ETV Bharat / business

ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಮೇಲೆ 8.5 ರೂ. ಅಬಕಾರಿ ಸುಂಕ ಕಡಿತ ಸಾಧ್ಯತೆ - ಇಂಧನದ ಮೇಲಿನ ಸುಂಕ

ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು 2022ರ ಹಣಕಾಸು ವರ್ಷದಲ್ಲಿ (2021ರ ಏಪ್ರಿಲ್​ನಿಂದ 2022ರ ಮಾರ್ಚ್ ರವರೆಗೆ) ಅಂದಾಜು ಮಾಡಲಾಗಿದೆ. ಒಂದು ವೇಳೆ ಅದನ್ನು ಕಡಿತಗೊಳಿಸದಿದ್ದರೆ ಬಜೆಟ್ ಅಂದಾಜಿತ 3.35 ಲಕ್ಷ ಕೋಟಿ ರೂ.ಗಿಂತ 4.35 ಲಕ್ಷ ಕೋಟಿ ರೂ.ಯಷ್ಟಾಗಲಿದೆ.

Fuel
Fuel
author img

By

Published : Mar 3, 2021, 7:42 PM IST

ನವದೆಹಲಿ: ಎರಡು ಇಂಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯದ ಮೇಲೆ ಪರಿಣಾಮ ಬೀರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8.5 ರೂ.ಷ್ಟು ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಕಳೆದ ಒಂಬತ್ತು ತಿಂಗಳುಗಳಲ್ಲಿ ದರಗಳು ಪಟ್ಟುಬಿಡದೆ ಹೆಚ್ಚಾದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿವೆ.

ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು 2022ರ ಹಣಕಾಸು ವರ್ಷದಲ್ಲಿ (2021ರ ಏಪ್ರಿಲ್​ನಿಂದ 2022ರ ಮಾರ್ಚ್ ರವರೆಗೆ) ಅಂದಾಜು ಮಾಡಲಾಗಿದೆ. ಒಂದು ವೇಳೆ ಅದನ್ನು ಕಡಿತಗೊಳಿಸದಿದ್ದರೆ ಬಜೆಟ್ ಅಂದಾಜಿತ 3.35 ಲಕ್ಷ ಕೋಟಿ ರೂ.ಗಿಂತ 4.35 ಲಕ್ಷ ಕೋಟಿ ರೂ.ಯಷ್ಟಾಗಲಿದೆ. ಹೀಗಾಗಿ, 2021ರ ಏಪ್ರಿಲ್ 1ರಂದು ಅಥವಾ ಅದಕ್ಕೂ ಮುನ್ನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8.5 ರೂ.ಯಷ್ಟು ಕಡಿತಗೊಳಿಸಿದರೂ 2022ರ ಹಣಕಾಸು ವರ್ಷದಲ್ಲಿ ಬಜೆಟ್ ಅಂದಾಜು ಪೂರೈಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ತಿಳಿಸಿದೆ.

ಇದನ್ನೂ ಓದಿ: ಸಿಲಿಂಡರ್ ದರ ಏರಿಕೆಗೆ ದೇಶದಲ್ಲಿನ ಆಂತರಿಕ ನಡೆ ಕಾರಣವಲ್ಲ: ಮತ್ತೇನು?

ಬೇಡಿಕೆಯ ಚೇತರಿಕೆ ಸನ್ನಿಹಿತವಾಗುತ್ತಿದೆ. ಖಾಸಗೀಕರಣ ಮತ್ತು ಹಣದುಬ್ಬರ ಕಾಳಜಿಯಿಂದ ಅಬಕಾರಿ ಸುಂಕ ಕಡಿತಕ್ಕೆ ಆಶಾವಾದ ವ್ಯಕ್ತಪಡಿಸಿದ ತಜ್ಞರು, ಲೀಟರ್‌ಗೆ 8.5 ರೂ. ಕಡಿತ ಸಾಧಾರಣವಾಗಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಬಕಾರಿ ಸುಂಕವನ್ನು 2020ರ ಮಾರ್ಚ್ ಮತ್ತು 2020ರ ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 13 ರೂ. ಮತ್ತು 16 ರೂ. ಹೆಚ್ಚಿಸಲಾಗಿತ್ತು. ಈಗ ಡೀಸೆಲ್ ಮೇಲೆ 31.8 ರೂ. ಮತ್ತು ಪೆಟ್ರೋಲ್​ಗೆ 32.9 ರೂ.ಯಷ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.