ETV Bharat / briefs

ನ್ಯಾಯಾಲಯದ ವಾರಂಟ್ ಉಲ್ಲಂಘನೆ; ಸೌರ ಹಗರಣದ ಆರೋಪಿ ಸರಿತಾ ನಾಯರ್ ಬಂಧನ

ಸೌರ ಹಗರಣ ಪ್ರಕರಣದಲ್ಲಿ ವಾರಂಟ್ ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಕಾರಣ ಆರೋಪಿ ಸರಿತಾ ಎಸ್ ನಾಯರ್ ಅವರನ್ನು ಬಂಧಿಸಲಾಗಿದೆ.

saritha nair
saritha nair
author img

By

Published : Apr 22, 2021, 4:02 PM IST

ಕೋಯಿಕ್ಕೋಡ್​ (ಕೇರಳ): ಸೌರ ಹಗರಣದ ಆರೋಪಿ ಸರಿತಾ ಎಸ್ ನಾಯರ್ ನ್ಯಾಯಾಲಯದ ವಾರಂಟ್ ಉಲ್ಲಂಘಿಸಿದ ಕಾರಣ ಆಕೆಯನ್ನು ಬಂಧಿಸಲಾಗಿದೆ.

ಪ್ರಕರಣ ಕುರಿತಾಗಿ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್​ ವಾರಂಟ್ ಹೊರಡಿಸಿತ್ತು. ಆದರೆ, ಆಕೆ ವಾರಂಟ್​ ಉಲ್ಲಂಘಿಸಿ, ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹಾಗಾಗಿ ಆಕೆಯನ್ನು ಕೊಯಿಕ್ಕೋಡ್​​ನ ಕಸಾಬಾ ಪೊಲೀಸರು ಬಂಧಿಸಿದ್ದಾರೆ.

ಕೋಯಿಕ್ಕೋಡ್​ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ರ ಆದೇಶದಂತೆ ಈ ಬಂಧನ ಮಾಡಲಾಗಿದೆ. ಕೋಯಿಕ್ಕೋಡ್​ ಮೂಲದ ಅಬ್ದುಲ್ ಮಜೀದ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಆಕೆಗೆ ವಾರಂಟ್ ಹೊರಡಿಸಿತ್ತು.

ಏನಿದು ಪ್ರಕರಣ:

ಕೋಯಿಕ್ಕೋಡ್​ ಮೂಲದ ಅಬ್ದುಲ್ ಮಜೀದ್ ಅವರಿಗೆ ಸೌರಫಲಕಗಳನ್ನು ಹಾಕಿ ಕೊಡುತ್ತೇವೆ ಎಂದು ಹೇಳಿ 42.7 ಲಕ್ಷ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ಸೌರ ಕಂಪನಿಯು ಸಿಲುಕಿಕೊಂಡಿದೆ. ಕಂಪನಿಯು ಮಜೀದ್​ ಮನೆ ಮತ್ತು ಕಚೇರಿಯಲ್ಲಿ ಸೌರ ಫಲಕವನ್ನು ಸ್ಥಾಪಿಸಿಕೊಡುತ್ತೇವೆ ಎಂದು ಹೇಳಿ ವಂಚನೆ ಮಾಡಿದೆ. ಅಲ್ಲದೇ 42.7 ಲಕ್ಷ ರೂ ಹಣ ಮುಂಗಡ ಪಡೆದು ಮೋಸ ಮಾಡಿದ್ದಾರೆ ಎಂದು ಮಜೀದ್ ಆರೋಪಿಸಿದ್ದಾರೆ.

ನಾಯರ್ ಮಜೀದ್​ನಿಂದ 42.7 ಲಕ್ಷ ರೂಪಾಯಿ ಹಣ ಪಡೆದ ಆರೋಪವಿದೆ. ಈ ಪ್ರಕರಣವನ್ನು ಮಾರ್ಚ್ 23 ರಂದು ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.