ETV Bharat / business

ವಿಷಾನಿಲ ಸೋರಿಕೆ ನಿಯಂತ್ರಣಕ್ಕೆ ಬಂದಿದೆ:  ಎಲ್​​ಜಿ ಕೆಮ್​ ಸ್ಪಷ್ಟನೆ

author img

By

Published : May 7, 2020, 4:21 PM IST

ಸ್ಥಾವರ ನಿರ್ವಹಣೆಯ ಹೊಣೆಹೊತ್ತ ಎಲ್​ಜಿ ಕೆಮ್, ಸ್ಥಳೀಯರ ಮತ್ತು ಉದ್ಯೋಗಿಗಳಿಗೆ ನೆರವಾಗಲು ಭಾರತೀಯ ಅಧಿಕಾರಿಗಳೊಂದಿಗೆ ಸಹಕರಿಸಲಾಗುತ್ತಿದೆ ಎಂದು ಭರವಸೆ ನೀಡಿದೆ.

LG Chem
ಎಲ್​ಜಿ ಕೆಮ್

ನವದೆಹಲಿ: ಕನಿಷ್ಠ ಎಂಟು ಜನರನ್ನು ಬಲಿ ತೆಗೆದುಕೊಂಡ ವಿಶಾಖಪಟ್ಟಣಂ ಪಾಲಿಮರ್ ಸ್ಥಾವರದಲ್ಲಿನ ಅನಿಲ ಸೋರಿಕೆ ಈಗ ನಿಯಂತ್ರಣದಲ್ಲಿದೆ ಎಂದು ದಕ್ಷಿಣ ಕೊರಿಯಾದ ಮೂಲದ ಎಲ್‌ಜಿ ಕೆಮ್ ಸಂಸ್ಥೆ ತಿಳಿಸಿದೆ.

ಸ್ಥಾವರ ನಿರ್ವಹಣೆಯ ಹೊಣೆಹೊತ್ತ ಎಲ್​ಜಿ ಕೆಮ್, ಸ್ಥಳೀಯರ ಮತ್ತು ಉದ್ಯೋಗಿಗಳಿಗೆ ನೆರವಾಗಲು ಭಾರತೀಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿವೆ ಎಂದು ಭರವಸೆ ನೀಡಿದೆ.

ಅನಿಲ ಸೋರಿಕೆ ಈಗ ನಿಯಂತ್ರಣದಲ್ಲಿದೆ. ಆದರೆ, ಸೋರಿಕೆಯಾದ ಅನಿಲವು ವಾಂತಿ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಆದ್ದರಿಂದ ಸರಿಯಾದ ಚಿಕಿತ್ಸೆಯನ್ನು ತ್ವರಿತವಾಗಿ ಒದಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಎಲ್​ಜಿ ಕೆಮ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಲಾಸ್ಟಿಕ್ ಉತ್ಪಾದನೆಗೆ ಬಳಸಲಾಗುವ ಸ್ಟೈರೀನ್ ಮೊನೊಮರ್ ಅನಿಲದ ಸೋರಿಕೆಗೆ ಕಾರಣವೇನು ಎಂಬುದನ್ನ ಸಂಸ್ಥೆ ಪರಿಶೀಲಿಸುತ್ತಿದೆ.

ಹಾನಿಯ ವ್ಯಾಪ್ತಿ, ಸೋರಿಕೆ ಮತ್ತು ಸಾವುಗಳಿಗೆ ನಿಖರವಾದ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ಅವಘಡ ಸಮಯದಲ್ಲಿ ಕೊರೊನಾ ವೈರಸ್ ಲಾಕ್​ಡೌನ್ ಆಗಿರುವುದರಿಂದ ಸ್ಥಾವರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಎಲ್​ಜಿ ಕೆಮ್​ನ ಯಾವುದೇ ಉದ್ಯೋಗಿಗಳು ಸಾವನ್ನಪ್ಪಿಲ್ಲ ಎಂದು ಇದೇ ವೇಳೆ ಸಂಸ್ಥೆ ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.