ನವದೆಹಲಿ: ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರತ್ನ- ಆಭರಣಗಳಂತಹ ಕ್ಷೇತ್ರಗಳಲ್ಲಿನ ಆರೋಗ್ಯಕರ ಬೆಳವಣಿಗೆಯಿಂದಾಗಿ ಮೇ ತಿಂಗಳಲ್ಲಿ ಭಾರತದ ರಫ್ತು ಶೇ 67.39ರಷ್ಟು ಏರಿಕೆಯಾಗಿ 32.21 ಬಿಲಿಯನ್ ಡಾಲರ್‌ಗೆ ತಲುಪಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ರಫ್ತು 19.24 ಬಿಲಿಯನ್ ಡಾಲರ್‌ನಷ್ಟು ಆಗಿತ್ತು. 2019ರ ಮೇ ತಿಂಗಳಲ್ಲಿ ಇದು 29.85 ಬಿಲಿಯನ್ ಡಾಲರ್‌ನಷ್ಟು ಇತ್ತು ಎಂದು ವಾಣಿಜ್ಯ ಸಚಿವಾಲಯದ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
2020ರ ಮೇ ಆಮದು ಶೇ68.54ರಷ್ಟು ಏರಿಕೆಯಾಗಿ 38.53 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದು 2020ರ ಮೇ ತಿಂಗಳಲ್ಲಿ 22.86 ಬಿಲಿಯನ್ ಡಾಲರ್‌ಗಳಷ್ಟು ಇತ್ತು.
2021ರ ಮೇ ತಿಂಗಳಲ್ಲಿ ಭಾರತವು ನಿವ್ವಳ ಆಮದುದಾರರಾಗಿದ್ದು, 6.32 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ ಕಂಡಿದೆ. 2020ರ ಮೇ ತಿಂಗಳಲ್ಲಿ ವ್ಯಾಪಾರ ಕೊರತೆ 3.62 ಬಿಲಿಯನ್ ಡಾಲರ್ಗಿಂತ ಶೇ 74.69ರಷ್ಟು ಹೆಚ್ಚಳವಾಗಿದೆ. 2019ರ ಮೇನಲ್ಲಿ ವ್ಯಾಪಾರ ಕೊರತೆ ಶೇ 62.49ರಷ್ಟು ಆಗಿದ್ದು, 16.84 ಬಿಲಿಯನ್ ಡಾಲರ್‌ಗೆ ಏರಿಕೆ ಆಗಿತ್ತು.
ಏಪ್ರಿಲ್ನಲ್ಲಿ ದೇಶದ ಸರಕು ರಫ್ತು ಸುಮಾರು ಮೂರು ಪಟ್ಟು 30.63 ಬಿಲಿಯನ್ ಡಾಲರ್‌ಗೆ ಏರಿದ್ದರೂ ವ್ಯಾಪಾರ ಕೊರತೆ 15.1 ಬಿಲಿಯನ್ ಡಾಲರ್ ಆಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ತೈಲ ಆಮದು 9.45 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದು 2020ರ ಮೇನಲ್ಲಿ 3.57 ಬಿಲಿಯನ್ ಡಾಲರ್‌ನಷ್ಟು ಇತ್ತು. 2019ರ ಮೇ ತಿಂಗಳಲ್ಲಿ ಇದು 12.59 ಬಿಲಿಯನ್ ಡಾಲರ್ ಆಗಿತ್ತು.
ಈ ವರ್ಷದ ಏಪ್ರಿಲ್ - ಮೇ ಅವಧಿಯಲ್ಲಿ ರಫ್ತು 62.84 ಬಿಲಿಯನ್ ಡಾಲರ್‌ಗೆ ಏರಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 29.6 ಬಿಲಿಯನ್ ಡಾಲರ್ ಆಗಿತ್ತು. ಇದು 2019ರ ಏಪ್ರಿಲ್-ಮೇ ತಿಂಗಳಲ್ಲಿ 55.88 ಬಿಲಿಯನ್ ಡಾಲರ್ ಆಗಿತ್ತು ಎಂದು ಡೇಟಾ ತಿಳಿಸಿದೆ.
ಮೇ ತಿಂಗಳಲ್ಲಿ ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರತ್ನಗಳು ಹಾಗೂ ಆಭರಣಗಳ ರಫ್ತು ಕ್ರಮವಾಗಿ 3 ಬಿಲಿಯನ್, 3.51 ಬಿಲಿಯನ್ ಮತ್ತು 1.9 ಬಿಲಿಯನ್ ಡಾಲರ್ ಆಗಿದೆ.