ಮುಂಬೈ: ಷೇರು ವಿನಿಮಯದ ನಿಯಮಗಳನ್ನು ಉಲ್ಲಂಘಿಸಿದ ಕಾರ್ವಿ ಬ್ರೋಕಿಂಗ್ ಕಂಪನಿಯ ವಹಿವಾಟಿಗೆ ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ) ನಿರ್ಬಂಧ ಹೇರಿ ಪೇಟೆಯಿಂದ ಹೊರಹಾಕಿದೆ.
ಅದೇ ರೀತಿಯಾಗಿ ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) ಕೂಡ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ಅನ್ನು ಟ್ರೇಡಿಂಗ್ ಟರ್ಮಿನಲ್ಗಳ ಈಕ್ವಿಟಿ ಮತ್ತು ಸಾಲ ವಿಭಾಗದಿಂದ ನಿಷೇಧ ಹೇರಿದೆ.
2019ರ ಡಿಸೆಂಬರ್ 2ರಂದು ವಿನಿಮಯ ವಹಿವಾಟಿನ ಸದಸ್ಯತ್ವ ಪಡೆದ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ಅನ್ನು ಅಮಾನತುಗೊಳಿಸಲಾಗಿದೆ ಎಂದು ಬಿಎಸ್ಇ ಸುತ್ತೋಲೆಯಲ್ಲಿ ತಿಳಿಸಿದೆ.
ಪವರ್ ಆಫ್ ಅಟಾರ್ನಿ (ಪಿಒಎ)ಯನ್ನು ದುರ್ಬಳಕೆ ಮಾಡಿಕೊಂಡು ಗ್ರಾಹಕರ ಭದ್ರತಾ ಮೊತ್ತ ದುರುಪಯೋಗಪಡಿಸಿಕೊಂಡಿದೆ ಎಂದು ಅರಿತ ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ನವೆಂಬರ್ 22ರಂದು ನಿಷೇಧ ಆದೇಶ ಅಂಗೀಕರಿಸಿದೆ. ಕಾರ್ವಿ ತನ್ನ ಸ್ಟಾಕ್ ಬ್ರೋಕಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಗ್ರಾಹಕರನ್ನು ಹೊಂದುವುದನ್ನು ಅದು ನಿರ್ಬಂಧ ಹಾಕಿದೆ.