ನವದೆಹಲಿ: ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಲವು ಕಾರ್ಯಾ ಚರಣೆಗಳ ನಿರ್ಬಂಧ ವಿಧಿಸಿದ ಬಳಿಕ ದೇಶದಲ್ಲಿ ಕೆಲವು ವಾಣಿಜ್ಯ ಬ್ಯಾಂಕ್ಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿತ್ತು.
ಈ ಬಗ್ಗೆ ಸ್ಪಷ್ಟವಾದ ಸಂದೇಶ ನೀಡಿದ ಆರ್ಬಿಐ, 'ಸೋಷಿಯಲ್ ಮೀಡಿಯಾದಲ್ಲಿ ವಾಣಿಜ್ಯ ಬ್ಯಾಂಕ್ಗಳ ಸ್ಥಗಿತ ಎಂಬ ವದಂತಿ ಸುಳ್ಳಿನಿಂದ ಕೂಡಿದೆ' ಎಂದು ಟ್ವಿಟ್ಟರ್ ಮೂಲಕ ಜನತೆಗೆ ತಿಳಿಸಿದೆ.
ಸೆಪ್ಟೆಂಬರ್ 23ರಂದು ಆರ್ಬಿಐ ಪಿಎಂಸಿ ಬ್ಯಾಂಕ್ನ ವಹಿವಾಟು ಮತ್ತು ದೈನಂದಿನ ಕಾರ್ಯಚರಣೆಯ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಿತ್ತು. ಗ್ರಾಹಕರು ದಿನಕ್ಕೆ 1,000 ರೂ.ಗಿಂತ ಹೆಚ್ಚಿನ ಹಣ ವಿಥ್ ಡ್ರಾ ಮಾಡಿಕೊಳ್ಳುವಂತಿಲ್ಲ. ಬ್ಯಾಂಕ್ ತನ್ನ ಅನುಮತಿ ಇಲ್ಲದೇ ನಿಶ್ಚಿತ ಠೇವಣಿ ಸ್ವೀಕರಿಸುವ ಅಥವಾ ಹೊಸ ಸಾಲ ನೀಡುವಂತಿಲ್ಲ. ಮುಂದಿನ ಆದೇಶದವರೆಗೂ ನಿಯಮಗಳಿಗೆ ಬದ್ಧವಾಗಿ ಇರುವಂತೆ ಸೂಚಿಸಿತ್ತು.
-
Reports appearing in some sections of social media about RBI closing down certain commercial banks are false.
— ReserveBankOfIndia (@RBI) September 25, 2019 " class="align-text-top noRightClick twitterSection" data="
">Reports appearing in some sections of social media about RBI closing down certain commercial banks are false.
— ReserveBankOfIndia (@RBI) September 25, 2019Reports appearing in some sections of social media about RBI closing down certain commercial banks are false.
— ReserveBankOfIndia (@RBI) September 25, 2019