ಕಲಬುರಗಿ: ರಾಜ್ಯದಲ್ಲಿ ಇಂದಿನಿಂದ ದೇವಸ್ಥಾನಗಳ ಬಾಗಿಲು ತೆರೆಯಲಾಗಿದೆ. ಆದ್ರೆ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ಮತ್ತು ಘತ್ತರಗಿ ಭಾಗಮ್ಮ ದೇವಸ್ಥಾನಗಳ ಬಾಗಿಲು ಮಾತ್ರ ಇನ್ನೂ ಹದಿನೈದು ದಿನಗಳ ಕಾಲ ಬಂದ್ ಇರಲಿದೆ.
ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಮತ್ತು ಘತ್ತರಗಿ ಭಾಗಮ್ಮ ದೇವಸ್ಥಾನಗಳಿಗೆ ಕರ್ನಾಟಕದ ಭಕ್ತರಿಗಿಂತ ಹೆಚ್ಚಾಗಿ ಮಹಾರಾಷ್ಟ್ರದ ಭಕ್ತರು ನಡೆದುಕೊಳ್ಳುತ್ತಾರೆ. ಎರಡೂ ದೇವಸ್ಥಾನಗಳ ಬಾಗಿಲು ತೆರೆದರೆ ಮಹಾರಾಷ್ಟ್ರದ ಜನತೆ ಬರುವ ಸಾಧ್ಯತೆ ಇದೆ.
ಆದ್ರೆ ಮಹಾರಾಷ್ಟ್ರದಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ಅಲ್ಲಿಯ ಜನ ಬರಲು ಆರಂಭಿಸಿದ್ರೆ ಜಿಲ್ಲೆಗೆ ಕೊರೊನಾ ಕಂಟಕ ಉಲ್ಬಣಿಸಿಲಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಎರಡೂ ದೇಗುಲಗಳ ಬಾಗಿಲನ್ನು ಇನ್ನೂ ಹದಿನೈದು ದಿನ ತೆರೆಯದಿರಲು ನಿರ್ಧಾರ ಕೈಗೊಂಡಿದೆ.
ಇನ್ನುಳಿದಂತೆ ಜಿಲ್ಲೆಯ ಶರಣ ಬಸವೇಶ್ವರ ದೇವಸ್ಥಾನ ಸೇರಿ ಇತರೆ ದೇವಸ್ಥಾನಗಳು ತೆರೆದಿದ್ದು, ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿ ದರ್ಶನ ಪಡೆಯಬಹುದಾಗಿದೆ.
ಶರಣರ ನಾಡಿನ ಈ ಎರಡು ದೇವಸ್ಥಾನಗಳಲ್ಲಿ ಇನ್ನೂ 15 ದಿನ ಇರಲ್ಲ ದರ್ಶನ ಭಾಗ್ಯ! - Kalaburagi temples closed
ಮಹಾರಾಷ್ಟ್ರ ಭಕ್ತರು ಹೆಚ್ಚಾಗಿ ಬರುವ ಹಿನ್ನೆಲೆ ಗಾಣಗಾಪುರ ದತ್ತಾತ್ರೇಯ ಮತ್ತು ಘತ್ತರಗಿ ಭಾಗಮ್ಮ ದೇವಸ್ಥಾನಗಳ ಬಾಗಿಲನ್ನು ಇನ್ನೂ ಹದಿನೈದು ದಿನಗಳ ಕಾಲ ತೆರೆಯದಿರಲು ಕಲಬುರಗಿ ಜಿಲ್ಲಾಡಳಿತ ನಿರ್ಧರಿಸಿದೆ.