ನವದೆಹಲಿ: ಕೋವಿಡ್-19 ಹಾಗೂ ಲಾಕ್ಡೌನ್ನಿಂದ ಉಂಟಾಗುವ ಆರ್ಥಿಕ ಕುಸಿತವನ್ನು ಎದುರಿಸಲು ವಿತ್ತೀಯ ಮತ್ತು ಹಣಕಾಸಿನ ಉತ್ತೇಜನ ಕ್ರಮಗಳು ಹತೋಟಿಯಲ್ಲಿವೆ ಎಂದು ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಮೇ 3ರ ವೇಳೆಗೆ ಆರ್ಥಿಕತೆಯ ಮಹತ್ವದ ಭಾಗವು ಕಾರ್ಯನಿರ್ವಹಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣವು ತಿಂಗಳುಗಳವರೆಗೆ ಸ್ಥಗಿತಗೊಳ್ಳುತ್ತದೆ ಎಂದು ಹೇಳಿದರು.
ಆಂತರಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಲಾಕ್ ಡೌನ್‌ನಿಂದ ತೀವ್ರವಾಗಿ ಹಾನಿಗೊಳಗಾದ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಂಜೀವ್ ಸನ್ಯಾಲ್ ಹೇಳಿದರು.
ಆರ್‌ಬಿಐ ಈಗಾಗಲೇ ಪ್ಯಾಕೇಜ್‌ಗಳನ್ನು ಘೋಷಿಸಿದ್ದು, ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಹೆಚ್ಚಿನ ಕ್ರಮಗಳ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿ ದಾಸ್ ಸುಳಿವು ನೀಡಿದ್ದಾರೆ ಎಂದು ಸನ್ಯಾಲ್ ಹೇಳಿದ್ದಾರೆ.