ETV Bharat / business

ಕುಡಿದ ಅಮಲಿನಲ್ಲಿ ಕೆಲಸಕ್ಕೆ ಹೋಗುತ್ತೀರಾ..? ಹಾಗಿದ್ದರೇ ಈ ಪರೀಕ್ಷೆಗೆ ಸಿದ್ಧರಾಗಿ..

ಚೆನ್ನೈ ಮೂಲದ ರಾಮ್‌ಕೊ ಸಿಸ್ಟಮ್ಸ್ ಕುಡಿದು ಕಚೇರಿಗೆ ಬರುವ ನೌಕರರನ್ನು ಪತ್ತೆ ಹಚ್ಚಲು ಹಾಗೂ ಅವರನ್ನು ನಿಯಂತ್ರಿಸಲು ಉಸಿರಾಟ ವಿಶ್ಲೇಷಕ ಹಾಜರಾತಿ ಯಂತ್ರ ಅಳವಡಿಸಿಕೊಂಡಿದೆ. ಯಾವುದೇ ನೌಕರ ಮದ್ಯ ಸೇವನೆ ಮಾಡಿ ಬಂದರೆ ಹಾಜರಾತಿ ಯಂತ್ರದಲ್ಲಿನ ಉಸಿರಾಟ ವಿಶ್ಲೇಷಕ ತನ್ನಲ್ಲಿನ ಅಪ್ಲಿಕೇಶನ್ ಮೂಲಕ ತಕ್ಷಣವೇ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಿಗೆ (ಎಚ್​ಆರ್​ಎಂ) ಸಂದೇಶ ಕಳುಹಿಸುತ್ತದೆ.

ಸಾಂದರ್ಭಿಕ ಚಿತ್ರ
author img

By

Published : Aug 13, 2019, 9:16 AM IST

ನವದೆಹಲಿ:ಮದ್ಯಪಾನದ ಅಮಲಿನಲ್ಲಿ ಕಚೇರಿಗೆ ಬರುವವರನ್ನು ಪತ್ತೆ ಹಚ್ಚುವ ಉಸಿರಾಟ ವಿಶ್ಲೇಷಕ ಹಾಜರಾತಿ ವ್ಯವಸ್ಥೆಯ ಯಂತ್ರವನ್ನು ಚೆನ್ನೈ ಮೂಲದ ಕಂಪನಿಯೊಂದು ಶೋಧಿಸಿದೆ.

ಚೆನ್ನೈ ಮೂಲದ ರಾಮ್‌ಕೊ ಸಿಸ್ಟಮ್ಸ್, ಕುಡಿದು ಕಚೇರಿಗೆ ಬರುವ ನೌಕರರನ್ನು ಪತ್ತೆ ಹಚ್ಚಲು ಹಾಗೂ ಅವರನ್ನು ನಿಯಂತ್ರಿಸಲು ಉಸಿರಾಟ ವಿಶ್ಲೇಷಕ ಹಾಜರಾತಿ ಯಂತ್ರ ಅಳವಡಿಸಿಕೊಂಡಿದೆ. ಯಾವುದೇ ನೌಕರ ಮದ್ಯ ಸೇವಿಸಿದರೆ ಹಾಜರಾತಿ ಯಂತ್ರದಲ್ಲಿನ ಉಸಿರಾಟ ವಿಶ್ಲೇಷಕ ತನ್ನಲ್ಲಿನ ಅಪ್ಲಿಕೇಶನ್ ಮೂಲಕ ತಕ್ಷಣವೇ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಿಗೆ (ಎಚ್​ಆರ್​ಎಂ) ಸಂದೇಶ ಕಳುಹಿಸುತ್ತದೆ.

ಕಂಪನಿಯ ಪ್ರಕಾರ ಆಲ್ಕೋಹಾಲ್ ಸೇವನೆಯಿಂದ ಕಚೇರಿಯ ಕೆಲಸ ಮೇಲಾಗುವ ಪರಿಣಾಮಗಳನ್ನು ತಪ್ಪಿಸಲು ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಇದು ಸ್ವಯಂಚಾಲಿತ ಶೈಲಿಯಲ್ಲಿ ಇನ್ನೊಬ್ಬ ಸಿಬ್ಬಂದಿಯ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸುತ್ತದೆ.

ಮದ್ಯಪಾನದ ಜೊತೆಗೆ ಮಾದಕ ದ್ರವ್ಯ ಸೇವನೆಯನ್ನು ಸಹ ಪತ್ತೆ ಹಚ್ಚುಲಿದೆ. ಮಾದಕ ದ್ರವ್ಯ ಸೇವಿಸುವ ನೌಕರರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಂಪನಿ, 'ಮಾದಕ ದ್ರವ್ಯ ಸೇವನೆಯ ನೌಕರರ ಬಗ್ಗೆ ಸುಧಾರಿತ ಅಧ್ಯಯನ ಮಾಡುವ ಕುರಿತು ಚಿಂತಿಸುತ್ತಿದ್ದೇವೆ' ಎಂದು ರಾಮ್‌ಕೊ ಸಿಸ್ಟಮ್ಸ್ ಸಿಇಒ ವೀರೇಂದ್ರ ಅಗರ್ವಾಲ್ ತಿಳಿಸಿದರು.

ಜರ್ಮನಿ ಮೂಲದ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯದ ಟಿಯು ಡ್ರೆಸ್ಡೆನ್ ಅವರ ಇತ್ತೀಚಿನ ವರದಿಯ ಪ್ರಕಾರ, 2010 ಮತ್ತು 2017ರ ನಡುವೆ ಭಾರತದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಶೇ.38ರಷ್ಟು ಹೆಚ್ಚಾಗಿದೆ. ವಯಸ್ಕರ ವಾರ್ಷಿಕ ಮದ್ಯ ಸೇವನೆ ಪ್ರಮಾಣ 4.3ರಿಂದ 5.9 ಲೀಟರ್​ಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ಜನವರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ​​(ಡಿಜಿಸಿಎ) 2015 ರಿಂದ 171 ಭಾರತೀಯ ಪೈಲಟ್‌ಗಳು ವಿಮಾನ ಟೇಕಾಫ್ ಆಗುವ ಮೊದಲು ಕುಡಿದು ಸಿಕ್ಕಿಬಿದ್ದಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿಯೂ ಸಹ ಇಂತಹ ಪ್ರಕರಣಗಳು ನಡೆದಿವೆ ಎಂದು ಹೇಳಿದೆ. ಹೀಗಾಗಿ, ನೌಕರರು ಮದ್ಯ ಸೇವಿಸಿ ಕಚೇರಿಗೆ ಬರುವುದನ್ನು ಕಂಪನಿಗಳು ಗಂಭೀರವಾಗಿ ತೆಗೆದುಕೊಂಡು ತಂತ್ರಜ್ಞಾನದ ಮೊರೆ ಹೋಗುತ್ತಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.