ಆಗ್ರಾ: ಉತ್ತರಪ್ರದೇಶದ ಬಾರ್ ಕೌನ್ಸಿಲ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರವೀಶ್ ಪುಷ್ಪಾಂಜಲಿ ಯಾದವ್ ಅವರನ್ನು ವಕೀಲನೊಬ್ಬ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹೊಸದಾಗಿ ಆಯ್ಕೆಯಾಗಿದ್ದ ಮಹಿಳಾ ಬಾರ್ ಕೌನ್ಸಿಲ್ ಅಧ್ಯಕ್ಷೆ ದರವೀಶ್ ಪುಷ್ಪಾಂಜಲಿ ಯಾದವ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕೆಯ ಮೇಲೆ ಕೋರ್ಟ್ನ ವಕೀಲನೋರ್ವ ಗುಂಡಿನ ಸುರಿಮಳೆಗೈದಿದ್ದಾನೆ. ತದನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿ ಮಾಡಿರುವ ವಕೀಲನನ್ನು ಮನೀಷ್ ಶರ್ಮಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೊಳಗಾಗಿದ್ದರು.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.