ETV Bharat / business

Dark Range ಜೊತೆ ತನ್ನ ಪ್ಯಾಸೆಂಜರ್ ವಾಹನಗಳಲ್ಲಿನ ಪ್ರೀಮಿಯಮ್ ಪ್ರಮಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ದ ಟಾಟಾ ಮೋಟರ್ಸ್ - ಡಾರ್ಕ್ ರೇಂಜ್ ನೆಕ್ಸಾನ್

ಟಾಟಾ ಮೋಟರ್ಸ್ ಭಾರತದ ಪ್ಯಾಸೆಂಜರ್ ವಾಹನಗಳ ಮಾರುಕಟ್ಟೆಯಲ್ಲಿ ಅದ್ವಿತೀಯ ಕಾರ್ಯಕ್ಷಮತೆ ಪ್ರದರ್ಶಿಸಿದೆ. ತನ್ನ ವ್ಯಾಪಾರ ಹಾಗು ಬೆಂಬಲ ಪರಿಸರವ್ಯವಸ್ಥೆಯ ಕ್ಷೇಮಾಭಿವೃದ್ಧಿಗಾಗಿ ಸಂಸ್ಥೆಯು, ತನ್ನ ಗ್ರಾಹಕರು, ಡೀಲರುಗಳು ಹಾಗು ಸರಬರಾಜುದಾರರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಒಂದು ಸಮಗ್ರವಾದ ‘ವ್ಯಾಪಾರ ಚುರುಕುತನ ಯೋಜನೆ(ಬಿಜಿನೆಸ್ ಎಜಿಲಿಟಿ ಪ್ಲಾನ್)ಅನ್ನು ಸ್ಥಾಪಿಸಿರುವುದಾಗಿ ಇತ್ತೀಚೆಗೆ ಘೋಷಿಸಿತ್ತು.

Tata motors dark range cars
Dark Range ಜೊತೆ ತನ್ನ ಪ್ಯಾಸೆಂಜರ್ ವಾಹನಗಳಲ್ಲಿನ ಪ್ರೀಮಿಯಮ್ ಪ್ರಮಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ದ ಟಾಟಾ ಮೋಟರ್ಸ್
author img

By

Published : Jul 7, 2021, 10:45 PM IST

ಬೆಂಗಳೂರು : ಭಾರತದ ಮುಂಚೂಣಿ ಆಟೋಮೋಟಿವ್ ಬ್ರ್ಯಾಂಡುಗಳ ಪೈಕಿ ಒಂದಾದ ಟಾಟಾ ಮೋಟರ್ಸ್ ಇಂದು #Dark Range (ಡಾರ್ಕ್ ರೇಂಜ್) ಅನ್ನು ಬಿಡುಗಡೆ ಮಾಡಿದ್ದು ಇದು ಭಾರತದ ಅತಿಸುರಕ್ಷಿತ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಆಲ್ಟ್ರೋಜ್, ಭಾರತದ ಪ್ರಪ್ರಥಮ ಜಿಎನ್‍ಸಿಎಪಿ 5 ನಕ್ಷತ್ರಗಳ ಪ್ರಮಾಣದ ಕಾರ್ ನೆಕ್ಸಾನ್, ಲ್ಯಾಂಡ್ ರೋವರ್ ಡಿಎನ್‍ಎ ಇರುವ ಅದರ ಪ್ರೀಮಿಯಮ್ ಎಸ್‍ಯುವಿ ಹ್ಯಾರಿಯರ್ ಮತ್ತು ಭಾರತದ ಅತ್ಯಧಿಕ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರ್ ನೆಕ್ಸಾನ್ ಇವಿಯನ್ನು ಒಳಗೊಂಡಿದೆ.

