ETV Bharat / briefs

ಐಪಿಎಲ್​ ಫೈನಲ್​: ಚಾಂಪಿಯನ್​ ಪಟ್ಟಕ್ಕಾಗಿ ಕಾದಾಡಲಿದ್ದಾರೆ ಈ ಅಣ್ಣ-ತಮ್ಮಂದಿರು! - ಸಿಎಸ್​ಕೆ

ಮುಂಬೈ ಹಾಗೂ ಚೆನ್ನೈ ತಂಡದ ಉತ್ತಮ ಪ್ರದರ್ಶನ ನೀಡುತ್ತಿರುವ ಚಹಾರ್​ ಸಹೋದರರು ಇಂದು ಚಾಂಪಿಯನ್​ ಪಟ್ಟಕ್ಕಾಗಿ ಹೋರಾಡಲಿದ್ದಾರೆ.

deepak
author img

By

Published : May 12, 2019, 1:41 PM IST

Updated : May 12, 2019, 1:50 PM IST

ಹೈದರಾಬಾದ್​: ಸಿಎಸ್​ಕೆ ತಂಡದ ಆರಂಭಿಕ ಬೌಲರ್​ ಆಗಿ ಯಶಸ್ವಿ ಕಂಡಿರುವ ದೀಪಕ್​ ಚಹಾರ್ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ಸ್ಪಿನ್​ ಬೌಲರ್​ ರಾಹುಲ್​ ಚಹಾರ್​ ಇಂದು ಫೈನಲ್​ ಕದನದಲ್ಲಿ ಎದುರಾಗುತ್ತಿದ್ದಾರೆ.

ಒಂದೇ ಕುಟುಂಬದವರಾದ ದೀಪಕ್ ತಂದೆ ಹಾಗೂ ರಾಹುಲ್ ತಂದೆ ಸಹೋದರಾಗಿದ್ದು, ದೀಪಕ್​ ತಂದೆ ಲೋಕೇಂದ್ರಸಿಂಗ್​ ದೀಪಕ್​ ಹಾಗೂ ರಾಹುಲ್​ರನ್ನು ಕ್ರಿಕೆಟಿಗರನ್ನಾಗಿ ಮಾಡುವ ದೃಷ್ಟಿಯಿಂದ ಭಾರತೀಯ ವಾಯುಸೇನೆಯ ತಮ್ಮ ಕೆಲಸಕ್ಕೆ ನಿವೃತ್ತಿ ಘೋಷಿಸಿ, ಈ ಇಬ್ಬರು ಮಕ್ಕಳನ್ನು ಪ್ರತಿಭಾವಂತ ಕ್ರಿಕೆಟರ್​ಗಳಾಗಿ ರೂಪಿಸಿದ್ದಾರೆ.

ಈ ಇಬ್ಬರು ಪುಣೆ ಸೂಪರ್​ ಜೇಂಟ್ಸ್​ ತಂಡದ ಪರ ಒಟ್ಟಾಗಿ ಆಡಿದ್ದರು. ಆದರೆ ಈ ಆವೃತ್ತಿಯಲ್ಲಿ ದೀಪಕ್​ ಸಿಎಸ್​ಕೆ ಪರ, ರಾಹುಲ್​ ಮುಂಬೈ ಇಂಡಿಯನ್ಸ್​ ಪರ ಆಡುತ್ತಿದ್ದಾರೆ. ದ್ರಾವಿಡ್​ ಗರಡಿಯಲ್ಲಿ ಪಳಗಿರುವ ಈ ಇಬ್ಬರು ಪ್ರಥಮ ದರ್ಜೆ ಕ್ರಿಕೆಟ್​, ಲಿಸ್ಟ್​ ಎ ಕ್ರಿಕೆಟ್​ ಹಾಗೂ ಇಂಡಿಯಾ ಎ ತಂಡದ ಪರವಾಗಿ ಒಂದಾಗಿ ಆಡಿದ್ದಾರೆ. ಆದರೆ ಇಂದು ಚಹಾರ್​ ಬ್ರದರ್ಸ್​ ಚಾಂಪಿಯನ್​ ಪಟ್ಟಕ್ಕಾಗಿ ಪ್ರತ್ಯೇಕ ತಂಡಗಳಾಗಿ ಹೋರಾಡಲಿದ್ದಾರೆ. ದೀಪಕ್​ ಚಹಾರ್​ 16 ಪಂದ್ಯಗಳಲ್ಲಿ 19 ವಿಕೆಟ್​ ಪಡೆದಿದ್ದಾರೆ. ಸಹೋದರ ರಾಹುಲ್​ ಚಹಾರ್​ 12 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ.

ಇವರಿಬ್ಬರ ಸಹೋದರಿ ಮಾಲತಿ ಚಹಾರ್​ ಎಂಎಸ್​ ಧೋನಿಯ ಕಟ್ಟಾ ಅಭಿಮಾನಿಯಾಗಿದ್ದು ಇಂದು ಐಪಿಎಲ್​ನ ಅಷ್ಟು ಪಂದ್ಯಗಳಲ್ಲೂ ಸಿಎಸ್​ಕೆ ತಂಡವನ್ನೇ ಬೆಂಬಲಿಸಿದ್ದಾರೆ.

Intro:Body:Conclusion:
Last Updated : May 12, 2019, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.