ಕಿಶ್ತವಾರ್: ಕಣಿವೆ ರಾಜ್ಯದಲ್ಲಿ ಮಂಗಳವಾರ ಉಗ್ರರ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಆರೆಸ್ಸೆಸ್ ನಾಯಕ ಚಂದ್ರಕಾಂತ್ ಶರ್ಮಾ ಅಸುನೀಗಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರ್ಮಾರ ಆಸ್ಪತ್ರೆಗೆ ನುಗ್ಗಿದ್ದ ಆಗಂತುಕ, ಗಾರ್ಡ್ ಹಾಗೂ ಶರ್ಮಾರ ಮೇಲೆ ಗುಂಡಿನ ಮಳೆಗರೆದಿದ್ದ. ಈ ದಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ರಾಜಿಂದರ್ ಕುಮಾರ್ ಸ್ಥಳದಲ್ಲೇ ಅಸುನೀಗಿದ್ದ.
ಸಂಬಂಧಿತ ಸುದ್ದಿ:
ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಆರ್ಎಸ್ಎಸ್ ನಾಯಕನ ಮೇಲೆ ದಾಳಿ, ಒಬ್ಬನ ಹತ್ಯೆ
ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ್ ಶರ್ಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಗದೆ ಶರ್ಮಾ ಕೊನೆಯುಸಿರೆಳೆದಿದ್ಧಾರೆ.
ಘಟನೆ ನಡೆದ ಕ್ಷಣದಿಂದಲ್ಲೇ ಕಿಶ್ತವಾರ್ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಇಂಟರ್ನೆಟ್ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಎನ್ಸಿಪಿ ನಾಯಕ ಒಮರ್ ಅಬ್ದುಲ್ಲಾ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.