ಆಗಸ್ಟ್ 19ರಲ್ಲಿ ಪರಿಚಯಿಸಲ್ಪಟ್ಟಿದ್ದ ಹ್ಯಾರಿಯರ್ (Harrier #Dark), ಹ್ಯಾರಿಯರ್​​​ನ ಸ್ಟೈಲ್ ಮತ್ತು ಪ್ರೀಮಿಯರ್ ಪ್ರಮಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿತ್ತು. ಪ್ರಬಲವಾದ, ಸೂಕ್ಷ್ಮತೆಯುಳ್ಳ ಮತ್ತು ಸ್ಟೈಲಿಶ್ ಆದ ಎಸ್‍ಯುವಿಯನ್ನು ಅರಸುತ್ತಿದ್ದ ಗ್ರಾಹಕರಿಗೆ ಅದು ತಡೆಯಲಾರದ ಪ್ಯಾಕೆಜ್ ಒದಗಿಸಿತ್ತು. ಹೊರಾಂಗಣ ಹಾಗು ಒಳಾಂಗಣದಲ್ಲಿನ ಡಾರ್ಕ್ ಥೀಮ್ ಹ್ಯಾರಿಯರ್ ಡಾರ್ಕ್‍ಗೆ ಒಂದು ವಿಶಿಷ್ಟವಾದ ಗುರುತನ್ನು ನೀಡಿತ್ತು. ವಿಶಿಷ್ಟವಾದ ಡಾರ್ಕ್ ಫಿನಿಶ್, ವಿಶೇಷ ಬ್ಲ್ಯಾಕ್‍ಸ್ಟೋನ್ ಮ್ಯಾಟ್ರಿಕ್ಸ್ ಡ್ಯಾಶ್‍ಬೋರ್ಡ್, ಮತ್ತು ಪ್ರೀಮಿಯಮ್ ಡಾರ್ಕ್ ಅಪ್‍ಹೋಲ್ಸ್​ಟಿ ಮುಂತಾದ ಬದಲಾವಣೆಗಳು ಮೆಚ್ಚುಗೆಗೆ ಪಾತ್ರವಾಗಿದ್ದವು ಮತ್ತು ದಟ್ಟವಾದ ಎಸ್‍ಯುವಿ ವರ್ಗದಲ್ಲಿ ಹ್ಯಾರಿಯರ್ ಡಾರ್ಕ್ ಎದ್ದು ಕಾಣಲು ನೆರವಾಗಿದ್ದವು. ಎಂದೆಂದಿಗೂ ಹೊಸತು (ನ್ಯೂ ಫಾರ್ ಎವರ್) ಸಿದ್ಧಾಂತದ ಭಾಗವಾಗಿ ಟಾಟಾ ಮೋಟರ್ಸ್ ತನ್ನ ಪೋರ್ಟ್​ಪೊಲಿಯಾದ ಇನ್ನೂ ಎರಡು ಮಹತ್ವಾಕಾಂಕ್ಷೆಯ ಬ್ರ್ಯಾಂಡುಗಳಿಗೆ #Dark ಫ್ರಾಂಚೈನ್‍ ಅನ್ನು ವಿಸ್ತರಿಸಲಿದೆ.

ಡಾರ್ಕ್ ಶ್ರೇಣಿಯು ಡೀಲರ್​ಶಿಪ್​ಗಳಲ್ಲಿ ಲಭ್ಯವಿದ್ದು, ಬುಕಿಂಗ್‍ಗೆ ತೆರೆದಿದೆ. ಗ್ರಾಹಕರು ಈ ವಿಶಿಷ್ಟ ಅನುಭವದಲ್ಲಿ ತೊಡಗಿಕೊಳ್ಳುವುದಕ್ಕಾಗಿ ಎಲ್ಲಾ ಅಧಿಕೃತ ಟಾಟಾ ಮೋಟರ್ಸ್ ಡೀಲರ್​ಶಿಪ್​ಗಳನ್ನು ಡಾರ್ಕ್ ಥೀಮ್‍ನಲ್ಲಿ ಅಲಂಕರಿಸಲಾಗಿದೆ. ಹೆಚ್ಚುವರಿಯಾಗಿ, ಸೌಂದರ್ಯ ಹೆಚ್ಚಿಸಿ ಸ್ಟೈಲಿಂಗ್‍ಅನ್ನು ಎತ್ತಿತೋರಿಸಲು ಸಂಸ್ಥೆಯು #Dark ಬ್ರ್ಯಾಂಡ್ ಆದ ಪ್ರೀಮಿಯಮ್ ಚರ್ಮದ ಜಾಕೆಟ್‍ಗಳು ಮತ್ತು ಟಿ-ಶರ್ಟ್‍ಗಳನ್ನು ಒಳಗೊಂಡ ವಿಶೇಷ ಸರಕುಗಳನ್ನೂ ಪರಿಚಯಿಸುತ್ತಿದೆ. ಇದರ ಜೊತೆಗೆ, ಗರಿಷ್ಟ ಸುರಕ್ಷಿತಯನ್ನು ಗಮನದಲ್ಲಿರಿಸಿಕೊಂಡು ಸಂಸ್ಥೆಯು, ಶ್ರೇಣಿಯ ಅನುಕೂಲತೆ ಪರಿಮಾಣವನ್ನು ಹೆಚ್ಚಿಸುವ ಸಲುವಾಗಿ, ಟೈರ್ ಪಂಕ್ಚರ್ ಕಿಟ್‍ಅನ್ನು ಆದ್ಯತೆಯ ಕೊಡುಗೆಯನ್ನಾಗಿ ಪರಿಚಯಿಸುತ್ತಿದೆ.

