ETV Bharat / business

ದಸರಾ, ದೀಪಾವಳಿಗೂ ಮುನ್ನ 6.3 ಕೋಟಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ.. - EPF interest rate News

ನೌಕರರ ಇಪಿಎಫ್​ ಹಣಕ್ಕೆ ಬಡ್ಡಿ ದರ ಕಡಿಮೆಯಾಯಿತು ಎಂಬ ಕಳವಳಕ್ಕೆ ಕೊಂಚ ಪರಿಹಾರ ಸಿಕ್ಕಂತಾಗಿದೆ. ಕಾರ್ಮಿಕರ ಭವಿಷ್ಯ ನಿಧಿಯು ತನ್ನ 6.3 ಕೋಟಿ ಚಂದಾದಾರರ ಖಾತೆಗಳಿಗೆ ಶೀಘ್ರದಲ್ಲೇ 2018-19ನೇ ಸಾಲಿನ ಬಡ್ಡಿದರ ಪಾವತಿಸಲಿದೆ. 2018-19ರ ವರ್ಷಕ್ಕೆ ಸಂಬಂಧಿಸಿದಂತೆ ಇಪಿಎಫ್​ ಬಡ್ಡಿ ದರ ಪರಿಷ್ಕರಿಸಲಾಗಿತ್ತು. 2015-16ರಲ್ಲಿ ಶೇ. 8.8ರಷ್ಟಿದದ್ದನ್ನು 2016-17ರಲ್ಲಿ ಶೇ. 8.65ಕ್ಕೆ ಇಳಿಸಿತ್ತು. 2017-18ರಲ್ಲಿ ಇದನ್ನು ಶೇ. 8.55ಕ್ಕೆ ತಗ್ಗಿಸಿತ್ತು.

ಸಾಂದರ್ಭಿಕ ಚಿತ್ರ
author img

By

Published : Sep 24, 2019, 8:57 PM IST

ನವದೆಹಲಿ: 2018-19ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್​) ಬಡ್ಡಿ ದರವನ್ನು ಶೇ. 8.65ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗಾವರ್​ ತಿಳಿಸಿದ್ದಾರೆ.

ನೌಕರರ ಇಪಿಎಫ್​ ಹಣಕ್ಕೆ ಬಡ್ಡಿ ದರ ಕಡಿಮೆಯಾಯಿತು ಎಂಬ ಕಳವಳಕ್ಕೆ ಕೊಂಚ ಪರಿಹಾರ ಸಿಕ್ಕಂತಾಗಿದೆ. ಕಾರ್ಮಿಕರ ಭವಿಷ್ಯ ನಿಧಿಯು ತನ್ನ 6.3 ಕೋಟಿ ಚಂದಾದಾರರ ಖಾತೆಗಳಿಗೆ ಶೀಘ್ರದಲ್ಲೇ 2018-19ನೇ ಸಾಲಿನ ಬಡ್ಡಿದರ ಪಾವತಿಸಲಿದೆ. 2018-19ರ ವರ್ಷಕ್ಕೆ ಸಂಬಂಧಿಸಿದಂತೆ ಇಪಿಎಫ್​ ಬಡ್ಡಿ ದರ ಪರಿಷ್ಕರಿಸಲಾಗಿತ್ತು. 2015-16ರಲ್ಲಿ ಶೇ. 8.8ರಷ್ಟಿದದ್ದನ್ನು 2016-17ರಲ್ಲಿ ಶೇ. 8.65ಕ್ಕೆ ಇಳಿಸಿತ್ತು. 2017-18ರಲ್ಲಿ ಇದನ್ನು ಶೇ. 8.55ಕ್ಕೆ ತಗ್ಗಿಸಿತ್ತು.

ಪರಿಷ್ಕೃತ ನೂತನ ಬಡ್ಡಿ ದರವನ್ನು (ಶೇ.8.65) 2019ರ ಫೆಬ್ರವರಿ 22 ರಂದು ಇಪಿಎಫ್‌ನ ಉನ್ನತ ಮಂಡಳಿ ನಿರ್ಧಾರ ತೆಗೆದುಕೊಂಡಿತು. 2019ರ ಸೆಪ್ಟೆಂಬರ್​ 19ರಂದು ಕಾರ್ಮಿಕ ಸಚಿವಾಲಯವು ಹಣಕಾಸು ಸಚಿವಾಲಯದ ಸಮ್ಮತಿ ಪಡೆಯಿತು. ಕಾರ್ಮಿಕ ಸಚಿವಾಲಯವು 2018-19ರ ಸಾಲಿಗೆ ಶೇ. 8.65ರಷ್ಟು ಬಡ್ಡಿ ದರವಿದೆಯೆಂದು ಸಚಿವಾಲಯ ಅಧಿಸೂಚನೆ ಹೊರಡಿಸಿದೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.