ETV Bharat / briefs

ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರು ಮಾರುಕಟ್ಟೆ... ನಲ್ವತ್ತು ಸಾವಿರ ಗಡಿ ದಾಟಿದ ಸೆನ್ಸೆಕ್ಸ್...! - ನಿಫ್ಟಿ

ಭಾರತ ಹಾಗೂ ಅಂತಾರಾಷ್ಟ್ರೀಯ ಕೆಲ ವಿಚಾರಗಳು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು ಹೀಗಾಗಿ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಏರಿಕೆಯನ್ನು ದಾಖಲಿಸಿದೆ.

ಷೇರು ಮಾರುಕಟ್ಟೆ
author img

By

Published : Jun 3, 2019, 5:11 PM IST

ಮುಂಬೈ: ವಾರದ ಮೊದಲ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಭರ್ಜರಿ ವಹಿವಾಟು ನಡೆಸಿದೆ. ಈ ಮೂಲಕ ಹೂಡಿಕೆದಾರರಿಗೆ ಮತ್ತಷ್ಟು ಉತ್ತೇಜನ ನೀಡಿದೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಕೆಲ ವಿಚಾರಗಳು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು, ಹೀಗಾಗಿ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಏರಿಕೆಯನ್ನು ದಾಖಲಿಸಿದೆ. ಸೆನ್ಸೆಕ್ಸ್ 553 ಅಂಕಗಳನ್ನು ಹೆಚ್ಚಿಸಿಕೊಂಡು 40,268 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ ಸಹ ಏರು ಹಾದಿಯನ್ನು ಹಿಡಿದಿದ್ದು 166 ಅಂಕ ಏರಿಕೆಯಿಂದ 12,089 ಅಂಕ ದಾಖಲಿಸಿದೆ. ಮೋದಿ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದ ಬಳಿಕ ಡಾಲರ್ ಎದುರು ರೂಪಾಯಿ ಬಲವರ್ಧನೆಯಾಗಿದ್ದು, ಹೂಡಿಕೆದಾರರಲ್ಲಿ ಆಶಾವಾದ ಮೂಡಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಇಳಿಕೆಯೂ ಭಾರತೀಯ ಷೇರು ಮಾರುಕಟ್ಟೆಗೆ ಲಾಭದಾಯಕವಾಗಿ ಪರಿಣಮಿಸಿದೆ.

ನರೇಂದ್ರ ಮೋದಿ ಸರ್ಕಾರ 2ನೇ ಅವಧಿ ಅಧಿಕಾರಕ್ಕೆ ಬಂದಿದ್ದು, ಆರ್ಥಿಕತೆ ವೃದ್ಧಿಗೆ ನೂತನ ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ನಿರೀಕ್ಷೆಯಿಂದ ಹೂಡಿಕೆದಾರರು ವಹಿವಾಟು ನಡೆಸಿದ್ದಾರೆ. ಇಂದಿನ ವಹಿವಾಟಿನಲ್ಲಿ ಹೀರೋ ಮೋಟೊಕಾರ್ಪ್​, ಬಜಾಜ್ ಆಟೋ, ಏಷ್ಯನ್ ಪೈಂಟ್ಸ್, ಇಂಡಸ್​​ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಟಿಸಿಎಸ್, ಹೆಚ್​ಡಿಎಫ್​​ಸಿ ಬ್ಯಾಂಕ್​ ಉತ್ತಮ ಲಾಭ ಪಡೆದಿದೆ. ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶದ ವೇಳೆ ನಲ್ವತ್ತು ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ ಹೊಸ ದಾಖಲೆ ಬರೆದಿತ್ತು. ಇದೀಗ ಇಂದಿನ ವಹಿವಾಟು ಆ ದಾಖಲೆಯನ್ನೂ ಮುರಿದಿದೆ.

Intro:Body:

ನೂತನ ದಾಖಲೆ ಬರೆದ ಭಾರತೀಯ ಷೇರು ಮಾರುಕಟ್ಟೆ... ನಲ್ವತ್ತು ಸಾವಿರ ಗಡಿ ದಾಟಿದ ಸೆನ್ಸೆಕ್ಸ್...!

ಮುಂಬೈ: ವಾರದ ಮೊದಲ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಭರ್ಜರಿ ವಹಿವಾಟು ನಡೆಸಿದೆ. ಈ ಮೂಲಕ ಹೂಡಿಕೆದಾರರಿಗೆ ಮತ್ತಷ್ಟು ಉತ್ತೇಜನ ನೀಡಿದೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಕೆಲ ವಿಚಾರಗಳು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು ಹೀಗಾಗಿ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಏರಿಕೆಯನ್ನು ದಾಖಲಿಸಿದೆ.

ಸೆನ್ಸೆಕ್ಸ್ 553 ಅಂಕಗಳನ್ನು ಹೆಚ್ಚಿಸಿಕೊಂಡು 40,268 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ ಸಹ ಏರುಹಾದಿಯನ್ನು ಹಿಡಿದಿದ್ದು 166 ಅಂಕ ಏರಿಕೆಯಿಂದ 12,089 ಅಂಕ ದಾಖಲಿಸಿದೆ.

ಮೋದಿ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದ ಬಳಿಕ ಡಾಲರ್ ಎದುರು ರೂಪಾಯಿ ಬಲವರ್ಧನೆಯಾಗಿದ್ದು ಹೂಡಿಕೆದಾರರಲ್ಲಿ ಆಶಾವಾದ ಮೂಡಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಇಳಿಕೆಯೂ ಭಾರತೀಯ ಷೇರು ಮಾರುಕಟ್ಟೆಗೆ ಒಳಿತಾಗಿದೆ.

ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿ ಅಧಿಕಾರಕ್ಕೆ ಬಂದಿದ್ದು ಆರ್ಥಿಕತೆ ವೃದ್ಧಿಗೆ ನೂತನ ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ನಿರೀಕ್ಷೆಯಿಂದ ಹೂಡಿಕೆದಾರರು ವಹಿವಾಟು ನಡೆಸಿದ್ದಾರೆ.

ಇಂದಿನ ವಹಿವಾಟಿನಲ್ಲಿ ಹೀರೋ ಮೋಟೊಕಾರ್ಪ್​, ಬಜಾಜ್ ಆಟೋ, ಏಷ್ಯನ್ ಪೈಂಟ್ಸ್, ಇಂಡಸ್​​ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಟಿಸಿಎಸ್, ಹೆಚ್​ಡಿಎಫ್​​ಸಿ ಬ್ಯಾಂಕ್​ ಉತ್ತಮ ಲಾಭ ಪಡೆದಿದೆ.

ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶದ ವೇಳೆ ನಲ್ವತ್ತು ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ ಹೊಸ ದಾಖಲೆ ಬರೆದಿತ್ತು. ಇದೀಗ ಇಂದಿನ ವಹಿವಾಟು ಆ ದಾಖಲೆಯನ್ನು ಮುರಿದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.