ಈ ವಿಶೇಷ ಶ್ರೇಣಿಯ ಪರಿಚಯದ ಬಗ್ಗೆ ಮಾತನಾಡುತ್ತಾ, ಟಾಟಾ ಮೋಟರ್ಸ್‍ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ವಿವೇಕ್ ಶ್ರಿವಾಸ್ತವ ಅವರು “ಆರಂಭದಲ್ಲಿ ಸೀಮಿತ ಆವೃತ್ತಿ ಉತ್ಪನ್ನವಾಗಿ ಬಿಡುಗಡೆಯಾದ Harrier #Dark ಅತ್ಯುತ್ತಮ ಪ್ರದರ್ಶನ ನೀಡಿತ್ತು ಮತ್ತು ಗ್ರಾಹಕರ ಬೇಡಿಕೆಯ ಮೇರೆಗೆ ಹ್ಯಾರಿಯರ್ ಪೋರ್ಟ್​ಪೊಲಿಯೊದ ಅವಿಭಾಜ್ಯ ಅಂಗವಾಯಿತು. ಗ್ರಾಹಕರಿಗೆ ಅದು ವಿಶಿಷ್ಟವಾದ ಹಾಗು ಕೌತುಕಮಯವಾದ ಪ್ಯಾಕೇಜ್ ಒದಗಿಸಿತ್ತು. ವಿಸ್ತರಿತ ಡಾರ್ಕ್ ಶ್ರೇಣಿಯು ಕೂಡ ಅಷ್ಟೇ ಆಕರ್ಷಕವಾಗಿದ್ದು, ಈ ಹಬ್ಬದ ಋತುವಿನಲ್ಲಿ ಪ್ರಬಲವಾದ ಮತ್ತು ಸ್ಟೈಲಿಶ್ ಆದ ಕಾರುಗಳ ನಿರೀಕ್ಷೆಯಲ್ಲಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ನಮಗಿದೆ.” ಎಂದರು.

