಂಬರ್‌ನಲ್ಲಿ ಜಿಎಸ್‌ಟಿ ನೋಂದಣಿ ಕಷ್ಟಕರವಾಗಿಸುವ ಮೂಲಕ ಜಿಎಸ್‌ಟಿ ಸಂಬಂಧಿತ ವಂಚನೆಗಳನ್ನು ನಿಗ್ರಹಿಸಲು ಜಿಎಸ್‌ಟಿ ಕಾನೂನು ಸಮಿತಿ ದ್ವಿಮಾರ್ಗದ ವಿಧಾನ ಶಿಫಾರಸು ಮಾಡಿತ್ತು. ಜಿಎಸ್‌ಟಿ ರೆಜಿಮಿಗೆ ಮೋಸಗಾರರ ಪ್ರವೇಶ ತಡೆಗೆ ಆಧಾರ್ ಆಧಾರಿತ ದೃಢೀಕರಣ ಬಳಸುವಂತೆ ಸೂಚಿಸಿತ್ತು.
ಜಿಎಸ್‌ಟಿ ಮಂಡಳಿಯು ನಕಲಿ ಜಿಎಸ್‌ಟಿ ವಿತರಕರನ್ನು ತ್ವರಿತವಾಗಿ ಅಮಾನತುಗೊಳಿಸುವಂತೆ ಜಿಎಸ್‌ಟಿ ಕಾನೂನು ಸಮಿತಿ ಶಿಫಾರಸು ಮಾಡಿದೆ. ಸಾಂಸ್ಥಿಕ ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸಿದ ಹೊಸ ಲೆಕ್ಕಪರಿಶೋಧಕ ನಿಯಮಗಳಡಿ ವಂಚನೆ ಮಾಡುವುದು ಇನ್ನಷ್ಟು ಕಷ್ಟಕರವಾಗುವುದರಿಂದ ನಮೂದುಗಳ ಬ್ಯಾಕ್‌ಡೇಟಿಂಗ್ ಅಸಾಧ್ಯವಾಗುತ್ತದೆ.
ತನಿಖಾಧಿಕಾರಿಗಳಿಗೆ ನೆರವಾಗಲು ಹೊಸ ನಿಯಮಗಳು : ಹೊಸ ನಿಯಮಗಳು ನಮೂದುಗಳ ಬ್ಯಾಕ್‌ಡೇಟಿಂಗ್ ನಿರುತ್ಸಾಹಗೊಳಿಸುವುದಲ್ಲದೆ, ವಂಚನೆಯ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಲೆಕ್ಕಪರಿಶೋಧಕ ಹಾದಿ ಒದಗಿಸುತ್ತದೆ ಎಂದು ತೆರಿಗೆ ಮತ್ತು ಲೆಕ್ಕಪತ್ರ ತಜ್ಞರ ವಾದ.
ಈ ಬದಲಾವಣೆಯು ಖಾತೆಗಳ ಪುಸ್ತಕಗಳಲ್ಲಿನ ನಮೂದುಗಳ ಹಿಂದಿನ ಅವಧಿ ಬೇರ್ಪಡಿಸುತ್ತದೆ. ಕಾರ್ಪೊರೇಟ್ ವಲಯವು ಖಾತೆಗಳ ಪುಸ್ತಕಗಳನ್ನು ನೈಜ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿರುವುದನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ರಜತ್ ಮೋಹನ್.
ಆರ್ಥಿಕ ವಂಚನೆಗಳ ಸಂದರ್ಭದಲ್ಲಿ ಆಡಿಟ್ ಹಾದಿಯು ತನಿಖಾಧಿಕಾರಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಲೆಕ್ಕಪರಿಶೋಧಿಸಿದ ಕಂಪನಿಯು ಬಳಸುವ ಸಾಫ್ಟ್‌ವೇರ್ ಪ್ರೋಗ್ರಾಂ, ಕಂಪ್ಲೈಂಟ್ ಸಾಫ್ಟ್‌ವೇರ್ ಬಳಸುತ್ತದೆಯೋ ಇಲ್ಲವೋ ಎಂಬುದನ್ನು ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ನಮೂದಿಸುವುದು ಜವಾಬ್ದಾರಿಯಾಗಿದೆ ಎಂದು ಮಹುರೆ ಸ್ಪಷ್ಟಪಡಿಸಿದ್ದಾರೆ.