ನವದೆಹಲಿ: ಬದಲಾಯಿಸಲು ಆಗದಂತಹ ಬೆಳವಣಿಗೆ ಕುಸಿತವನ್ನು ತಡೆಗಟ್ಟಲು ಭಾರತವು ಬುದ್ಧಿವಂತಿಕೆಯ ಲಾಕ್‌ಡೌನ್ ನಿರ್ಗಮನದ ತಂತ್ರಗಳ ಮೊರೆ ಹೋಗಬೇಕಿದೆ ಎಂದು ಎಸ್‌ಬಿಐ ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಭಾರತದ ಆರ್ಥಿಕ ಬೆಳವಣಿಗೆಯು 2019-20ರಲ್ಲಿ 11 ವರ್ಷಗಳ ಕನಿಷ್ಠ ಶೇ 4.2ಕ್ಕೆ ಮತ್ತು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ 3.1ಕ್ಕೆ ಇಳಿದಿದೆ. ಇದು ಕಳೆದ 40 ತ್ರೈಮಾಸಿಕಗಳಲ್ಲಿ ಅತ್ಯಂತ ಕಡಿಮೆ ಮಟ್ಟದ ಬೆಳವಣಿಗೆ ಆಗಿದೆ.
ಮಾರ್ಚ್ 25ರಿಂದ ಜಾರಿಗೆ ಬಂದ ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿಯಾಗಿ ವಿಧಿಸಲಾದ ಲಾಕ್‌ಡೌನ್, ಆರ್ಥಿಕ ಚಟುವಟಿಕೆಗಳ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ಲಾಕ್‌ಡೌನ್‌ನ ನಾಲ್ಕನೇ ಹಂತ ನಾಳೆ (ಭಾನುವಾರ) ಮುಕ್ತಾಯಗೊಳ್ಳಲಿದೆ.
ಜೀವನ ಮತ್ತು ಜೀವನೋಪಾಯದ ನಡುವಿನ ಚರ್ಚೆಯಿಂದ ಬದುಕು ಮತ್ತು ಬದುಕುವವರ ನಡುವಿನ ಚರ್ಚೆಯತ್ತ ಸಾಗಿದ ಕಾರಣ ನಾವು ಬುದ್ಧಿವಂತಿಕೆಯಿಂದ ಲಾಕ್‌ಡೌನ್ ನಿರ್ಗಮನ ತಂತ್ರವನ್ನು ಜಾರಿಗೆ ತರಬೇಕು. ಏಕೆಂದರೆ ದೀರ್ಘವಾದ ಲಾಕ್‌ಡೌನ್ ಬದಲಾಯಿಸಲು ಆಗದ ಬೆಳವಣಿಗೆಯ ಕುಸಿತವನ್ನು ಹೆಚ್ಚಿಸುತ್ತದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಇಕೋವ್ರಾಪ್ ಹೇಳಿದೆ.