ETV Bharat / business

ವಾಣಿಜ್ಯ ವಾಹನಗಳ ಉಚಿತ ಸೇವೆ.. ವಾರಂಟಿ​ ಅವಧಿ ವಿಸ್ತರಿಸಿದ ಟಾಟಾ ಮೋಟಾರ್ಸ್ - ಟಾಟಾ ಮೋಟಾರ್ಸ್ ಲೆಟೆಸ್ಟ್​ ನ್ಯೂಸ್​

ಕೋವಿಡ್​-19 ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಹಲವು ರಾಜ್ಯ ಸರ್ಕಾರಗಳು ಘೋಷಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ, ಕಂಪನಿಯು 2021ರ ಏಪ್ರಿಲ್ 1ರಿಂದ ಜೂನ್ 30ರ ಅವಧಿ ನಡುವೆ ಮುಗಿಯುವ ತನ್ನ ಎಲ್ಲ ವಾಣಿಜ್ಯ ವಾಹನಗಳಿಗೆ ವಾರಂಟಿ ಮತ್ತು ಉಚಿತ ಸೇವಾ ಅವಧಿ ವಿಸ್ತರಿಸಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.

Tata Motors
Tata Motors
author img

By

Published : May 19, 2021, 3:03 PM IST

Updated : May 19, 2021, 3:09 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಏಪ್ರಿಲ್ 1 ಮತ್ತು ಜೂನ್ 30ರ ನಡುವೆ ವಾಯ್ದೆ ಹೊಂದಿರುವ ವಾಣಿಜ್ಯ ವಾಹನ ಗ್ರಾಹಕರಿಗೆ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಕೋವಿಡ್​-19 ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಹಲವು ರಾಜ್ಯ ಸರ್ಕಾರಗಳು ಘೋಷಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ, ಕಂಪನಿಯು 2021ರ ಏಪ್ರಿಲ್ 1ರಿಂದ ಜೂನ್ 30ರ ಅವಧಿ ನಡುವೆ ಮುಗಿಯುವ ತನ್ನ ಎಲ್ಲಾ ವಾಣಿಜ್ಯ ವಾಹನಗಳಿಗೆ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: ವಿಶೇಷ ಮರುಪಾವತಿ ಅಭಿಯಾನ ವಿಸ್ತರಿಸಲು ಕೇಂದ್ರ ವಿತ್ತ ಸಚಿವೆಗೆ ಎಫ್​​ಕೆಸಿಸಿಐ ಪತ್ರ

ಇದು ಒಂದು ತಿಂಗಳ ವಿಸ್ತರಣೆಯಾಗಲಿದ್ದು, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಟಾಟಾ ಮೋಟಾರ್ಸ್ ದೇಶದ ವಾಣಿಜ್ಯ ವಾಹನಗಳ ತಯಾರಕರಲ್ಲಿ ಪ್ರಮುಖವಾಗಿದೆ.

Last Updated : May 19, 2021, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.