ನವದೆಹಲಿ : 2030ರ ವೇಳೆಗೆ ಜಾಗತಿಕವಾಗಿ 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿ ಡಾಲರ್) ಸೋಲಾರ್ ಹೂಡಿಕೆಯ ಗುರಿ ಸಾಧಿಸುವ ಭರವಸೆಯೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ನಾಲ್ಕನೇ ಸಾಮಾನ್ಯ ಸಭೆ ನಿನ್ನೆ ಕೊನೆಗೊಂಡಿದೆ.
ಅಕ್ಟೋಬರ್ 18-21ರಂದು ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಐಎಸ್‌ಎ ಅಸೆಂಬ್ಲಿಯ ಅಧ್ಯಕ್ಷರೂ ಆಗಿರುವ ಕೇಂದ್ರ ವಿದ್ಯುತ್, ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಭಾಗವಹಿಸಿದ್ದರು. ಐಎಸ್‌ಎ ಸದಸ್ಯ ರಾಷ್ಟ್ರಗಳ ಸಹಭಾಗಿತ್ವದಲ್ಲಿ 2030ರ ವೇಳೆಗೆ 1 ಟ್ರಿಲಿಯನ್ ಹೂಡಿಕೆಯನ್ನು ಸಂಗ್ರಹಿಸಲಾಗುತ್ತದೆ.
ಎರಡು ಸಂಸ್ಥೆಗಳು ವಿಶ್ವ ಸಂಪನ್ಮೂಲ ಸಂಸ್ಥೆ (ಡಬ್ಲ್ಯುಆರ್‌ಐ)ಯೊಂದಿಗೆ ಸೌರ ಹೂಡಿಕೆ ಕ್ರಿಯಾ ಕಾರ್ಯಸೂಚಿ ಮತ್ತು ಸೌರ ಹೂಡಿಕೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತವೆ. ಇದನ್ನು COP26ನಲ್ಲಿ ಪ್ರಾರಂಭಿಸಲಾಗುತ್ತದೆ.
ಒಟ್ಟು 108 ದೇಶಗಳು 4ನೇ ಸಾಮಾನ್ಯ ಸಭೆಯಲ್ಲಿ ಉಪಸ್ಥಿತರರಾಗಿದ್ದು, 74 ಸದಸ್ಯ ರಾಷ್ಟ್ರಗಳು, 34 ವೀಕ್ಷಕರು, 23 ಪಾಲುದಾರ ಸಂಸ್ಥೆಗಳು ಹಾಗೂ 33 ವಿಶೇಷ ಆಹ್ವಾನಿತ ಸಂಸ್ಥೆಗಳು ಭಾಗವಹಿಸಿವೆ.
ಹವಾಮಾನಕ್ಕಾಗಿ ಯುಎಸ್ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಜಾನ್ ಕೆರ್ರಿ ಮುಖ್ಯ ಭಾಷಣ ಮಾಡಿದ್ದಾರೆ. ಯುರೋಪಿಯನ್ ಗ್ರೀನ್ ಡೀಲ್‌ಗಾಗಿ ಯುರೋಪಿಯನ್ ಕಮಿಷನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಫ್ರಾನ್ಸ್ ಟಿಮ್ಮರ್ಮನ್ಸ್ ಅಕ್ಟೋಬರ್ 20ರಂದು ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಅಧ್ಯಕ್ಷೀಯ ಭಾಷಣ ಮಾಡಿದ ಕೇಂದ್ರ ಸಚಿವ ಆರ್‌ಸಿಂಗ್, ವಿಶ್ವದಾದ್ಯಂತ 800 ದಶಲಕ್ಷ ಜನರಿಗೆ ಸೌರಶಕ್ತಿ ಬಳಕೆಯನ್ನು ಐಎಸ್‌ಎ ಸಕ್ರಿಯಗೊಳಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು ಹಿಂದಿನ ಹವಾಮಾನ ಸಮ್ಮೇಳನಗಳಲ್ಲಿ ತಾವು ಮಾಡಿದ ಇಂಧನ ಪರಿವರ್ತನೆ ನಿಧಿಯನ್ನು ನಿರ್ದೇಶಿಸಲು ಇದು ಸೂಕ್ತ ಸಮಯ. ಆರ್ಥಿಕ ಅಭಿವೃದ್ಧಿಯು ಶುದ್ಧ ಶಕ್ತಿಯ ಮೂಲಕ ನಡೆಯಬೇಕೇ ಅಥವಾ ಕಲ್ಲಿದ್ದಲು ಮತ್ತು ಉರುವಲನ್ನು ಸುಡುವ ಮೂಲಕವೇ ಎಂಬುದನ್ನು ಅವರು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಐಎಸ್‌ಎ ಮಹಾನಿರ್ದೇಶಕ ಡಾ.ಅಜಯ್ ಮಾಥುರ್, ಸೌರವು ಶಕ್ತಿ ಕಡಿಮೆ ಇಂಗಾಲದ ಆರ್ಥಿಕತೆಗೆ ವೇಗನವನ್ನು ನೀಡುತ್ತದೆ. ಇದು ದೇಶಗಳಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕಡಿಮೆ ವೆಚ್ಚ ಮತ್ತು ಅತ್ಯಂತ ಆರ್ಥಿಕ ಪರಿಹಾರವಾಗಿದೆ. ಇದು ಒಂದು ಶತಕೋಟಿಗಿಂತಲೂ ಕಡಿಮೆ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಆದರೆ, ಸಾಕಷ್ಟು ಹೂಡಿಕೆಗಳನ್ನು ಸಜ್ಜುಗೊಳಿಸಿದರೆ, ಸರಿಯಾದ ನೀತಿ ಚೌಕಟ್ಟುಗಳನ್ನು ಸ್ಥಾಪಿಸಿದರೆ ಮಾತ್ರ ಸಾಧ್ಯ. ಐಎಸ್ಎ 2030 ರ ವೇಳೆಗೆ ಸೋಲಾರ್ ನಲ್ಲಿ 1 ಟ್ರಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು ಅಗತ್ಯವಾದ ಶಕ್ತಿ ಪರಿವರ್ತನೆಗಳಿಗೆ ಜಗತ್ತನ್ನು ಹತ್ತಿರ ತರುವಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.