ETV Bharat / business

ಮುಂಬೈ ಏರ್​ಪೋರ್ಟ್​ ಹಗರಣ: ಜಿವಿಕೆ ಗ್ರೂಪ್​​, ಮಿಯಾಲ್​ ಪ್ರವರ್ತಕರ ಮನೆ, ಕಚೇರಿಗಳ ಮೇಲೆ ಇಡಿ ದಾಳಿ - ವಾಣಿಜ್ಯ ಸುದ್ದಿ

ಇಡಿ ಅಧಿಕಾರಿಗಳು ಮುಂಬೈ ಮತ್ತು ಹೈದರಾಬಾದ್‌ನ 9 ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ. ಜಿವಿಕೆ ಸಮೂಹ ಸಂಸ್ಥೆಗಳು ಮತ್ತು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಕಚೇರಿಗಳಲ್ಲಿ ಶೋಧ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Mumbai airport
ಮುಂಬೈ ಏರ್​ಪೋರ್ಟ್​
author img

By

Published : Jul 28, 2020, 5:18 PM IST

ನವದೆಹಲಿ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯ 705 ಕೋಟಿ ರೂ. ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಜಿವಿಕೆ ಗ್ರೂಪ್ ಹಾಗೂ ಮಿಯಾಲ್​ ಪ್ರವರ್ತಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಇಡಿ ಅಧಿಕಾರಿಗಳು ಮುಂಬೈ ಮತ್ತು ಹೈದರಾಬಾದ್‌ನ ಒಂಬತ್ತು ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ. ಜಿವಿಕೆ ಸಮೂಹ ಸಂಸ್ಥೆಗಳು ಮತ್ತು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಕಚೇರಿಗಳಲ್ಲಿ ಶೋಧ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿದೆ ಮುಂಬೈ ಇಂಟರ್​ನ್ಯಾಷನಲ್​ ಏರ್​ಪೋರ್ಟ್ ಲಿಮಿಟೆಡ್​ (ಎಂಐಎಎಲ್​) ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 705 ಕೋಟಿ ಮೊತ್ತದ ಅಕ್ರಮ ಸಂಬಂಧ, ಜಾರಿ ನಿರ್ದೇಶನಾಲಯವು ಜಿವಿಕೆ, ಎಂಐಎಎಲ್​ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಅಡಿ ದೂರು ದಾಖಲಿಸಿಕೊಂಡಿತ್ತು.

ಪಿಎಂಎಲ್​​ ದೂರನ್ನು ಕೂಲಂಕಶವಾಗಿ ಪರಿಶೀಲಿಸಿದ ಬಳಿಕ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂಸ್ಥೆಗಳ ವಿರುದ್ಧ ಸಿಬಿಐ ಕೂಡ ಎಫ್‌ಐಆರ್‌ ದಾಖಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.