ಹೈದರಾಬಾದ್: ಅಮೆರಿಕದ ಪಾಪ್ ತಾರೆ ನಿಕ್ ಜೊನಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಪತ್ನಿ ಪ್ರಿಯಾಂಕಾ ಚೋಪ್ರಾ ಅವರನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಮತ್ತು ನಿಕ್ ಜೊತೆಯಾಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, “ಮಿಸ್ಸಿಂಗ್ ಮೈ ಹಾರ್ಟ್” ಎಂದು ಬರೆದುಕೊಂಡಿದ್ದಾರೆ.
ನಿಕ್ ಈ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಹಾರ್ಟ್ ಇಮೋಜಿಗಳನ್ನು ಕಮೆಂಟ್ ಮಾಡುವ ಮೂಲಕ ಇವರ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಈಗಾಗಲೇ 1.1 ಮಿಲಿಯನ್ ಲೈಕ್ ಗಳಿಸಿದೆ.
ಪ್ರಿಯಾಂಕಾ ಪ್ರಸ್ತುತ ‘ಸಿಟಾಡೆಲ್' ಶೋನ ಚಿತ್ರೀಕರಣದ ನಿಮಿತ್ತ ಲಂಡನ್ಗೆ ತೆರಳಿದ್ದಾರೆ. ಅಮೆಜಾನ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶೋನಲ್ಲಿ 'ಗೇಮ್ ಆಫ್ ಥ್ರೋ' ಸೀಸನ್ನ ಸ್ಟಾರ್ ರಿಚರ್ಡ್ ಮ್ಯಾಡೆನ್ ಕೂಡ ಅಭಿನಯಿಸುತ್ತಿದ್ದಾರೆ.