ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್, ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ 33,737 ಕೋಟಿ ರೂ. ಹೂಡಿಕೆ ಮಾಡಿ ಶೇ 7.73ರಷ್ಟು ಷೇರು ಪಾಲು ಪಡೆಯಲಿದೆ.
ಆರ್‌ಐಎಲ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಖೇಶ್ ಅಂಬಾನಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿ, ನಮ್ಮ ಪ್ರಸ್ತುತ ಬಂಡವಾಳ ಸಂಗ್ರಹದ ಚಕ್ರ ಕೊನೆಗೊಳಿಸುತ್ತಿದ್ದಂತೆ ಮತ್ತೊಂದು ಕಾರ್ಯತಂತ್ರದ ಪಾಲುದಾರರನ್ನು ಜಿಯೋಗೆ ಸ್ವಾಗತಿಸಲು ಸಂತೋಷವಾಗುತ್ತದೆ ಎಂದರು.
ಗೂಗಲ್‌ನ ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ಗಳ 4.36 ಲಕ್ಷ ಕೋಟಿ ರೂ. ನಿಧಿಯಲ್ಲಿ ಏರಿಕೆಯಾಗಲಿದೆ. ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ಒಟ್ಟಾರೆ ಹೂಡಿಕೆ 1,52,056 ಕೋಟಿ ರೂ.ಯಷ್ಟು ಹೆಚ್ಚಳವಾಗಿದೆ.
ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಒಟ್ಟು 14 ಜಾಗತಿಕ ಕಂಪನಿಗಳು ಹೂಡಿಕೆಯ ಒಪ್ಪಂದ ಮಾಡಿಕೊಂಡಿವೆ. ಫೇಸ್ಬುಕ್- 43,573.62 ಕೋಟಿ ರೂ., ಸಿಲ್ವರ್ ಲೇಕ್ ಪಾರ್ಟ್‌ನರ್ಸ್- 6,655.75 ಕೋಟಿ ರೂ., ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್- 11,367 ಕೋಟಿ ರೂ., ಜನರಲ್ ಅಟ್ಲಾಂಟಿಕ್- 6,598.38 ಕೋಟಿ ರೂ., ಕೆಕೆಆರ್- 11,367 ಕೋಟಿ ರೂ., ಮುಬದಲಾ- 9,093.60 ಕೋಟಿ ರೂ., ಸಿಲ್ವರ್ ಲೇಕ್ ಪಾಟ್ನರ್ಸ್ 2ನೇ ಹೂಡಿಕೆ- 4,546.80 ಕೋಟಿ ರೂ., ಅಬುದಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ- 5,683.50 ಕೋಟಿ ರೂ., ಟಿಪಿಜಿ- 4,546.80 ಕೋಟಿ ರೂ., ಎಲ್ ಕಾಟರ್ಟನ್- 1,894.50 ಕೋಟಿ ರೂ., ಪಿಐಎಫ್- 11,367ಕೋಟಿ ರೂ., ಇಂಟೆಲ್ ಕ್ಯಾಪಿಟಲ್- 1,894.50 ಕೋಟಿ ರೂ., ಕ್ವಾಲ್ಕಾಮ್ ವೆಂಚರ್ಸ್- 730 ಕೋಟಿ ರೂ ಹಾಗೂ ಗೂಗಲ್‌ನ 33,737 ಕೋಟಿ ರೂ. ಹೂಡಿಕೆ ಮಾಡಿವೆ.