ETV Bharat / business

ಈಗ ಎಲ್ಲರ ಚಿತ್ತ ಸೀತಾರಾಮನ್​ರ 3ನೇ ಬಜೆಟ್​ನತ್ತ: ಕೊಡುವರೋ, ಕಸಿದುಕೊಳ್ಳುವರೋ? - Sitharaman's third budget presentation

ಕೋವಿಡ್ -19 ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಭಾರತೀಯ ಆರ್ಥಿಕತೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ಮೈನಸ್​ ಶೇ. -23.9ರಷ್ಟು ಕುಗ್ಗಿತು. ಡಿಸೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ.0.1ರಷ್ಟು ಮತ್ತು ಮಾರ್ಚ್ ಅಂತ್ಯಕ್ಕೆ ಶೇ.0.7ರಷ್ಟು ಬೆಳವಣಿಗೆಯನ್ನು ಶೇ 7.5ರಷ್ಟು ಸಂಕೋಚನದೊಂದಿಗೆ 2021ರ ವಿತ್ತೀಯ ವರ್ಷ ಕೊನೆಗೊಳ್ಳಲಿದೆ ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ. ಆದರೆ, ಹಣಕಾಸು ಸಚಿವಾಲಯವು ಡಿಸೆಂಬರ್ ತ್ರೈಮಾಸಿಕದಿಂದ ಆರ್ಥಿಕತೆಯಲ್ಲಿ ಅಲ್ಪ ಬೆಳವಣಿಗೆಗೆ ಎದುರು ನೋಡುತ್ತಿದೆ..

Sitharaman
ಸೀತಾರಾಮನ್
author img

By

Published : Jan 2, 2021, 5:14 PM IST

ನವದೆಹಲಿ : 2021-22ರ ಕೇಂದ್ರ ಬಜೆಟ್ ತಯಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಜ್ಞರು ಮತ್ತು ಉದ್ಯಮಿಗಳ ಜತೆ ಬಜೆಟ್ ಪೂರ್ವ ಸಮಾಲೋಚನೆಯ ಸರಣಿ ಸಭೆಗಳನ್ನು ಇತ್ತೀಚೆಗಷ್ಟೆ ಮುಕ್ತಾಯಗೊಳಿಸಿದ್ದಾರೆ. ಸಾಂಕ್ರಾಮಿಕದ ನೆರಳಿನಲ್ಲಿ ಫೆಬ್ರವರಿ 1ರಂದು ತಮ್ಮ ಮೂರನೇ ಬಜೆಟ್ ಮಂಡಸಲಿದ್ದು, 'ಹಿಂದೆಂದೂ ಇರದಂತೆ ಇರಲಿದೆ' ಎಂದು ಹೇಳಿದ್ದರು.

ತೆರಿಗೆ ಒಳಗೊಂಡಂತೆ ಹಣಕಾಸಿನ ನೀತಿ ಸೇರಿದ ನಾನಾ ಬಗೆಯ ತಜ್ಞರ ತಂಡಗಳ ಜತೆ ಚರ್ಚಿಸಿದ್ದಾರೆ. ಬಾಂಡ್ ಮಾರುಕಟ್ಟೆ; ವಿಮೆ; ಮೂಲಸೌಕರ್ಯ ಖರ್ಚು; ಆರೋಗ್ಯ ಮತ್ತು ಶಿಕ್ಷಣ ಬಜೆಟ್; ಸಾಮಾಜಿಕ ರಕ್ಷಣೆ; ಕೌಶಲ್ಯ; ನೀರಿನ ಕೊಯ್ಲು ಮತ್ತು ಸಂರಕ್ಷಣೆ; ನೈರ್ಮಲ್ಯ; ಎಂಜಿಎನ್‌ಆರ್‌ಇಜಿಎ; ಸಾರ್ವಜನಿಕ ವಿತರಣಾ ವ್ಯವಸ್ಥೆ; ಸುಲಲಿತ ವ್ಯಾಪಾರ; ಉತ್ಪಾದನೆ-ಸಂಬಂಧಿತ ಹೂಡಿಕೆ ಯೋಜನೆಯ ರಫ್ತು; ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಬ್ರ್ಯಾಂಡಿಂಗ್; ಸಾರ್ವಜನಿಕ ವಲಯದ ವಿತರಣಾ ಕಾರ್ಯವಿಧಾನಗಳು; ನಾವೀನ್ಯತೆ, ಹಸಿರು ಬೆಳವಣಿಗೆ; ಇಂಧನ ಮತ್ತು ವಾಹನಗಳ ಮಾಲಿನ್ಯರಹಿತ ಮೂಲಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ; ರೈಲ್ವೆ, ಬ್ಯಾಂಕ್​​​ಗಳಲ್ಲಿ ಟ್ರಾನ್ಸ್​ಲೇಟರ್​ ಕೆಲಸ ಮಾಡಲು ಬರಲಿವೆ ಅಲೆಕ್ಸಾ, ಗೂಗಲ್​ ಅಸಿಸ್ಟೆಂಟ್!

2022ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಮೂಲಸೌಕರ್ಯಗಳತ್ತ ಹೆಚ್ಚು ಗಮನ ಹರಿಸಲಾಗುವುದು ಎಂದು ಸೀತಾರಾಮನ್ ಭರವಸೆ ನೀಡಿದ್ದಾರೆ. ಇದನ್ನು ಬೆಳವಣಿಗೆಯ ಲೆಕ್ಕಾಚಾರವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಅರ್ಥಶಾಸ್ತ್ರಜ್ಞರು 2020-21ರಲ್ಲಿ ಆರ್ಥಿಕತೆಯು ಶೇ.7-9ರಷ್ಟು ಕುಗ್ಗುವ ನಿರೀಕ್ಷೆಯಿದೆ. ಆದರೆ, ಹಣಕಾಸು ಸಚಿವಾಲಯವು ಮುಂದಿನ ವರ್ಷದಲ್ಲಿ ಎರಡು ಅಂಕಗಳ ಬೆಳೆವಣಿಗೆ ಪುಟಿದೇಳಲಿದೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಕೋವಿಡ್ -19 ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಭಾರತೀಯ ಆರ್ಥಿಕತೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ಮೈನಸ್​ ಶೇ.-23.9ರಷ್ಟು ಕುಗ್ಗಿತು. ಡಿಸೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ 0.1ರಷ್ಟು ಮತ್ತು ಮಾರ್ಚ್ ಅಂತ್ಯಕ್ಕೆ ಶೇ.0.7ರಷ್ಟು ಬೆಳವಣಿಗೆಯನ್ನು ಶೇ.7.5ರಷ್ಟು ಸಂಕೋಚನದೊಂದಿಗೆ 2021ರ ವಿತ್ತೀಯ ವರ್ಷ ಕೊನೆಗೊಳ್ಳಲಿದೆ ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ. ಆದರೆ, ಹಣಕಾಸು ಸಚಿವಾಲಯವು ಡಿಸೆಂಬರ್ ತ್ರೈಮಾಸಿಕದಿಂದ ಆರ್ಥಿಕತೆಯಲ್ಲಿ ಅಲ್ಪ ಬೆಳವಣಿಗೆಗೆ ಎದುರು ನೋಡುತ್ತಿದೆ.

ಹಣಕಾಸು ಸಚಿವರು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವದ ಮೊದಲ ಸಮಾಲೋಚನೆಯಲ್ಲಿ ಕೈಗಾರಿಕೋದ್ಯಮಿಗಳು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹೊಸ ಸುತ್ತಿನ ಹಣಕಾಸಿನ ಪ್ರಚೋದನೆಗೆ ಕರೆ ಕೊಟ್ಟರು.

2021-22ರ ಬಜೆಟ್​ಗೆ ಆರ್ಥಿಕತೆಯ ಮೇಲೆ ಕೋವಿಡ್ -19ರ ಪ್ರಭಾವ ನಿವಾರಣೆಗೆ ನೆರವಾಗಲು ಹಣಕಾಸು ವಲಯದ ಬೆಳವಣಿಗೆ, ಹಣಕಾಸಿನ ಬಲವರ್ಧನೆ ಮತ್ತು ಬಲವರ್ಧನೆ ಕೇಂದ್ರೀಕೃತ ವಲಯಗಳಂತಹ ಮೂರು ಹಂತದ ಕಾರ್ಯತಂತ್ರಗಳಿಗೆ ಭಾರತೀಯ ಕೈಗಾರಿಕಾ ಒಕ್ಕೂಟ ಶಿಫಾರಸು ಮಾಡಿದೆ.

ಆದರೆ, ಫಿಕ್ಕಿ (ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್) ಅಸ್ತಿತ್ವದಲ್ಲಿರುವ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಮೂರಕ್ಕೆ ಸೀಮಿತಗೊಳಿಸಲು, ಸಂಕೀರ್ಣವಾದ ಮತ್ತು ವಿವಾದಗಳ ಸಂಭವನೀಯತೆ ಕಡಿಮೆ ಮಾಡಲು ಸಲಹೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.