ETV Bharat / briefs

ಕುವೆಂಪು ವಿವಿಗೆ ಆನ್‍ಲೈನ್ ಕೋರ್ಸ್ ಪ್ರಾರಂಭಿಸಲು ಯುಜಿಸಿ ಅನುಮತಿ

ಸೈಮಾಗೋ ರ‍್ಯಾಂಕಿಂಗ್‍ನಲ್ಲಿ ವಿವಿ 56ನೇ ಸ್ಥಾನ ಪಡೆದು ದೇಶದ ಮಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಲಿದೆ. ಈಗಾಗಲೇ ವಿಶ್ವವಿದ್ಯಾಲಯವು ಆನ್​ಲೈನ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

  UGC Permission to Start Online Course for Kuvempu university

author img

By

Published : Jun 17, 2021, 6:48 PM IST

ಶಿವಮೊಗ್ಗ: 2020-21ನೇ ಶೈಕ್ಷಣಿಕ ಸಾಲಿನಿಂದ ಪೂರ್ವಾನುಮತಿ ಇಲ್ಲದೆಯೇ ಪೂರ್ಣ ಪ್ರಮಾಣದಲ್ಲಿ ಆನ್‍ಲೈನ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರಕಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಆನ್​​ಲೈನ್ ತರಗತಿಯಿಂದ ವಿಶ್ವವಿದ್ಯಾನಿಲಯದ ಈ ಭಾಗದ ಉನ್ನತ ಶಿಕ್ಷಣಾರ್ಥಿಗಳಿಗೆ ವರವಾಗಿ ಪರಿಣಮಿಸಲಿದೆ. ಆನ್​​​ಲೈನ್ ತರಗತಿ ನಡೆಸುವ ಕುರಿತು ಆದೇಶ ಹೊರಡಿಸಿರುವ ಯುಜಿಸಿ, ದೇಶಾದ್ಯಂತ 38 ವಿವಿಗಳಿಗೆ ಆನ್‍ಲೈನ್ ಮಾದರಿಯಲ್ಲಿ ಕೋರ್ಸುಗಳನ್ನು ಪ್ರಾರಂಭಿಸಲು ಅವಕಾಶ ನೀಡಿದೆ.

ದೇಶದ 38 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಆನ್‍ಲೈನ್ ಮೂಲಕ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಪ್ರಾರಂಭಿಸಬಹುದಾಗಿದೆ. ಇದರಲ್ಲಿ ಕುವೆಂಪು ವಿ.ವಿ ಸಹ ಸೇರಿದ್ದು ವಿಶ್ವವಿದ್ಯಾಲಯದಲ್ಲಿ ಹರ್ಷ ಮೂಡಿಸಿದೆ.

ಕರ್ನಾಟಕದಲ್ಲಿ ಕುವೆಂಪು ವಿ.ವಿ ಜೊತೆಗೆ ಜೈನ್, ಯೆನೋಪಾಯ ಮತ್ತು ಮೈಸೂರು ವಿ.ವಿಗಳಿಗೆ ಕೂಡ ಅನುಮತಿ ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ವಾಣಿಜ್ಯ ಕೋರ್ಸುಗಳನ್ನು ಮಾತ್ರ ನಡೆಸಲು ಅನುಮತಿ ದೊರಕಿದ್ದು, ಯೆನೋಪಾಯ ವಿ.ವಿ.ಯು ಬಿ.ಕಾಂ ಪದವಿ ಮಾತ್ರ ಪ್ರಾರಂಭಿಸಬಹುದು.

ಆದರೆ, ಕುವೆಂಪು ವಿ.ವಿ ಯು ಬಿಬಿಎಂ, ಬಿ.ಕಾಂ ಮತ್ತು ಬಿ.ಎ ಸ್ನಾತಕ ಕೋರ್ಸ್‍ಗಳ ಜೊತೆಗೆ ಎಂಬಿಎ, ಎಂಕಾಂ, ಮತ್ತು ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿದೆ.

2020-21ನೇ ಸಾಲಿನಿಂದ ಈ ಎಲ್ಲಾ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕ ಅನುಮತಿ ಪಡೆಯಬೇಕಿಲ್ಲ ಎಂದು ಯುಜಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಕುವೆಂಪು ವಿ.ವಿ ನ್ಯಾಕ್ ನಿಂದ 'ಎ' ಶ್ರೇಣಿ ಪಡೆದಿದ್ದು, ಕೇಂದ್ರ ಸರ್ಕಾರದ ಎನ್ಐಆರ್ ಎಫ್ ನಲ್ಲಿ 73ನೇ ರ‍್ಯಾಂಕ್ ಪಡೆದಿದೆ.

ಇತ್ತೀಚಿಗೆ ತಾನೆ ಬಿಡುಗಡೆಯಾದ ಸೈಮಾಗೋ ರ್ಯಾಂಕಿಂಗ್‍ನಲ್ಲಿ 56ನೇ ಸ್ಥಾನ ಪಡೆದು ದೇಶದ ಮಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಲಿದೆ. ಈಗಾಗಲೇ ವಿಶ್ವವಿದ್ಯಾಲಯವು ಆನ್​​ಲೈನ್ ಕೋರ್ಸ್​​​ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಕೋವಿಡ್-19 ಮಹಾಮಾರಿ ಉನ್ನತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಎಷ್ಟು ನಿಜವೋ, ಹೊಸ ಸಾಧ್ಯತೆಗಳ ಕಡೆಗೆ ಚಿಂತಿಸುವಂತೆ ಮಾಡಿರುವುದು ಅಷ್ಟೇ ನಿಜ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಅಂತರ್ಜಾಲ ತಂತ್ರಜ್ಞಾನದ ಕಡೆಗೆ ವಾಲಿರುವುದು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು.

ಈ ಹಿನ್ನೆಲೆಯಲ್ಲಿ ಮಲೆನಾಡಿನ ಶಿಕ್ಷಣಾರ್ಥಿಗಳ ಮನೆಬಾಗಿಲಿಗೆ ಉನ್ನತ ಶಿಕ್ಷಣವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಆನ್‍ಲೈನ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಅವಕಾಶ ದೊರಕಿರುವ ದೇಶದ ಕೆಲವೇ ವಿ.ವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಒಂದು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.