ನವದೆಹಲಿ: ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರನ್ನು 2021-22ರ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಸೋಮವಾರ ತಿಳಿಸಿದೆ.
ನರೇಂದ್ರನ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉದಯ್ ಕೊಟಕ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವಾರ್ಷಿಕ ಸಾಮಾನ್ಯ ಸಭೆಯ ನಂತರ (ಎಜಿಎಂ), ಅದರ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಸಿಐಐ ತನ್ನ ಹೊಸ ಪದಾಧಿಕಾರಿಗಳನ್ನು 2021-22ರ ವರ್ಷಕ್ಕೆ ಆಯ್ಕೆ ಮಾಡಿತು. ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ವಿ ನರೇಂದ್ರನ್ ಅವರು 2021-22ರವರೆಗೆ ಸಿಐಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನರೇಂದ್ರನ್ ಸಿಐಐ ಜೊತೆ ಹಲವು ವರ್ಷಗಳಿಂದ ರಾಜ್ಯ, ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದಲ್ಲಿ ತೊಡಗಿಸಿಕೊಂಡಿದ್ದರು. 2020-21ರ ಸಿಐಐನ ಅಧ್ಯಕ್ಷ ಹುದ್ದೆಯೂ ನಿರ್ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ಹೇಳಿದೆ.
ನರೇಂದ್ರನ್ ಐಐಎಂ ಕೋಲ್ಕತ್ತಾ ಮತ್ತು ಎನ್ಐಟಿ ತಿರುಚ್ಚಿಯ ಹಳೆಯ ವಿದ್ಯಾರ್ಥಿ. ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಈಗ 2021-22ರ ಸಿಐಐನ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿಸಲಾಗಿದೆ. ಸಿಐಐ ಜೊತೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ಬಜಾಜ್ 2019-20ರ ಅವಧಿಯಲ್ಲಿ ಸಿಐಐ ಪಶ್ಚಿಮ ವಲಯದ ಅಧ್ಯಕ್ಷರಾಗಿದ್ದರು. ವಿಮೆ ಮತ್ತು ಪಿಂಚಣಿ ಕುರಿತ ಸಿಐಐ ರಾಷ್ಟ್ರೀಯ ಸಮಿತಿಗಳು ಮತ್ತು ಫಿನ್‌ಟೆಕ್‌ನಲ್ಲಿ ಸಿಐಐ ಕಾರ್ಯಪಡೆಗಳನ್ನು ಮುನ್ನಡೆಸಿದ್ದರು.
ಇದೇ ವೇಳೆ ಹೀರೋ ಮೊಟೊಕಾರ್ಪ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ಪವನ್ ಮುಂಜಾಲ್ ಅವರು 2021-22ರವರೆಗೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಿದೆ.