ರಾಯಚೂರು: ಜಿಲ್ಲೆಯ ಸಿಂಧನೂರ ಪಟ್ಟಣದಲ್ಲಿ ಸೋಮವಾರ ಎಸ್‌ಎಫ್‌ಐ ತಾಲೂಕಾಧ್ಯಕ್ಷ ಚೇತನ್ ಕಿಲ್ಲೇದ್ (25) ಕೆಲಸ ಮಾಡುವ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದಾರೆ.
![rch](https://etvbharatimages.akamaized.net/etvbharat/prod-images/kn-rcr-01-04-shankebite-photo1-7202440_04062019075453_0406f_1559615093_662.jpg)
ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ಬಳಿ ಈ ಘಟನೆ ನಡೆದಿದೆ. ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಹಾವಿನ ವಿಷ ದೇಹದಲ್ಲಿ ಆವರಿಸಿಕೊಂಡ ಪರಿಣಾಮ ಅವರು ಕೊನೆಯುಸಿರೆಳೆದರು. ಹಲವು ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದ್ದರು.