ETV Bharat / business

ದೇಶದ ಪ್ರಗತಿಗೆ ನಿಖರ ಲೆಕ್ಕಪರಿಶೋಧನೆ ಅಗತ್ಯ: RBI ಗವರ್ನರ್ ಶಕ್ತಿಕಾಂತ್ ದಾಸ್​​ - ಆರ್ಥಿಕ ಸ್ಥಿರತೆ

ದೇಶ ಆರ್ಥಿಕ ಪ್ರಗತಿಯತ್ತ ಸಾಗಬೇಕಾದರೆ ನಿಖರ ಮತ್ತು ಸಕಾಲದ ಆಡಿಟ್​ ಅಗತ್ಯ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ಆಡಿಟ್​​ಗಳು ದೇಶದ ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಾಧನವಾಗಿದೆ ಎಂದಿದ್ದಾರೆ.

Shakthikant das
ಆರ್​​​​​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​​
author img

By

Published : Oct 25, 2021, 7:23 PM IST

ನವದೆಹಲಿ: ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗೆ ನಿಖರ ಮತ್ತು ವಿಶ್ಲೇಷಣಾತ್ಮಕ ಆಡಿಟ್ ವರದಿಗಳು ಅತ್ಯಗತ್ಯ, ಇವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲಿವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಮತ್ತು ಅಕೌಂಟ್ಸ್ (ಎನ್‌ಎಎಎ)ನಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ವಿಷಯದಲ್ಲಿ ಆಡಿಟಿಂಗ್ ಉತ್ತಮ ಆಡಳಿತದ ಮೂಲಾಧಾರವಾಗಿದೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ಲೆಕ್ಕಪರಿಶೋಧನೆಯು ನಾಗರಿಕರು ಮತ್ತು ಸ್ಟಾಕ್ ಹೋಲ್ಡರ್ಸ್​​ಗಳಲ್ಲಿ ವಿಶ್ವಾಸ ತುಂಬಲಿದೆ ಎಂದಿದ್ದಾರೆ.

ಜಾಗತಿಕವಾಗಿ ಸಮಗ್ರ ಆರ್ಥಿಕತೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾದ ಆಯವ್ಯಯ ವರದಿ ಕೇವಲ ದೇಶೀಯ ಕಾಳಜಿಯಲ್ಲ, ಜಾಗತಿಕ ಮಟ್ಟದಲ್ಲಿ ದೇಶದ ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಾಧನವಾಗಿದೆ ಎಂದಿದ್ದಾರೆ.

ಹಣಕಾಸು ಮಾರುಕಟ್ಟೆಯ ಸಂಪನ್ಮೂಲ ಸಮರ್ಥವಾಗಿ ಹಂಚಿಕೆಯಾದಾಗ ಸಾರ್ವಜನಿಕರಿಂದ ಹೆಚ್ಚಿನ ನಿರೀಕ್ಷೆಗಳು, ಆಡಿಟ್​​ನ ಪಾತ್ರ ಇನ್ನಷ್ಟು ಮಹತ್ವ ಪಡೆಯುವಂತೆ ಮಾಡಿದೆ.

ಭಾರತವು ವೇಗವಾಗಿ ಬೆಳೆಯಲು ಹಾತೊರೆಯುತ್ತಿರುವುದರಿಂದ, ಎಲ್ಲ ಪಾಲುದಾರರಿಗೆ ಹಣಕಾಸಿನ ಕಾರ್ಯಕ್ಷಮತೆಯ ಕುರಿತು ಹೆಚ್ಚಿನ ಭರವಸೆ ನೀಡಲು ಲೆಕ್ಕ ಪರಿಶೋಧಕರ ಪರಿಣತಿ ಮತ್ತು ಸ್ವಾತಂತ್ರ್ಯ ಹತೋಟಿಗೆ ತರಬೇಕಾಗುತ್ತದೆ. ಕ್ರಿಯಾತ್ಮಕ ಮತ್ತು ಸ್ಥಿತಿಸ್ಥಾಪಕ ಆರ್ಥಿಕತೆಗಾಗಿ ನಿಖರ ಮತ್ತು ದೃಢವಾದ ಲೆಕ್ಕಪರಿಶೋಧನೆ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ: ವಾರಾಂತ್ಯದ ಬೆನ್ನಲ್ಲೇ ಕುಸಿತ ಸೆನ್ಸೆಕ್ಸ್: ಶೇ 0.69ರಷ್ಟು ಇಳಿಕೆ ಕಂಡ ನಿಫ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.