ಹೈದರಾಬಾದ್: ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತುರ್ತು ಬಳಕೆಗಾಗಿ ಮತ್ತೊಂದು ಔಷಧಕ್ಕೆ ಅನುಮೋದ ನೀಡಲಾಗಿದೆ.
ಕೋವಿಡ್-19 ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ನ್ಯಾಟ್ಕೊ ಫಾರ್ಮಾ ತನ್ನ ಬ್ಯಾರಿಸಿಟಿನಿಬ್ ಮಾತ್ರೆಗಳ ತುರ್ತು ಬಳಕೆಗೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ನಿಂದ (ಸಿಡಿಎಸ್ಸಿಒ) ಅನುಮೋದನೆ ಪಡೆದಿದೆ.
ಸಿಡಿಎಸ್ಸಿಒ ತುರ್ತು ಚಿಕಿತ್ಸೆಗೆ ಬ್ಯಾರಿಸಿಟಿನಿಬ್ 1 ಮಿ.ಗ್ರಾಂ., 2ಮಿ.ಗ್ರಾಂ. ಮತ್ತು 4ಮಿ.ಗ್ರಾಂ. ಮಾತ್ರೆಗಳನ್ನು ಬಳಸಲು ಸೋಮವಾರ ಬೆಳಗ್ಗೆ ಅನುಮೋದನೆ ನೀಡಿದೆ ಎಂದು ನ್ಯಾಟ್ಕೊ ಫಾರ್ಮಾ ತಿಳಿಸಿದೆ. ಕೋವಿಡ್ -19 ಪಾಸಿಟಿವ್ ರೋಗಿಗಳ ಚಿಕಿತ್ಸೆಯಲ್ಲಿ ಈ ಬ್ಯಾರಿಸಿಟಿನಿಬ್ ಮಾತ್ರೆ ಬಳಸಲಾಗುತ್ತದೆ.
ದೇಶಾದ್ಯಂತದ ಕೊರೊನಾ ರೋಗಿಗಳಿಗೆ ಬ್ಯಾರಿಸಿಟಿನಿಬ್ ಪೂರೈಸಲು ಈ ವಾರ ಉತ್ಪಾದನೆ ಪ್ರಾರಂಭಿಸುವುದಾಗಿ ನ್ಯಾಟ್ಕೊ ಫಾರ್ಮಾ ಹೇಳಿದೆ.
ದೇಶದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ನೀಗಿಸಲು ‘ಬ್ಯಾರಿಸಿಟಿನಿಬ್’ ತುರ್ತು ಬಳಕೆಗೆ ನ್ಯಾಟ್ಕೊ ಫಾರ್ಮಾ ಅನುಮೋದನೆ ಪಡೆದಿದೆ. 'ಬ್ಯಾರಿಸಿಟಿನಿಬ್' ಔಷಧದ ಅನುಮೋದನೆಯೊಂದಿಗೆ ನ್ಯಾಟ್ಕೊ ಫಾರ್ಮಾದ ಷೇರುಗಳ ಬೆಲೆ ಏರಿಕೆಯತ್ತ ಸಾಗುತ್ತಿವೆ. ನ್ಯಾಟ್ಕೊ ಫಾರ್ಮಾ ಬ್ರಾಂಡೆಡ್, ಜೆನೆರಿಕ್ ಔಷಧ, ಬೃಹತ್ ಆಕ್ಟಿವೇಟರ್ ಮತ್ತು ಸ್ಟಾಕ್ಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುತ್ತದೆ.