ಸುರಪುರ: ತಾಲೂಕಿನ ಕೆಂಭಾವಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಸಾಂಕೇತಿಕ ಪ್ರತಿಭಟನೆ ನಡೆಸಿ ಅಯೋಧ್ಯೆಯಲ್ಲಿ ದೊರೆತ ಬೌದ್ಧ ಸ್ತೂಪಗಳ ರಕ್ಷಣೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಶರಣಪ್ಪ ಗಾಯಕ್ವಾಡ ಮಾತನಾಡಿ, ಇಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಕಟ್ಟಲು ಮುಂದಾಗಿ ಸ್ಥಳ ಅಗೆಯುವಾಗ ಅನೇಕ ಬುದ್ಧನ ಸ್ತೂಪಗಳ ಸಿಗುತ್ತಿವೆ. ಅವು ಅಶೋಕ ಚಕ್ರವರ್ತಿಯ ಕಾಲದ ಸ್ತೂಪಗಳಿರಬಹುದು ಎಂದು ಅನೇಕರು ಅಂದಾಜಿಸುತ್ತಿದ್ದಾರೆ. ಇದರಿಂದ ತಿಳಿಯುತ್ತಿದೆ ಈ ಸ್ಥಳ ಬುದ್ಧನ ಸ್ಮಾರಕಕ್ಕೆ ಸಂಬಂಧಿಸಿದ್ದಾಗಿದೆ.
ಆದ್ದರಿಂದ ಸರ್ಕಾರ ಕೂಡಲೆ ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯವನ್ನು ಸ್ಥಗಿತಗೊಳಿಸಿ ಈಗ ದೊರೆತಿರುವ ಬುದ್ಧನ ಸ್ತೂಪಗಳನ್ನು ಸಂರಕ್ಷಣೆ ಮಾಡಬೇಕು, ಇಲ್ಲವಾದರೆ ರಾಷ್ಟ್ರದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಂಭಾವಿ ಹೋಬಳಿಯ ಉಪ ತಹಸೀಲ್ದಾರ್ ಕಚೇರಿ ಮುಂದೆ ಸೇರಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸ್ತೂಪಗಳ ರಕ್ಷಣೆಗೆ ಆಗ್ರಹಿಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದರು.
ಅಯೋಧ್ಯೆಯಲ್ಲಿ ದೊರೆತ ಬುದ್ದನ ಸ್ತೂಪಗಳನ್ನು ರಕ್ಷಿಸಿ : ದ.ಸಂ.ಸ ಪ್ರತಿಭಟನೆ
ಶ್ರೀ ರಾಮ ಮಂದಿರ ಕಟ್ಟಲು ಮುಂದಾಗಿ ಸ್ಥಳ ಅಗೆಯುವಾಗ ಸಿಕ್ಕಿ ಬುದ್ಧನ ಸ್ತೂಪಗಳನ್ನು ರಕ್ಷಿಸಿ, ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.