ನವದೆಹಲಿ: ಕೆಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಇ-ಸಿಗರೇಟ್ ನಿಷೇಧದ ಘೋಷಣೆಯ ಕುರಿತು ಪ್ರಕಟಿಸಿದ್ದರು. ಈ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಜುಂದಾರ್, ಇ-ಸಿಗರೇಟ್ ನಿಷೇಧಿಸಲಾಗುವುದು ಎಂದು ಸೀತಾರಾಮನ್ ಹೇಳುತ್ತಿದ್ದಾರೆ. ಆದರೆ, ಈ ಘೋಷನೆ ಆರೋಗ್ಯ ಸಚಿವಾಲಯದಿಂದ ಏಕೆ ಬರಲಿಲ್ಲ? ಅದೇ ರೀತಿಯಾಗಿ ಗುಟ್ಕಾ ಹೇಗೆ ನಿಷೇಧಿಸುತ್ತೀರಿ? ಮತ್ತು ಆರ್ಥಿಕ ಚೇತರಿಕೆಗೆ ಸಂಬಂಧಿಸಿದಂತೆ ಕ್ರಮಗಳೇನು? ಎಂದೆಲ್ಲಾ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತಾರಾಮನ್, ಕಿರಣ್ ಜೀ, ಕೆಲವು ವಿಷಯಗಳು, ಈ ಸುದ್ದಿಗೋಷ್ಠಿಯು ಸಚಿವ ಸಂಪುಟದ ನಿರ್ಧಾರಗಳಿಗೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಭೆ ನೇತೃತ್ವ ವಹಿಸಿದಾಗ ನಾನು ಸರ್ಕಾರದ ಸಚಿವ ಸಂಪುಟದ ಪ್ರತಿನಿಧಿಯಾಗಿದ್ದೇನೆ ಎಂದು ಹೇಳಿದ್ದೆ. ಡಾ. ಹರ್ಷವರ್ಧನ್ (ಆರೋಗ್ಯ ಸಚಿವ) ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಲು ವಿದೇಶದಲ್ಲಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.
-
Kiran ji, a few things. This press conference was dedicated to Cabinet decisions. I began by saying that I was there in my capacity as Chair of the GoM which has dealt with the matter. @drharshvardhan is out of country for an international meet. 1/3 https://t.co/oL1UXPqEvJ
— Nirmala Sitharaman (@nsitharaman) September 19, 2019 " class="align-text-top noRightClick twitterSection" data="
">Kiran ji, a few things. This press conference was dedicated to Cabinet decisions. I began by saying that I was there in my capacity as Chair of the GoM which has dealt with the matter. @drharshvardhan is out of country for an international meet. 1/3 https://t.co/oL1UXPqEvJ
— Nirmala Sitharaman (@nsitharaman) September 19, 2019Kiran ji, a few things. This press conference was dedicated to Cabinet decisions. I began by saying that I was there in my capacity as Chair of the GoM which has dealt with the matter. @drharshvardhan is out of country for an international meet. 1/3 https://t.co/oL1UXPqEvJ
— Nirmala Sitharaman (@nsitharaman) September 19, 2019
ಆರ್ಥಿಕ ಸುಧಾರಣೆಗಳ ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ, ನೀವು ನನ್ನನ್ನು ಗಮನಿಸಿರಬಹುದು. ನಾನು ಆರ್ಥಿಕತೆಯ ವಿಷಯಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ನಿಯಮಿತವಾಗಿ ಮಾತನಾಡುತ್ತಿದ್ದೇನೆ ಎಂದರು,
-
I now understand n I stand corrected. Tks for explaining my confusion. Really grateful for your response.
— Kiran Mazumdar Shaw (@kiranshaw) September 19, 2019 " class="align-text-top noRightClick twitterSection" data="
">I now understand n I stand corrected. Tks for explaining my confusion. Really grateful for your response.
— Kiran Mazumdar Shaw (@kiranshaw) September 19, 2019I now understand n I stand corrected. Tks for explaining my confusion. Really grateful for your response.
— Kiran Mazumdar Shaw (@kiranshaw) September 19, 2019
ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆಗೆ ಸಂತುಷ್ಟರಾದ ಕಿರಣ್ ಮಜುಂದಾರ್ ಶಾ ಅವರು, ನನ್ನ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ನಿಜವಾಗಿಯೂ ಕೃತಜ್ಞರಾಗಿರಬೇಕು ಎಂದು ಹೇಳಿದ್ದಾರೆ.