ಡಾರ್ಕ್ ರೇಂಜ್ ಕುರಿತು

ಆಲ್ಟ್ರೋಜ್ ಡಾರ್ಕ್: ಆಲ್ಟ್ರೋಜ್ ಸದಾ ತನ್ನ ಭವಿಷ್ಯಮುಖಿ ವಿನ್ಯಾಸ ಮತ್ತು ಸ್ಟೈಲ್‍ಗಾಗಿ ಮೆಚ್ಚುಗೆ ಪಡೆದಿತ್ತು. ಈ ವೈವಿಧ್ಯದ ಶ್ರೇಣಿಯಲ್ಲಿ ಅಗ್ರಮಾನ್ಯವಾಗಿರುವ ಆಲ್ಟ್ರೋಜ್ ಡಾರ್ಕ್, R16 ಅಲಾಯ್ ವ್ಹೀಲ್‍ಗಳ ಮೇಲೆ ಡಾರ್ಕ್ ಟಿಂಟ್ ಹಾಗೂ ಹುಡ್ ಉದ್ದಕ್ಕೂ ಪ್ರೀಮಿಯಮ್ ಡಾರ್ಕ್ ಕ್ರೋಮ್ ಇರುವ ಹೊಸ ಕಾಸ್ಮೋ ಬ್ಲ್ಯಾಕ್ ಹೊರಾಂಗಣ ಬಾಡಿ ವರ್ಣದೊಂದಿಗೆ ಬಂದಿದೆ. ಲೋಹದ ಹೊಳಪಿರುವ ಕಪ್ಪು ಮಿಡ್‍ಪ್ಯಾಡ್ ಹಾಗೂ ಆಳವಾದ ನೀಲಿ ಬಣ್ಣದ ತ್ರಿಬಾಣ(ಟ್ರೈಆರೋ) ರಂಧ್ರಗಳಿರುವ ಮತ್ತು ಡೆಕೋ ನೀಲಿ ಹೊಲಿಗೆ ಇರುವ ಗ್ರಾನೈಟ್ ಬ್ಲ್ಯಾಕ್ ಒಳಾಂಗಣ ಥೀಮ್ ಆಲ್ಟ್ರೋಜ್ ಡಾರ್ಕ್‍ನ ಪ್ರೀಮಿಯಮ್‍ತನವನ್ನು ಇನ್ನಷ್ಟು ವರ್ಧಿಸುತ್ತದೆ. ಹೊರಾಂಗಣದಲ್ಲಿರುವ #Dark ಮ್ಯಾಸ್ಕಾಟ್ ಮತ್ತು ಮುಂಬದಿ ಹೆಡ್‍ರೆಸ್ಟ್ ಮೇಲಿರುವ ಡಾರ್ಕ್ ಕುಸುರಿ ಕೆಲಸ ಈ ಥೀಮ್‍ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆಲ್ಟ್ರೋಜ್ ಡಾರ್ಕ್, ಪೆಟ್ರೋಲ್ ಆವೃತ್ತಿಯಲ್ಲಿ ಅಗ್ರಮಾನ್ಯ ವೈವಿಧ್ಯ XZ+DV ಲಭ್ಯವಿರಲಿದೆ(NA and iTurbo).

ನೆಕ್ಸಾನ್ ಡಾರ್ಕ್: ತನ್ನ ಅವತಾರದಲ್ಲಿ ನೆಕ್ಸಾನ್, ತನ್ನ ಹೊರಾಂಗಣವನ್ನು ವರ್ಧಿಸಿಕೊಳ್ಳುವುದಕ್ಕಾಗಿ ಮ್ಯಾಟ್ ಗ್ರಾನೈಟ್ ಬ್ಲ್ಯಾಕ್ ಕ್ಲ್ಯಾಡಿಂಗ್ ಇರುವ ಬಾಡಿಯ ಜೊತೆಗೆ ಹೊಸ ಚಾರ್ಕೋಲ್ ಬ್ಲ್ಯಾಕ್ R16 ಅಲಾಯ್‍ಗಳು, #Dark ಮ್ಯಾಸ್ಕಾಟ್, ಸೋನಿಕ್ ಸಿಲ್ವರ್ ಹೈಲೈಟ್​ಗಳನ್ನು ಅಳವಡಿಸಿಕೊಂಡಿದೆ. ಒಳಾಂಗಣಗಳು, ವಿಶೇಷವಾದ ಡಾರ್ಕ್ ಒಳಾಂಗಣ ಪ್ಯಾಕ್, ಸೀಟುಗಳು ಹಾಗು ಬಾಗಿಲಿನ ಟ್ರಿಮ್‍ಗಳ ಮೇಲೆ ತ್ರಿಬಾಣ(ಟ್ರೈಆರೋ) ರಂಧ್ರಗಳಿರುವ ಪ್ರೀಮಿಯಮ್ ಚರ್ಮದ ಅಪ್‍ಹೋಲ್ಸ್​ಟಿಯನ್ನು ಒದಗಿಸುತ್ತದೆ. ಮುಂಬದಿ ಹೆಡ್‍ರೆಸ್ಟ್​ಗಳು ಒಳಾಂಗಣದ ಥೀಮ್‍ಗೆ ಅನುಗುಣವಾಗಿರುವಂತೆ ವಿಶೇಷವಾದ #Dark ಕುಸುರಿ ಕೆಲಸವನ್ನು ಹೊಂದಿದೆ. ಹೊಸ ನೆಕ್ಸಾನ್ ಡಾರ್ಕ್ ಪೆಟ್ರೋಲ್ ಹಾಗೂ ಡೀಸಲ್ ಇಂಧನ ಆಯ್ಕೆಗಳಲ್ಲಿ, XZ+, XZA+, XZ+(O) & XZA+(O) ವೈವಿಧ್ಯಗಳಲ್ಲಿ ಲಭ್ಯವಿರುತ್ತದೆ.

