ETV Bharat / business

ಹ್ಯಾಕರ್​ಗಳಿಗೆ ಭಾರತ, ಬೆಂಗಳೂರು ಫೇವರಿಟ್​... ಮಾಲ್​ವೇರ್​​​ಗಳ ​ ಬಗ್ಗೆ ಇರಲಿ ಎಚ್ಚರ - ಸ್ಮಾರ್ಟ್ ಸಿಟಿ

ಇಂಟರ್‌ನೆಟ್ ಆಫ್ ಥಿಂಗ್ಸ್ ಹ್ಯಾಕಿಂಗ್​ ವರದಿ ತಯಾರಿಕೆಗೆ ಭಾರತದ ಅಗ್ರ 15 ನಗರಗಳಲ್ಲಿನ ಸೈಬರ್ ಆಕ್ರಮಣದ ದತ್ತಾಂಶಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಗರಿಷ್ಠ ಸಂಖ್ಯೆಯ ಸೈಬರ್‌ ಅಟ್ಯಾಕ್​​​​ಗಳನ್ನು ಆಕರ್ಷಿಸುತ್ತಿವೆ ಎಂದು ಬೆಂಗಳೂರಿನ ಟೆಲಿಕಾಂ ಪರಿಹಾರ ಪೂರೈಕೆದಾರ ಸುಬೆಕ್ಸ್ ಸಂಸ್ಥೆ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Aug 15, 2019, 3:14 PM IST

ನವದೆಹಲಿ: ದೇಶದಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಗುರಿಯಾಗಿಸಿಕೊಂಡು ಸೈಬರ್‌ ಆಕ್ರಮಣಗಳ ಪ್ರಮಾಣ ಶೇ 22ರಷ್ಟು ಏರಿಕೆ ಕಂಡಿದೆ.

ಕಳೆದ ತ್ರೈಮಾಸಿಕದಲ್ಲಿ ಐಒಟಿ ಸೈಬರ್​ ಅಟ್ಯಾಕ್​ಗಳಲ್ಲಿ ಹೆಚ್ಚು ಬಾಧಿತವಾದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಬಹುತೇಕ ದಾಳಿಗಳು ಸ್ಮಾರ್ಟ್ ಸಿಟಿ, ಹಣಕಾಸು ಸೇವೆ ಮತ್ತು ಸಾರಿಗೆ ವಲಯಗಳ ಮೇಲೆ ನಡೆಯುತ್ತಿವೆ ಎಂದು ಸ್ಟೇಟ್ ಆಫ್ ಇಂಟರ್​ನೆಟ್ ಆಫ್ ಥಿಂಗ್ಸ್ (ಐಒಟಿ) ಭದ್ರತೆ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯಲ್ಲಿ ಉಲ್ಲೇಖವಾಗಿದೆ.

ವರದಿ ತಯಾರಿಕೆಗೆ ಭಾರತದ ಅಗ್ರ 15 ನಗರಗಳಲ್ಲಿನ ಸೈಬರ್ ಆಕ್ರಮಣದ ದತ್ತಾಂಶಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಗರಿಷ್ಠ ಸಂಖ್ಯೆಯ ಸೈಬರ್‌ ಅಟ್ಯಾಕಗಳನ್ನು ಆಕರ್ಷಿಸುತ್ತಿವೆ ಎಂದು ಬೆಂಗಳೂರಿನ ಟೆಲಿಕಾಂ ಪರಿಹಾರ ಪೂರೈಕೆದಾರ ಸುಬೆಕ್ಸ್ ಸಂಸ್ಥೆ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ.

Cyberattacks
ಐಒಟಿ ಆಧಾರಿತ ಸೈಬರ್​ ದಾಳಿಗಳು

ಈ ತ್ರೈಮಾಸಿಕದಲ್ಲಿ ಸಂಶೋಧಕರು 33,450 ಉನ್ನತ ದರ್ಜೆಯ ದಾಳಿಗಳನ್ನು ದಾಖಲಿಸಿದ್ದು,ಇದರಲ್ಲಿ 500 ಅತ್ಯಾಧುನಿಕ ಆಕ್ರಮಣಗಳಿವೆ ಎಂದು ಎಚ್ಚರಿಸಿದೆ.

ಭಾರತದ ಬೃಹತ್​ ಯೋಜನೆಗಳೇ ಹ್ಯಾಕರ್​ಗಳ ಪ್ರಮುಖ ಗುರಿಯಾಗಿದ್ದು, ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ ಎಂದು ಸುಬೆಕ್ಸ್ ಸಿಇಒ ಪಿ. ವಿನೋದ್ ಕುಮಾರ್ ಹೇಳಿದ್ದಾರೆ.

ನಾವು ನಿತ್ಯ ಬಳಸುವ ಮೊಬೈಲ್‍ ಫೋನ್‍ನಿಂದ ಹಿಡಿದು ಬೃಹತ್‍ ಉದ್ಯಮಗಳು, ದೂರವಾಣಿ ವ್ಯವಸ್ಥೆ, ಬ್ಯಾಂಕು, ವಿಮಾ ಸಂಸ್ಥೆ, ಆಸ್ಪತ್ರೆಗಳು, ಸಾರಿಗೆ, ಸರ್ಕಾರಿ ಕಚೇರಿಗಳು, ವಸತಿ ಗೃಹಗಳು, ರಕ್ಷಣಾ ಪಡೆಗ ಸೇರಿದಂತೆ ಅನೇಕ ಕಡೆ ವಿವಿಧ ಪ್ರಮಾಣದ ಸೈಬರ್ ದಾಳಿಗಳು ನಡೆಯುತ್ತಲೇ ಇರುತ್ತವೆ. ಒಂದು ದಿನಕ್ಕೆ ಎಷ್ಟು ಹೊಸ ಸೈಬರ್ ದಾಳಿಗಳು ನಡೆಯುತ್ತವೆ ಎಂದು ಊಹಿಸು ಕಷ್ಟ ಸಾಧ್ಯವಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.