ETV Bharat / business

ಥಿಯೇಟರ್ ಓಪನ್ ಆದರೂ ಪ್ರೇಕ್ಷಕನ ಕಣ್ಣಲ್ಲಿ ಕೊರೊನಾ ಭಯ ಇನ್ನೂ ಜೀವಂತ!

author img

By

Published : Oct 26, 2020, 6:33 PM IST

ಲೋಕಲ್​ ಸರ್ಕಲ್ಸ್‌ನ ಜುಲೈ, ಆಗಸ್ಟ್ ಮತ್ತು ಅಕ್ಟೋಬರ್ ಸಮೀಕ್ಷೆಯ ಫಲಿತಾಂಶಗಳಲ್ಲಿ ಕೋವಿಡ್ -19 ಭೀತಿಯಿಂದ ಪ್ರೇಕ್ಷಕರು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಲು ಹಿಂಜರಿಯುತ್ತಲೇ ಇರುತ್ತಾರೆ ಎಂಬುದು ತಿಳಿದು ಬಂದಿದೆ.

theaters
ಥಿಯೇಟರ್

ನವದೆಹಲಿ: ಸತತ ಏಳು ತಿಂಗಳು ಬೀಗ ಹಾಕಿದ್ದ ಚಿತ್ರಮಂದಿರಗಳು ಈಗ ತೆರೆದಿದ್ದರೂ ಶೇ 60 ಜನರು ಮಾತ್ರ ಮುಂದಿನ 60 ದಿನಗಳಲ್ಲಿ ಚಿತ್ರ ನೋಡಲು ಹೋಗಲು ಸಿದ್ಧರಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕೋವಿಡ್​-19 ಬಿಕ್ಕಟ್ಟಿನಿಂದಾಗಿ ಏಳು ತಿಂಗಳ ಲಾಕ್‌ಡೌನ್ ನಂತರ ರಾಜ್ಯಗಳಾದ್ಯಂತ ಸಿನೆಮಾ ಹಾಲ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಯಿತು.

ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳ, ಛತ್ತೀಸ್‌ಗಢ ಮತ್ತು ಅನೇಕ ಈಶಾನ್ಯ ರಾಜ್ಯಗಳಲ್ಲಿ ಸಿನೆಮಾ ಹಾಲ್‌ಗಳು ಈಗಲೂ ಬಾಗಿಲು ಹಾಕಿವೆ.

ಮುಂದಿನ 2 ತಿಂಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಲು ನಾಗರಿಕರು ಯೋಜಿಸುತ್ತಾರೆಯೇ ಎಂದು ಲೋಕಲ್​ ಸರ್ಕಲ್​ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಗೆ ದೇಶಾದ್ಯಂತ 8,274 ಪ್ರತಿಕ್ರಿಯೆಗಳು ಬಂದಿವೆ. 'ಈಗ ಅನೇಕ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳು ತೆರೆದಿವೆ. ಉಳಿದ ರಾಜ್ಯಗಳು ಕೂಡ ಶೀಘ್ರದಲ್ಲೇ ತೆರೆಯಲಿವೆ, ಮುಂದಿನ 60 ದಿನಗಳಲ್ಲಿ ನಾಗರಿಕರು ಚಲನಚಿತ್ರ ನೋಡಲು ಹೋಗುತ್ತಾರೆಯೇ?

ಕೇವಲ 4 ಪ್ರತಿ ಶತದಷ್ಟು ಜನ ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೆ, ತಾವು ನೋಡಲು ಹೋಗುತ್ತೇವೆ ಎಂದಿದ್ದರೇ ಶೇ 3ರಷ್ಟು ಸಂವಾದಿಗಳು ಹೊಸ ಅಥವಾ ಹಳೆಯ ಚಲನಚಿತ್ರ ಲೆಕ್ಕಿಸದೇ ಹೋಗುತ್ತೇವೆ ಎಂದಿದ್ದಾರೆ.

ಶೇ 74ರಷ್ಟು ಜನರು ತಾವು ಹೋಗುವುದಿಲ್ಲ ಎಂದು ಹೇಳಿದದರೇ 2 ಪ್ರತಿ ಶತದಷ್ಟು ಜನರು ಈ ಬಗ್ಗೆ ಖಚಿತವಾಗಿಲ್ಲ ಎಂದಿದ್ದಾರೆ. 17 ಪ್ರತಿ ಶತದಷ್ಟು ಜನರು ಥಿಯೇಟರ್‌ನಲ್ಲಿ ಚಲನಚಿತ್ರಗಳನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.