ನವದೆಹಲಿ: ಪ್ರಸಕ್ತ 2020 - 21ರಲ್ಲಿ (2019-20ರ ಆರ್ಥಿಕ ವರ್ಷ) ಇದುವರೆಗೂ 4.2 ಕೋಟಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಐಟಿ ಇಲಾಖೆಯ ಟ್ವೀಟ್‌ನಲ್ಲಿ ಡಿಸೆಂಬರ್ 26ರ ವೇಳೆಗೆ 4.15 ಕೋಟಿಗೂ ಹೆಚ್ಚು ಐಟಿಆರ್ ದಾಖಲಾಗಿದ್ದು, 2019-20ರ ಮೌಲ್ಯಮಾಪನ ವರ್ಷಕ್ಕೆ 2019ರ ಆಗಸ್ಟ್ 26ರ ವೇಳೆಗೆ 4.14 ಕೋಟಿಗೂ ಅಧಿಕವಾಗಿದೆ.
ಭಾನುವಾರದ ಸಂಜೆ 6 ಗಂಟೆಯವರೆಗೆ 5,64,541 ಐಟಿಆರ್ ಸಲ್ಲಿಸಲಾಗಿದೆ. ಅದರ ಹಿಂದಿನ 1 ಗಂಟೆಯಲ್ಲಿ 67,965 ಐಟಿಆರ್ ಅರ್ಜಿಗಳು ಬಂದಿವೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ ಪ್ರಸಕ್ತ ವರ್ಷದಲ್ಲಿ ರಿಟರ್ನ್ ಫೈಲಿಂಗ್‌ಗಳ ಸಂಖ್ಯೆ ಹೆಚ್ಚಾಗಿವೆ. ಸರ್ಕಾರವು ರಿಟರ್ನ್ ಫೈಲಿಂಗ್‌ನ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ: ಗ್ರಾಹಕರ ಗಮನಕ್ಕೆ! ಜನವರಿಯಿಂದ ಈ ವಸ್ತುಗಳನ್ನು ಖರೀದಿಸಿದ್ರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ!