ETV Bharat / briefs

ರೆಮ್ಡಿಸಿವಿರ್ ಔಷಧ ಪೂರೈಕೆ ಮಾಡದ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ: ಅಶ್ವತ್ಥ ನಾರಾಯಣ

ನಮ್ಮ ಕುಟುಂಬ ರಕ್ಷಣೆ ಮಾಡೋ ಕೆಲಸ ಮಾಡಬೇಕು. ನಿಮಗಾಗಿ, ನಿಮ್ಮ ಕುಟುಂಬಕ್ಕೆ, ನಾಡಿಗಾಗಿ ಲಾಕ್​ಡೌನ್ ಮಾಡಲಾಗುತ್ತಿದೆ. ಸ್ವಇಚ್ಛೆಯಿಂದ ಅನವಶ್ಯಕವಾಗಿ ಆಚೆ ಬರದೆ ಮನೆಯಲ್ಲೇ ಇರಬೇಕು. ರೋಗ ಲಕ್ಷಣ ಕಂಡು ಬಂದರೆ ಟ್ರೀಟ್ಮೆಂಟ್ ಪಡೆದುಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

DCM Ashwath Narayan
DCM Ashwath Narayan
author img

By

Published : May 9, 2021, 10:51 PM IST

ಬೆಂಗಳೂರು: ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ರೆಮ್ಡಿಸಿವಿರ್ ಔಷಧ ಪೂರೈಕೆ ಮಾಡದ ಸಿಪ್ಲ, ಜ್ಯುಬಿಲಿಯಂಟ್, ಸಿಂಜಿನ್ ಸಪ್ಲೈ ಕಂಪನಿಗಳಿಗೆ ಇಂದು ನೋಟಿಸ್ ನೀಡಲಾಗಿದೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮ್ಡಿಸಿವಿರ್ ಯಾರಿಗೂ ನೇರವಾಗಿ ಕೊಡಲಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೇರವಾಗಿ ಪೂರೈಸುತ್ತಿದ್ದೇವೆ. ಖಾಸಗಿ ಆಸ್ಪತ್ರೆಯವರ ಪೋರ್ಟಲ್​ನಿಂದ ರಿಕ್ವೆಸ್ಟ್ ಬರುತ್ತಿದೆ. ಅವರಿಗೆ ಮಾತ್ರ ಕೊಡುವ ಕೆಲಸ ಮಾಡಲಾಗ್ತಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ರೆಮ್ಡಿಸಿವಿರ್ ಸಿಗುತ್ತಿರೋ ಎರಡನೇ ರಾಜ್ಯ ನಮ್ಮದು. ಮೇ 10ರಿಂದ 35 ಸಾವಿರ ರೆಮ್ಡಿಸಿವಿರ್ ಬರಲಿದೆ. ಸಪ್ಲೈ‌ನಲ್ಲಿ ಹೆಚ್ಚು ಕಡಿಮೆಯಾಗ್ತಿದೆ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದರು.

ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಕೇಸ್ ದಾಖಲಿಸಲಾಗುವುದು. ಪ್ರತೀ ದಿನ ಎಷ್ಟು ಬರಬೇಕೋ ಬರಲೇಬೇಕು. ಸಿಪ್ಲ, ಜ್ಯುಬಿಲಿಯಂಟ್, ಸಿಂಜಿನ್ ಸಪ್ಲೈ ಕಂಪನಿಗಳಿಗೆ ಇಂದು ನೋಟಿಸ್ ನೀಡಲಾಗಿದೆ ಎಂದರು.

ಪ್ರಸ್ತುತ ಆಕ್ಸಿಜನ್ ಕೊರತೆ ಮತ್ತು ಬೇಡಿಕೆ ಇದೆ. 85ಕ್ಕಿಂತ ಕಡಿಮೆ ಸ್ಯಾಚುರೇಷನ್ ಇರೋರಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಪೂರೈಸುತ್ತೇವೆ. ತೀರಾ ಕಡಿಮೆ ಇರೋರಿಗೆ ಆಕ್ಸಿಜನ್ ಕೊಟ್ಟು, ಆಸ್ಪತ್ರೆಗೆ ಪೂರೈಸಲಾಗುವುದು. 70 ಆಕ್ಸಿಜನ್ ಕಾನ್ಸಟ್ರೇಟರ್ ಕೊಡುವ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಕೋವಿಡ್ ಕೇರ್ ಸೆಂಟರ್ ಬರಲು ಒಪ್ಪೋದಿಲ್ಲ. ಅವರಿಗೆ ಇದನ್ನ ಪೂರೈಸೋ ಕೆಲಸ ಮಾಡಲಾಗುವುದು ಎಂದರು.

ನಮ್ಮ ಕುಟುಂಬ ರಕ್ಷಣೆ ಮಾಡೋ ಕೆಲಸ ಮಾಡಬೇಕು. ನಿಮಗಾಗಿ, ನಿಮ್ಮ ಕುಟುಂಬಕ್ಕೆ, ನಾಡಿಗಾಗಿ ಲಾಕ್​ಡೌನ್ ಮಾಡಲಾಗುತ್ತಿದೆ. ಸ್ವಇಚ್ಛೆಯಿಂದ ಅನವಶ್ಯಕವಾಗಿ ಆಚೆ ಬರದೆ ಮನೆಯಲ್ಲೇ ಇರಬೇಕು. ರೋಗ ಲಕ್ಷಣ ಕಂಡು ಬಂದರೆ ಟ್ರೀಟ್ಮೆಂಟ್ ತಗೋಬೇಕು. ಪ್ರಥಮ ಹಂತದಲ್ಲೇ ಚಿಕಿತ್ಸೆ ಮಾಡಿಕೊಂಡರೆ ಆರೋಗ್ಯಕರವಾಗಿ ಇರಬಹುದು. ಔಷಧಿ, ಮಾತ್ರೆ ಯಾರು ಪಡೆಯುತ್ತಾರೆ ಅವರು ಗುಣಮುಖರಾಗುತ್ತಾರೆ. ಟೆಸ್ಟ್‌ಗೂ ಕಾಯದಂತೆ ಭಾರತ ಸರ್ಕಾರ ತಿಳಿಸಿದೆ. ನಮ್ಮ ರಾಜ್ಯದಲ್ಲಿ ಬಹುತೇಕ ಎಲ್ಲವೂ ಫ್ರೀ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿರೋ ರಾಜ್ಯ ನಮ್ಮದು ಮಾತ್ರ ಎಂದರು.

ಕೊರೊನಾ ಸೋಂಕು ವಿಪರೀತವಾಗಿ ಹರಡುತ್ತಿದೆ. ಸರ್ಕಾರದಿಂದ ಬಹಳಷ್ಟು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅದನ್ನ ಅನುಷ್ಠಾನ ಮಾಡುವ ಕೆಲಸ ಮಾಡುತ್ತಿದ್ದೇವೆ. ಮತ್ತಷ್ಟು ಹೆಚ್ಚಿನ ಮಟ್ಟದಲ್ಲಿ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ ಎಂದರು.

ಬಿಜೆಪಿ ಪಕ್ಷ ಎಲ್ಲರಿಗೂ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಲು, ಪರಿಹಾರ ಚಟುವಟಿಕೆಯಲ್ಲಿ ತೊಡಗಲು ಹಾಗೂ ಸೋಂಕನ್ನ ನಿಯಂತ್ರಿಸಲು ಕಾರ್ಯಕರ್ತರು ಭಾಗವಹಿಸಲು ಸೂಚನೆ ನೀಡಿದೆ. ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಭಾಗಿಯಾಗಿದ್ದಾರೆ. ಎಲ್ಲಾ ರೀತಿಯ ಸಹಾಯ, ಸಹಕಾರ ಮಾಡಲಾಗುತ್ತಿದೆ. ಟ್ರೀಟ್ಮೆಂಟ್, ರಕ್ತ ಪರೀಕ್ಷೆ, ಆಕ್ಸಿಜನ್ ಒದಗಿಸೋ ಕೆಲಸ ಮಾಡಲಾಗುತ್ತಿದೆ. ಅಡುಗೆ ಮಾಡಲಾಗದವರಿಗೆ ಊಟ, ರೇಷನ್ ಪೂರೈಸೋದನ್ನ ಮಾಡಲಾಗುತ್ತಿದೆ. ಹಗಲಿರುಳು ಯಾವುದೇ ಭಯವಿಲ್ಲದೆ ಕೆಲಸ ಮಾಡಲಾಗುತ್ತಿದೆ. ಸೇವಾ ಹೀ ಸಂಘಟನೆ ಹೆಸರಲ್ಲಿ ಒಂದು ವರ್ಷದಿಂದ ಕೆಲಸ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.