ETV Bharat / briefs

ಎಲ್ಲಾ ಮಾದರಿಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..? ಕುತೂಹಲ ಮೂಡಿಸಿದೆ ಇಂದಿನ ಪ್ರೆಸ್​​ಮೀಟ್..! - ಬಿಸಿಸಿಐ

ದಕ್ಷಿಣ ಮುಂಬೈನ ಹೋಟೆಲ್‌ವೊಂದರಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಯುವಿ, ಇದೇ ಸಂದರ್ಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೂ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುವರಾಜ್ ಸಿಂಗ್
author img

By

Published : Jun 10, 2019, 7:40 AM IST

ಮುಂಬೈ: 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಸೋಮವಾರದಂದು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ.

ದಕ್ಷಿಣ ಮುಂಬೈನ ಹೋಟೆಲ್​ ಒಂದರಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಯುವಿ, ಇದೇ ಸಂದರ್ಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೂ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಪಂಜಾಬ್​ ಕಾ ಪುತ್ತರ್​​ ಅಂತಾರಾಷ್ಟ್ರೀಯ ಹಾಗೂ ಮೊದಲ ದರ್ಜೆಯ ಕ್ರಿಕೆಟ್​ನಿಂದ ದೂರ ಸರಿಯುವ ಯೋಚನೆ ಮಾಡಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕೆರಿಬಿಯನ್‌ ದಿಗ್ಗಜನಿಗೆ ವಿದಾಯದ ವಿಶ್ವಕಪ್, ಕ್ರಿಸ್‌ಗೇಲ್‌ ಕೊನೆ ಆಸೆಗೆ ಐಸಿಸಿ ತಣ್ಣೀರು!

ಜಿಟಿ20(ಕೆನಡಾ), ಐರ್ಲೆಂಡ್ ಹಾಗೂ ಹಾಲೆಂಡ್ ನಡೆಯಲಿರುವ ಯುರೋ ಟಿ20 ಸ್ಲ್ಯಾಮ್​ನಲ್ಲಿ ಯುವರಾಜ್​ಗೆ ಆಫರ್​ ಇದ್ದು ಈ ಕುರಿತಂತೆ ಬಿಸಿಸಿಐ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ವಿದಾಯ ಹೇಳಲಿದ್ದಾರೆ ಎನ್ನುವ ಗುಸುಗುಸು ಇದ್ದರೂ ಈ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ವಿದಾಯ ಘೋಷಿಸಿದಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನುವುದು ಸದ್ಯ ಕೇಳಿ ಬರುತ್ತಿರುವ ಮಾತು.

ಯುವರಾಜ್ ಭಾರತದ ಪರವಾಗಿ 2012ರಲ್ಲಿ ಕೊನೆಯ ಟೆಸ್ಟ್ ಹಾಗೂ ಏಕದಿನ ಪಂದ್ಯ, 2017ರಲ್ಲಿ ಟಿ-20 ಮ್ಯಾಚ್ ಆಡಿದ್ದರು. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲೂ ಸಹ ಯುವಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.

Intro:Body:

ಎಲ್ಲ ಮಾದರಿಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?

ಮುಂಬೈ: 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಸೋಮವಾರದಂದು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ.

ದಕ್ಷಿಣ ಮುಂಬೈನ ಹೋಟೆಲ್​ ಒಂದರಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಯುವಿ, ಇದೇ ಸಂದರ್ಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೂ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ.

ಪಂಜಾಬ್​ ಕಾ ಪುತ್ತರ್​​ ಅಂತರಾಷ್ಟ್ರೀಯ ಹಾಗೂ ಮೊದಲ ದರ್ಜೆಯ ಕ್ರಿಕೆಟ್​ನಿಂದ ದೂರ ಸರಿಯುವ ಯೋಚನೆ ಮಾಡಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜಿಟಿ20(ಕೆನಡಾ), ಐರ್ಲೆಂಡ್ ಹಾಗೂ ಹಾಲೆಂಡ್ ನಡೆಯಲಿರುವ ಯುರೋ ಟಿ20 ಸ್ಲ್ಯಾಮ್​ನಲ್ಲಿ ಆಫರ್​ ಯುವರಾಜ್​ಗೆ ಇದ್ದು ಈ ಕುರಿತಂತೆ ಬಿಸಿಸಿಐ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ವಿದಾಯ ಹೇಳಲಿದ್ದಾರೆ ಎನ್ನುವ ಗುಸುಸು ಇದ್ದರೂ ಈ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ವಿದಾಯ ಘೋಷಿಸಿದಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನುವುದು ಸದ್ಯ ಕೇಳಿಬರುತ್ತಿರುವ ಮಾತು.

ಯುವರಾಜ್ ಭಾರತದ ಪರವಾಗಿ 2012ರಲ್ಲಿ ಕೊನೆಯ ಟೆಸ್ಟ್ ಹಾಗೂ ಏಕದಿನ ಪಂದ್ಯ, 2017ರಲ್ಲಿ ಟಿ-20 ಮ್ಯಾಚ್ ಆಡಿದ್ದರು. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲೂ ಸಹ ಯುವಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.