ETV Bharat / business

ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೇರಿ 4 ಸುಧಾರಣೆಗಳ ಜಾರಿ ಗಡುವು ವಿಸ್ತರಿಸಿದ ವಿತ್ತ ಸಚಿವಾಲಯ - ಒಂದು ರಾಷ್ಟ್ರದ ಒಂದು ಪಡಿತರ ಚೀಟಿ ಅನುಷ್ಠಾನ

ನಾನಾ ಇಲಾಖೆಗಳಲ್ಲಿ ನಾಗರಿಕ ಕೇಂದ್ರಿತ ಸುಧಾರಣೆಗಳನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಖರ್ಚು ಇಲಾಖೆ ಗಡುವು ವಿಸ್ತರಿಸಿದೆ. ಸುಧಾರಣೆಯ ಅನುಷ್ಠಾನಕ್ಕೆ ಸಂಬಂಧಿಸಿದ ನೋಡಲ್ ಸಚಿವಾಲಯದ ಶಿಫಾರಸುಗಳನ್ನು 2021ರ ಫೆಬ್ರವರಿ 15ರೊಳಗೆ ಸ್ವೀಕರಿಸಿದರೆ ರಾಜ್ಯವು ಸುಧಾರಣೆ ಸಂಬಂಧಿತ ಪ್ರಯೋಜನಗಳು ಪಡೆಯಲು ಅರ್ಹವಾಗಿರುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

FinMin
ವಿತ್ತ ಸಚಿವಾಲಯ
author img

By

Published : Dec 16, 2020, 4:59 PM IST

ನವದೆಹಲಿ: ಒಂದು ರಾಷ್ಟ್ರದ ಒಂದು ಪಡಿತರ ಚೀಟಿ ಮತ್ತು ವಿದ್ಯುತ್ ಸಂಬಂಧಿತ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಸಾಲ ಪಡೆಯಲು ಅರ್ಹರಾಗಲು ಸುಧಾರಣೆಗಳನ್ನು ಜಾರಿಗೆ ತರಲು ಹಣಕಾಸು ಸಚಿವಾಲಯವು ರಾಜ್ಯಗಳಿಗೆ ಫೆಬ್ರವರಿ 15ರವರೆಗೆ ಗಡುವು ವಿಸ್ತರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ರಾಜ್ಯಗಳ ಹೆಚ್ಚುವರಿ ನಿಧಿಯ ಅವಶ್ಯಕತೆಗಳನ್ನು ಪೂರೈಸಲು ಮೇ ತಿಂಗಳಲ್ಲಿ, ರಾಜ್ಯಗಳ ಜಿಎಸ್‌ಡಿಪಿಯ ಶೇ 2ರಷ್ಟು ಸಾಲ ಮಿತಿ ಹೆಚ್ಚಿಸಲು ಕೇಂದ್ರ ನಿರ್ಧರಿಸಿತ್ತು. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆಯಡಿ ನಿಗದಿಪಡಿಸಿದ ಶೇ 3ರ ಮಿತಿ ಮೀರಿದೆ.

ಈ ಪ್ರಯೋಜನಗಳನ್ನು ಪಡೆಯಲು ರಾಜ್ಯಗಳು 2020ರ ಡಿಸೆಂಬರ್ 31ರೊಳಗೆ ನಾಲ್ಕು ನಿರ್ದಿಷ್ಟ ಸುಧಾರಣೆಗಳನ್ನು ಪೂರ್ಣಗೊಳಿಸಬೇಕಾಗಿತ್ತು. ಒಂದು ರಾಷ್ಟ್ರದ ಒಂದು ಪಡಿತರ ಚೀಟಿ ಅನುಷ್ಠಾನ, ವ್ಯಾಪಾರ ಸುಧಾರಣೆಯ ಸುಲಭ ವ್ಯವಹಾರ, ನಗರ ಸ್ಥಳೀಯ ಸುಧಾರಣೆಗಳು ಮತ್ತು ವಿದ್ಯುತ್ ವಲಯ ಸುಧಾರಣೆಗಳು ಸೇರಿವೆ.

ವರ್ಷಾಂತ್ಯಕ್ಕೆ ಕಬ್ಬು ಕೃಷಿಕರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ: 3,500 ಕೋಟಿ ರೂ. ಸಬ್ಸಿಡಿ

ಪ್ರತಿ ಸುಧಾರಣೆ ಪೂರ್ಣಗೊಳಿಸಲು ತಮ್ಮ ಒಟ್ಟು ರಾಜ್ಯಗಳ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ 0.25ಕ್ಕೆ ಸಮಾನವಾದ ಹೆಚ್ಚುವರಿ ಸಾಲ ಪಡೆಯುವ ಸೌಲಭ್ಯವಿದೆ. ಈ ಸೌಲಭ್ಯದಡಿ ನಾಲ್ಕು ಸುಧಾರಣೆಗಳನ್ನು ಪೂರ್ಣಗೊಳಿಸಿದ ನಂತರ ರಾಜ್ಯಗಳಿಗೆ 2.14 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಕೂಡ ಸಿಗಲಿದೆ.

ನಾನಾ ಇಲಾಖೆಗಳಲ್ಲಿ ನಾಗರಿಕ ಕೇಂದ್ರಿತ ಸುಧಾರಣೆಗಳನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಇಲಾಖೆ ಗಡುವು ವಿಸ್ತರಿಸಿದೆ. ಸುಧಾರಣೆಯ ಅನುಷ್ಠಾನಕ್ಕೆ ಸಂಬಂಧಿಸಿದ ನೋಡಲ್ ಸಚಿವಾಲಯದ ಶಿಫಾರಸುಗಳನ್ನು 2021ರ ಫೆಬ್ರವರಿ 15ರೊಳಗೆ ಸ್ವೀಕರಿಸಿದರೆ ರಾಜ್ಯವು ಸುಧಾರಣೆ ಸಂಬಂಧಿತ ಪ್ರಯೋಜನಗಳು ಪಡೆಯಲು ಅರ್ಹವಾಗಿರುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಗಳಿಗೆ 40,251 ಕೋಟಿ ರೂ. ಹೆಚ್ಚುವರಿ ಸಾಲ ಅನುಮತಿ ನೀಡಲಾಗಿದೆ. ಸುಧಾರಣೆಗಳನ್ನು ಪೂರ್ಣಗೊಳಿಸುವ ದಿನಾಂಕ ವಿಸ್ತರಿಸುವುದರಿಂದ ಸುಧಾರಣಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಆರ್ಥಿಕ ಲಾಭಗಳನ್ನು ಪಡೆಯಲು ರಾಜ್ಯಗಳನ್ನು ಪ್ರೇರೇಪಿಸುವ ಸಾಧ್ಯತೆಯಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.