ETV Bharat / briefs

ದಾನಿಗಳ ನೆರವಿನಿಂದ ತುಮಕೂರಿನಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆ: ಸಚಿವ ಮಾಧುಸ್ವಾಮಿ - ಆಮ್ಲಜನಕ ಸಾಂದ್ರಕ ನೆರವಿನ ಬಗ್ಗೆ ಜೆ ಸಿ ಮಾಧುಸ್ವಾಮಿ ಹೇಳಿಕೆ

ತುಮಕೂರು ಜಿಲ್ಲೆಯಲ್ಲಿ ಅನೇಕ ದಾನಿಗಳು ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದಾರೆ. ಈ ಮೂಲಕ ಜನರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತುಮಕೂರಿನಲ್ಲಿ ಆಕ್ಸಿಜನ್​ ಸಾಂದ್ರಕ ದಾನ
ತುಮಕೂರಿನಲ್ಲಿ ಆಕ್ಸಿಜನ್​ ಸಾಂದ್ರಕ ದಾನ
author img

By

Published : May 27, 2021, 1:03 PM IST

ತುಮಕೂರು: ಕೋವಿಡ್ ನಿರ್ವಹಣೆ ದೃಷ್ಟಿಯಿಂದ ಕ್ವಾರಿ, ಕ್ರಷರ್, ರೈಸ್ ಮಿಲ್ ಮಾಲೀಕರು ಸುಮಾರು 300 ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಆಮ್ಲಜನಕದ ಉತ್ಪಾದನೆಯಿಂದಾಗಿ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಕೋವಿಡ್ ಮೂರನೇ ಅಲೆ ಬಂದರೂ ನಿರ್ವಹಣೆ ಮಾಡುವ ಶಕ್ತಿ ಜಿಲ್ಲಾಡಳಿತಕ್ಕೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಮ್ಲಜನಕ ಸಾಂದ್ರಕಗಳು ಲಭ್ಯವಿರುವಂತೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತುಮಕೂರಿನ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್, ಜಿಲ್ಲಾ ಜಲ್ಲಿ ಕ್ರಷರ್ ಅಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಅಸೋಸಿಯೇಷನ್ ಹಾಗೂ ಮತ್ತಿತರ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನೀಡಿದ್ದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ, ಸರ್ಕಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.

ದುಡಿದ ಹಣದಿಂದ ಸಾರ್ವಜನಿಕ ವಲಯಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ತುರುವೇಕೆರೆ ತಾಲೂಕಿನಲ್ಲಿ ಹೈಡಾಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದೇ ರೀತಿ ಗುಬ್ಬಿಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಲಭ್ಯವಾಗುತ್ತಿದೆ. ವಿಪ್ರೋದವರು ಒಂದು ಘಟಕ ನೀಡಲಿದ್ದಾರೆ. ಇದಲ್ಲದೆ ಜಪಾನಿನ ಟಿಮ್ಯಾಕ್ ಕಂಪನಿಯವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 2 ಕೆಎಲ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ಧಾರೆ. ನಿರೀಕ್ಷೆಗೂ ಮೀರಿ ದಾನಿಗಳಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಮತ್ತು ದಾನಿಗಳ ನೆರವಿನಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ. ಇದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಜಿಲ್ಲಾಡಳಿತ ಸ್ವಯಂ ಶಕ್ತಿ ಹೊಂದಲಿದೆ ಎಂದರು.

ಟಿಎಂಸಿಸಿ ಬ್ಯಾಂಕ್​ನ ಜಯಕುಮಾರ್ ಅವರೂ ಸಹ ಕೋವಿಡ್ ಸಮಸ್ಯೆಯನ್ನು ಎದುರಿಸಲು ನೆರವಿನ ಹಸ್ತ ನೀಡಿದ್ದಾರೆ. ಅವರು ತುಮಕೂರಿನ ಸ್ಮಶಾನ ಭೂಮಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಸುಡುವ ಕಾರ್ಯಕ್ಕೆ ಆರು ಒಲೆಗಳ ನೆರವು ನೀಡಿದ್ದಾರೆ. ರುದ್ರಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಅವರೇ ವಹಿಸಿಕೊಂಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.