ಮುಂಬೈ(ಮಹಾರಾಷ್ಟ್ರ): ಅರಬ್ಬೀ ಸಮುದ್ರದಲ್ಲಿ ಎದ್ದ ತೌಕ್ತೆ ಚಂಡಮಾರುತದಿಂದಾಗಿ ಕೊಂಕಣ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಚಂಡಮಾರುತವು ಮೇ 16ರಂದು ಕರ್ನಾಟಕ, ಕೇರಳದ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಚಂಡಮಾರುತದ ಪರಿಣಾಮಗಳು ಕಂಡು ಬರಲಿವೆ. ಇದರ ಪರಿಣಾಮ ಮಹಾರಾಷ್ಟ್ರಕ್ಕೂ ಇರುವುದರಿಂದ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.