ETV Bharat / business

ರಿಲಯನ್ಸ್​- ಫ್ಯೂಚರ್ ಡೀಲ್​: ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ದಿಲ್ಲಿ ಹೈಕೋರ್ಟ್​ ತಡೆ - ರಿಲಯನ್ಸ್​- ಫ್ಯೂಚರ್ ಒಪ್ಪಂದ

ರಿಲಯನ್ಸ್ ರೀಟೇಲ್ ಕಂಪನಿಯೊಂದಿಗೆ 24,713 ಕೋಟಿ ರೂ. ವ್ಯವಹಾರ ನಡೆಸಲು ರಿಲಯನ್ಸ್ ರಿಟೇಲ್ ಕಂಪನಿ ಜತೆ ಮಾಡಿಕೊಂಡ ಒಪ್ಪಂದ ತಡೆ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

HC
HC
author img

By

Published : Mar 22, 2021, 2:01 PM IST

ನವದೆಹಲಿ: ಫ್ಯೂಚರ್ ರಿಟೇಲ್ ಲಿಮಿಟೆಡ್ ತನ್ನ ವ್ಯವಹಾರ ಮಾರಾಟ ಮಾಡಲು ರಿಲಯನ್ಸ್ ರಿಟೇಲ್ ಜೊತೆ 24,713 ಕೋಟಿ ರೂ. ಒಪ್ಪಂದ ಮುಂದುವರಿಸುವುದನ್ನು ತಡೆಯುವ ಏಕ ನ್ಯಾಯಾಧೀಶರ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ತಡೆ ಹಿಡಿದಿದೆ. ಅಮೆರಿಕ ಮೂಲದ ಇಕಾಮರ್ಸ್ ದೈತ್ಯ ಅಮೆಜಾನ್ ಒಪ್ಪಂದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಅಮೆಜಾನ್​ಗೆ ಫ್ಯೂಚರ್ ಗ್ರೂಪ್​ನ ಮೇಲ್ಮನವಿಯ ಬಗ್ಗೆ ನೋಟಿಸ್ ನೀಡಿತು. ಏಪ್ರಿಲ್ 30ರಂದು ಹೆಚ್ಚಿನ ವಿಚಾರಣೆಗೆ ನ್ಯಾಯಪೀಠವು ಮುಂದೂಡಿದೆ.

ಇದನ್ನೂ ಓದಿ: ಮೋದಿ ಎಕಾನಮಿ ಆಕಾಶಕ್ಕೆ ಮುತ್ತಿಕ್ಕಲು ನಾಲ್ಕು ಅಡ್ಡಿ!

ಫ್ಯೂಚರ್ ಗ್ರೂಪ್‌ನ ಕಿಶೋರ್ ಬಿಯಾನಿ ಮತ್ತು ಇತರರ ಆಸ್ತಿಗಳನ್ನು ಅಟ್ಯಾಚ್ ಮಾಡುವಂತೆ ಮತ್ತು ಏಪ್ರಿಲ್ 28ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿದ ಏಕ ನ್ಯಾಯಾಧೀಶರ ಆದೇಶವನ್ನೂ ಅದು ತಡೆಹಿಡಿದಿದೆ.

ಸಿಂಗಪುರದ ಮಧ್ಯಸ್ಥಿಕೆದಾರರಿಂದ 2020ರ ಅಕ್ಟೋಬರ್ 25ರಂದು ತೀರ್ಪು ಜಾರಿಗೊಳಿಸಲು ಆದೇಶ ನೀಡುವಂತೆ ಕೋರಿ ಅಮೆಜಾನ್ ಮಾಡಿದ ಮನವಿಯ ಮೇರೆಗೆ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಆದೇಶ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.