ಮುಂಬೈ: ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಲಿಮಿಟೆಡ್ 27 ವರ್ಷಗಳ ಷೇರು ಮಾರುಕಟ್ಟೆ ಅವಧಿಯಲ್ಲಿ ಅಭೂತಪೂರ್ವ ದಾಖಲೆ ಸಾಧಿಸಿದೆ.
ಕಳೆದ ಎರಡುವರೆ ದಶಕಗಳ ಅವಧಿಯಲ್ಲಿ, ಸ್ಟಾಕ್ ರಿಟರ್ನ್ಸ್ನಲ್ಲಿ ಇನ್ಫೋಸಿಸ್ ಲಿಮಿಟೆಡ್, ಆದಾಯ ಬೆಳವಣಿಗೆ ಮತ್ತು ಇತರ ಹಣಕಾಸು ನಿಯತಾಂಕಗಳಲ್ಲಿ ಇದುವರೆಗಿನ ಅತ್ಯುತ್ತಮ ನೀಲಿ-ಚಿಪ್ ಕಂಪನಿಯಾಗಿದೆ.
2020ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರರ ನಿವ್ವಳ ಲಾಭದಲ್ಲಿ ಶೇ 20.5ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿ ಮಾಡಿದೆ. ಈ ನಂತರ ಇನ್ಫೋಸಿಸ್ ಷೇರು ಬೆಲೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು. ಬಿಎಸ್ಇನಲ್ಲಿ ಹಿಂದಿನ 1,136 ರೂ.ಗಳಿಗೆ 1,185 ರೂ. ಮಟ್ಟಕ್ಕೆ ಹೋದವು.
ಸಂಸ್ಥೆಯ ಮಾರುಕಟ್ಟೆ ಬಂಡವಾಳೀಕರಣವು ಮೊದಲ ಬಾರಿಗೆ 5 ಲಕ್ಷ ಕೋಟಿ ರೂ. ದಾಟಿದೆ. ಮಾರುಕಟ್ಟೆಯ ಕ್ಯಾಪ್ 5.04 ಲಕ್ಷ ಕೋಟಿ ರೂ.ಗೆ ಏರಿದ್ದು, ಟಿಟಿಎಸ್ ನಂತರ ಈ ಸಾಧನೆ ಮಾಡಿದ ಎರಡನೇ ಐಟಿ ಸಂಸ್ಥೆಯಾಗಿದೆ. ಇನ್ಫೋಸಿಸ್ ಷೇರು ಮೌಲ್ಯ (ಆರಂಭಿಕ ವಹಿವಾಟು) ಶೇ 4.2ರಷ್ಟು ಹೆಚ್ಚಳವಾಗಿ 1,184 ರೂ.ಗೆ ತಲುಪಿದೆ.
ಇನ್ಫೋಸಿಸ್ ಪಾಲು 5 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನಗಳ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ದೊಡ್ಡ ಬಂಡವಾಳ ಸ್ಟಾಕ್ ಈ ವರ್ಷದ ಆರಂಭದಿಂದ ಶೇ 53.88ರಷ್ಟು ಗಳಿಕೆಯಾಗಿದೆ. ಒಂದು ವರ್ಷದಲ್ಲಿ ಶೇ 46.65ರಷ್ಟು ಏರಿಕೆ ಆಗಿದ್ದರೇ ಒಂದು ತಿಂಗಳಲ್ಲಿ ಷೇರು ಮೌಲ್ಯ ಶೇ 14.68ರಷ್ಟು ಗಳಿಕೆ ಕಂಡಿದೆ.
ಒಟ್ಟು 18.52 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ 212.95 ರೂ. ಈ ಷೇರು ತನ್ನ 52 ವಾರಗಳ ಕನಿಷ್ಠ ಮಟ್ಟದಿಂದ ಶೇ 132ರಷ್ಟು ಗಳಿಸಿದೆ. ಈ ಷೇರು 2020ರ ಮಾರ್ಚ್ 19ರಂದು 52 ವಾರಗಳ ಕನಿಷ್ಠ 511 ರೂ.ಗೆ ತಲುಪಿದೆ.
ಇನ್ಫೋಸಿಸ್ ಲಿಮಿಟೆಡ್ ತನ್ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಅನ್ನು 1993ರ ಫೆಬ್ರವರಿಯಲ್ಲಿ ಪ್ರಾರಂಭಿಸಿತು. 1993ರ ಜೂನ್ 14ರಂದು ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಇನ್ಫೋಸಿಸ್ ಷೇರು ಬೆಲೆ ಶೇ 1,600ಕ್ಕಿಂತ ಅಧಿಕ 1184 ರೂ.ಯಷ್ಟು ಹಿಂದಿರುಗಿಸಿದೆ (ಎಲ್ಲಾ ಬೋನಸ್, ಸ್ಟಾಕ್ ಸ್ಪ್ಲಿಟ್ ಇತ್ಯಾದಿಗಳ ಹೊಂದಾಣಿಕೆ). ಐಪಿಒ ಸಮಯದಲ್ಲಿ ಇನ್ಫೋಸಿಸ್ ಷೇರುಗಳಲ್ಲಿ 10,000 ರೂ. ಹೂಡಿಕೆ ಮಾಡಲಾಗಿತ್ತು. ಈ 27 ವರ್ಷಗಳ ಅವಧಿಯಲ್ಲಿ 5.04 ಲಕ್ಷ ಕೋಟಿಗೆ ಏರಿಕೆಯಾಗಿದೆ.