ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯಲ್ಲಿ ಸದ್ಯಕ್ಕೆ ಪರಿಷ್ಕರಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಖಚಿತಪಡಿಸಿದ್ದರಿಂದ ಕಳೆದ 11 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಅಕ್ಟೋಬರ್ 3 ರಿಂದ ಇಂದಿನವರೆಗೂ ಡೀಸೆಲ್ ಬೆಲೆ ಅದೇ ಮಟ್ಟದಲ್ಲಿದ್ದು, ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆಗಳಾಗದೇ 21 ದಿನಗಳು ಕಳೆದಿವೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. (ಲೀಟರ್ ಬೆಲೆ -ರೂಪಾಯಿಗಳಲ್ಲಿ)
ನಗರ | ಪೆಟ್ರೋಲ್ | ಡೀಸೆಲ್ |
ದೆಹಲಿ | 81.06 | 70.46 |
ಮುಂಬೈ | 87.74 | 76.86 |
ಕೋಲ್ಕತ್ತಾ | 82.59 | 73.99 |
ಬೆಂಗಳೂರು | 83.69 | 74.63 |
ಚೆನ್ನೈ | 84.14 | 75.95 |
ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಗ್ರಾಹಕರು ಇಂಧನ ಬೆಲೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಡೀಸೆಲ್ ಬೆಲೆ ಕುಸಿದಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.