ನೆಕ್ಸಾನ್ ಇವಿ ಡಾರ್ಕ್: ನೆಕ್ಸಾನ್ ಇವಿ #Dark ಥೀಮ್, EV XZ+ ಮತ್ತು XZ+ LUX ವೈವಿಧ್ಯದಲ್ಲಿ ಲಭ್ಯವಿರುತ್ತದೆ. ಈ ವೈವಿಧ್ಯಗಳು ಸ್ಯಾಟಿನ್ ಬ್ಲ್ಯಾಕ್ ಹ್ಯುಮಾನಿಟಿ ಲೈನ್ ಮತ್ತು ಬೆಲ್ಟ್​ ಲೈನ್​ನ ಜೊತೆಗೆ ಪ್ರೀಮಿಯಮ್ ಮಿಡ್‍ನೈಟ್ ಬ್ಲ್ಯಾಕ್ ಹೊರಾಂಗಣ, #Dark ಮ್ಯಾಸ್ಕಾಟ್, ಮತ್ತು ಹೊಚ್ಚ ಹೊಸ ಚಾರ್ಕೋಲ್ ಗ್ರೇ ಅಲಾಯ್ ವ್ಹೀಲ್‍ಗಳನ್ನು ಹೊಂದಿರುತ್ತವೆ. ಕಾರಿನ ಒಳಾಂಗಣಗಳು, ಡಾರ್ಕ್ ಥೀಮ್ ಇರುವ ಹೊಳಪಿನ ಪಿಯಾನೊ ಬ್ಲ್ಯಾಕ್ ಮಿಡ್-ಪ್ಯಾಡ್, ಸೀಟುಗಳ ಮೇಲೆ ಇವಿ ಬ್ಲೂ ಹೊಲಿಗೆಗಳಿಂದ ಎದ್ದುಕಾಣುವ ಸೀಟುಗಳು ಹಾಗು ಡೋರ್ ಟ್ರಿಮ್‍ಗಳ ಮೇಲೆ ತ್ರಿಬಾಣ ರಂಧ್ರಗಳಿರುವ ಪ್ರೀಮಿಯಮ್ ಡಾರ್ಕ್ ಥೀಮ್‍ನ ಚರ್ಮದ ಅಪ್‍ಹೋಲ್ಸ್​ಟಿ, ಮತ್ತು ಚರ್ಮದ ಹೊದಿಕೆ ಇರುವ ಸ್ಟೀರಿಂಗ್ ವ್ಹೀಲ್‍ನಿಂದ ವರ್ಧಿತಗೊಂಡಿವೆ. ಕಾರಿನಲ್ಲಿ iTPMS (Tyre pressure monitoring system)ಕೂಡ ಸೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ, ನೆಕ್ಸಾನ್ ಇವಿ XZ+ ವೈವಿಧ್ಯದಲ್ಲಿ, ಕಪ್ ಹೋಲ್ಡರ್ ಗಳಿರುವ ಹಿಂಬದಿಯ ಸೀಟಿನ ಮಧ್ಯಭಾಗದ ಆರ್ಮ್‍ರೆಸ್ಟ್, 60:40 ಹಿಂಬದಿ ಸೀಟ್-ಸ್ಪ್ಲಿಟ್ (seat split) ಹಾಗೂ ಸರಿಪಡಿಸಿಕೊಳ್ಳಬಹುದಾದ ಹಿಂಬದಿ ಸೀಟಿನ ಹೆಡ್​ರೆಸ್ಟ್​ಗಳನ್ನು ಅಳವಡಿಸಲಾಗಿದೆ.

ಹ್ಯಾರಿಯರ್ ಡಾರ್ಕ್: ಹ್ಯಾರಿಯರ್ #Dark, ಗಾಢನೀಲಿ ವರ್ಣವಿರುವ ಹೊಚ್ಚ ಹೊಸ ಒಬೆರಾನ್ ಬ್ಲ್ಯಾಕ್ ಬಣ್ಣ ಒದಗಿಸುತ್ತಿದ್ದು ಇದು ಹ್ಯಾರಿಯರ್​​ನ ನೋಟವನ್ನು ವರ್ಧಿಸುತ್ತದೆ. ಇದು ಇನ್ನೂ ದೊಡ್ಡದಾದ ಬ್ಲ್ಯಾಕ್‍ಸ್ಟೋನ್ ಅಲಾಯ್‍ಗಳನ್ನು ಕೂಡ ಹೊಂದಿದ್ದು, ಹ್ಯಾರಿಯರ್​​ನ ಸ್ಪೋರ್ಟ್ ಮಾದರಿಯ ನೋಟಕ್ಕೆ ಪೂರಕವಾಗಿದೆ. ಒಳಾಂಗಣದಲ್ಲಿ, ಹ್ಯಾರಿಯರ್#Dark, ಪ್ರಮುಖ ಒಳಾಂಗಣ ಅಂಶಗಳಿಗೆ ವಿಶೇಷ ಸೇರ್ಪಡೆಗಳಿರುವ ಪ್ರೀಮಿಯಮ್ ಡಾರ್ಕ್ ಥೀಮ್ ಒದಗಿಸುತ್ತವೆ. ಪ್ರೀಮಿಯಮ್ ಐಶಾರಾಮೀ ಕಾರು ವರ್ಗದಲ್ಲಿ ಇತ್ತೀಚಿನ ಟ್ರೆಂಡ್‍ಗೆ ಅನುಗುಣವಾಗಿರುವಂತೆ, ಸಂಪೂರ್ಣವಾಗಿ ದಟ್ಟವಾದ ಮೇಲ್ಭಾಗ ಪರಿಸರ ಹೊಂದಿದೆ. ಬೆನೆಕೆ ಕ್ಯಾಲಿಕೊ ಚರ್ಮದ ಅಪ್‍ಹೋಲ್ಸ್​​ಟಿ, ಒಳಾಂಗಣದ ಒಟ್ಟಾರೆ ಪ್ರೀಮಿಯಮ್‍ತನವನ್ನು ವರ್ಧಿಸಲು ಗಾಢನೀಲಿ ಛಾಯೆ ಇರುವ ವಿಶೇಷವಾದ ತ್ರಿಬಾಣ ರಂಧ್ರಗಳನ್ನು ಹೊಂದಿದೆ. ಮುಂಬದಿ ಸೀಟಿನ ಹೆಡ್‍ರೆಸ್ಟ್​ಗಳು ವಿಶೇಷವಾದ #Dark, ಕುಸುರಿ ಕೆಲಸವನ್ನು ಹೊಂದಿ ಒಳಾಂಗಣದ ಒಟ್ಟಾರೆ ಡಾರ್ಕ್ ಥೀಮ್‍ಗೆ ಪೂರಕವಾಗಿದೆ. ಹ್ಯಾರಿಯರ್ #Dark, XT+, XZ+ & XZA+ ಎಂಬ 3 ಟ್ರಿಮ್‍ಗಳಲ್ಲಿ ಲಭ್ಯವಿರುತ್ತದೆ.

ಹೆಚ್ಚು ತಿಳಿದುಕೊಳ್ಳಲು, ದಯವಿಟ್ಟು ಪಕ್ಕದಲ್ಲಿರುವ ಉತ್ಪನ್ನ ಟಿಪ್ಪಣಿ ನೋಡಿ ಅಥವಾ cars.tatamotors.com ಮತ್ತು nexonev.tatamotors.com ಮೇಲೆ ಕ್ಲಿಕ್ ಮಾಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.